Udayavni Special

ಆಷಾಢ ಶುಕ್ರವಾರ: ದೇವಿಗೆ ದುರ್ಗಾಲಂಕಾರ


Team Udayavani, Jul 11, 2020, 5:19 AM IST

ashdha-shukra

ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾ ಯಿಕವಾಗಿ ಪೂಜಾ ಕೈಂಕರ್ಯಗಳು ನೆರವೇರಿದವು. ಕೋವಿಡ್‌ 19 ವೈರಸ್‌ ಸೋಂಕು ಹರಡುವ ಭೀತಿ ಯಿಂದ ಮೂರನೇ ಆಷಾಢ  ಶುಕ್ರವಾರವೂ ಚಾಮುಂಡೇಶ್ವರಿಯ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷಿತ್‌ ಸಮ್ಮುಖದಲ್ಲಿ ಪೂಜೆ ಕೈಂಕರ್ಯಗಳು ನೆರವೇರಿದವು.

ಪ್ರತಿ ವರ್ಷದ  ಆಷಾಢ ಮಾಸದ ಶುಕ್ರವಾರ ಗಳಂದು ಬೆಳಗಿನ ಜಾವ 5.30ರಿಂದ ರಾತ್ರಿ 10 ರವರೆಗೂ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಜೊತೆಗೆ ಲಕ್ಷಾಂತರ ಮಂದಿ ಭಕ್ತರು, ಗಣ್ಯರು ಬೆಟ್ಟಕ್ಕೆ ಆಗಮಿಸಿ  ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ದೇವಾಲಯದ ಬಾಗಿಲು ಬಂದ್‌ ಮಾಡಲಾಯಿತು. ಆಷಾಢದ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ದೇವಸ್ಥಾನ  ಫ‌ಲಪುಷ್ಪಗಳಿಂದ ಸಿಂಗಾರಗೊಂಡಿತ್ತು. ಅಲ್ಲದೇ ಧಾರ್ಮಿಕ -ವಿಧಿ ವಿಧಾನಗಳು ಪ್ರತಿ ವರ್ಷದ ಆಷಾಢ ಮಾಸದಂತೆ ಈ ಬಾರಿಯೂ ನಡೆಯಿತು.

ಮನೆಗಳಲ್ಲೇ ಪ್ರಾರ್ಥಿಸಿ: ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್‌ ದೀಕ್ಷಿತ್‌  ಮಾತನಾಡಿ, ಆಷಾಢ ಮಾಸದ ಮೂರನೇ ಶುಕ್ರವಾರ ಪ್ರತಿ ವರ್ಷದಂತೆ ಬೆಳಗ್ಗೆ 3.30ರಿಂದ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ತಾಯಿಗೆ ವಿಶೇಷ ಅಲಂಕಾರ ಮಾಡಿದ್ದೇವೆ. ಮೂರನೇ ಆಷಾಢದ ಪ್ರಯುಕ್ತ ದುರ್ಗಾಲಂಕಾರ ಮಾಡಿ  ಪೂಜೆ ಮಾಡಿ ದ್ದೇವೆ. ಧಾರ್ಮಿಕ ಕೈಂಕರ್ಯಗಳು ನಡೆದು ಕೊಂಡು ಹೋಗುತ್ತಿದೆ. ಭಕ್ತಾದಿಗಳು ಮನೆಯಲ್ಲೇ ಇದ್ದುಕೊಂಡು ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಪೂಜೆ ಮಾಡುವಂತೆ ತಿಳಿಸಿದರು.

ಮೇಯರ್‌ ಕಾರಲ್ಲಿ ದರ್ಶನ್‌: ನಟ ದರ್ಶನ್‌ ಚಾಮುಂಡೇಶ್ವರಿ ಬೆಟ್ಟದಕ್ಕೆ ಮೇಯರ್‌ ಕಾರ್‌ನಲ್ಲಿ ಆಗಮಿಸಿದರು. ಕಾರ್‌ನಲ್ಲಿ ಮೇಯರ್‌ ಇರಲಿಲ್ಲ. ದರ್ಶನ್‌ ಒಬ್ಬರೇ ಆಗಮಿಸಿದ್ದು, ಇದು ಎಲ್ಲರ ಗಮನ ಸೆಳೆಯಿತು.

ನಿರ್ಬಂಧದ ನಡುವೆಯೂ ಗಣ್ಯರ ದರ್ಶನ: ಕೋವಿಡ್‌ 19 ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದ್ದರೂ, ಗಣ್ಯರು ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದರು. ಸಚಿವ ಕೆ.ಎಸ್‌.ಈಶ್ವರಪ್ಪ, ಸಂಸದ ಪ್ರತಾಪ್‌ಸಿಂಹ, ಶಾಸಕ  ನಾಗೇಂದ್ರ ಬಿಜೆಪಿ ಕಾರ್ಯಕರ್ತರೊಂದಿಗೆ ಬೆಟ್ಟಕ್ಕೆ ಆಗಮಿಸಿ ನಾಡದೇವತೆ ದರ್ಶನ ಪಡೆದರು. ಜೊತೆಗೆ ಚಿತ್ರನಟ ದರ್ಶನ್‌ ಕೂಡ ದೇವಿ ದರ್ಶನ ಪಡೆದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್‌ 19 ಜಾಗ್ರತೆಯನ್ನು  ಗಣ್ಯರು ಮತ್ತು ಗಣ್ಯರ ಬೆಂಬಲಿಗರು ದೇವಸ್ಥಾನಕ್ಕೆ ಆಗಮಿಸಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಯಿತು.

ಈ ವೇಳೆ ಸಚವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಪ್ರತಿ ವರ್ಷ ಆಷಾಢ ಶುಕ್ರವಾರ ದರ್ಶನ ಪಡೆದು ಪೂಜೆ ಸಲ್ಲಿಸುವುದು  ಪ್ರತೀತಿ. ಹಾಗಾಗಿ ಪ್ರತಿ ಬಾರಿಯಂತೆ ತಾಯಿ ದರ್ಶನ ನಡೆದು ಶೀಘ್ರವೇ ಕೋವಿಡ್‌ 19 ಮುಕ್ತಿ ಮಾಡಿ ಎಂದು ಪ್ರಾರ್ಥಿಸಿದ್ದೇನೆ. ರಾಜ್ಯದಲ್ಲಿ, ಪ್ರಪಂಚದಲ್ಲಿ ಕೋವಿಡ್‌ 19 ಬಹಳ ತೊಂದರೆ ನೀಡುತ್ತಿದೆ. ಇದರಿಂದ ಮಾಡು, ನಾಡು  ಸುಭಿಕ್ಷೆಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 2 ಸಾವು

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ; ಓರ್ವ ಬಲಿ ?

udupi

ಉಡುಪಿ: 219 ಜನರಿಗೆ ಕೋವಿಡ್ ಪಾಸಿಟಿವ್, 1,203 ಮಂದಿಯ ವರದಿ ನೆಗೆಟಿವ್

AKRAMA

ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್

ಕೋವಿಡ್ ಕಳವಳ-ಆಗಸ್ಟ್ 11:  6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಕೋವಿಡ್ ಕಳವಳ-ಆಗಸ್ಟ್ 11: 6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಚಾಮರಾಜನಗರ: 99 ಪ್ರಕರಣಗಳು ಪತ್ತೆ: ಇಬ್ಬರು ಸಾವು

ಚಾಮರಾಜನಗರ: 99 ಕೋವಿಡ್ ಪ್ರಕರಣಗಳು ಪತ್ತೆ: ಇಬ್ಬರು ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು: 258 ಮಂದಿ ಗುಣಮುಖ

ಮೈಸೂರು: 258 ಮಂದಿ ಗುಣಮುಖ

ಪಧಾನಿಗಳ ಕೃಷಿ ಕ್ರಾಂತಿಗೆ ಸಚಿವರ ಅಭಿನಂದನೆ

ಪಧಾನಿಗಳ ಕೃಷಿ ಕ್ರಾಂತಿಗೆ ಸಚಿವರ ಅಭಿನಂದನೆ

ಹಂದಿ ಬೇಟೆಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

ಹಂದಿ ಬೇಟೆಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

Mysuru-tdy-2

ಜಿಲ್ಲೆಯಲ್ಲಿ ಮಳೆ ಅಬ್ಬರ; ಮತ್ತೆ ಪ್ರವಾಹ ಭೀತಿ

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’ಹೊಸ ಸೇರ್ಪಡೆ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 2 ಸಾವು

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ; ಓರ್ವ ಬಲಿ ?

ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್‌

ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್‌

“ಪೊಲೀಸರೇ ನಿಜವಾದ ಕೊರೊನಾ ವಾರಿಯರ್ಸ್‌’

“ಪೊಲೀಸರೇ ನಿಜವಾದ ಕೋವಿಡ್ ವಾರಿಯರ್ಸ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.