Udayavni Special

ಇಂದು ಮತ್ತೆ ಸಂಪೂರ್ಣ ಲಾಕ್‌ಡೌನ್‌

Team Udayavani, May 24, 2020, 4:56 AM IST

city comm

ಮೈಸೂರು: ನಾಲ್ಕನೇ ಹಂತದ ಲಾಕ್‌ಡೌನ್‌ ನಲ್ಲಿ ಕೆಲವು ಸಡಿಲಿಕೆಯಿಂದಾಗಿ ಸಹಜ ಸ್ಥಿತಿಗೆ ಮರಳಿದ್ದ ಮೈಸೂರು ಭಾನುವಾರ ಮತ್ತೆ ಲಾಕ್‌ ಆಗಲಿದೆ. ಮೇ 31ರವರೆಗೆ ಪ್ರತಿ ಭಾನುವಾರದಂದು ಲಾಕ್‌ಡೌನ್‌ ಮಾಡಲು ರಾಜ್ಯ ಸರ್ಕಾರ  ನಿರ್ಧರಿಸಿರುವುದರಿಂದ ಜಿಲ್ಲೆ ಮತ್ತೆ ಸ್ತಬಟಛಿವಾಗಲಿದೆ. ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಮಾ.24ರಿಂದ ಜಾರಿಯಾದ ಲಾಕ್‌ಡೌನ್‌ 4ನೇ ಹಂತ ತಲುಪಿದೆ. ಮೊದಲ ಮೂರು ಹಂತಗಳಲ್ಲಿ ಕಟ್ಟುನಿಟ್ಟಿನಿಂದ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಇದಕ್ಕೆ ಜನರೂ ಸಹ ಬೆಂಬಲ ನೀಡುವ ಮೂಲಕ ಎಲ್ಲಾ ಆದೇಶಗಳನ್ನು ಪಾಲನೆ ಮಾಡಿದ್ದರು.

ಓಡಾಟ ನಿರ್ಬಂಧ: ಮೇ 18ರಿಂದ 31ರವರೆಗೆ ಜಾರಿಯಾದ 4ನೇ ಹಂತದ ಲಾಕ್‌ ಡೌನ್‌ನಲ್ಲಿ ಕೆಲ ಸಡಿಲಿಕೆ ಮಾಡಲಾಗಿ ದೆ. ಆದರೆ, ಸೋಂಕು ಈ ಅವಧಿಯ  ಪ್ರತಿ ಭಾನುವಾರದಂದು ಸಂಪೂರ್ಣ ಲಾಕ್‌ ಡೌನ್‌ ಮಾಡಲು ರಾಜ್ಯ ಸರ್ಕಾರ  ನಿರ್ಧರಿಸಿರುವುದರಿಂದ ಇಂದು ಮೈಸೂರಿ ನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಾಗಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆ ಹಾಗೂ ವಾಹನ ಸಂಚಾರ ಬಂದ್‌ ಆಗಲಿದೆ.

ಸಾರ್ವಜನಿಕರು ರಸ್ತೆಯಲ್ಲಿ ಓಡಾಡು ವುದಕ್ಕೂ ನಿರ್ಬಂಧ ಹೇರಲಾಗಿದೆ. ಸರ್ಕಾರಿ, ಖಾಸಗಿ ಬಸ್ಸುಗಳು, ಕಾರು, ಆಟೋ, ದ್ವಿಚಕ್ರ ವಾಹನ ಸೇರಿದಂತೆ ಅಗತ್ಯ  ಸೇವೆ ನೀಡುವ ವಾಹನಗಳನ್ನು ಹೊರತು  ಪಡಿಸಿ, ಎಲ್ಲಾ ರೀತಿಯ ವಾಹನಗಳು ರಸ್ತೆಗಿಳಿಯದಂತೆ ನಿರ್ಬಂಧ  ವಿಧಿಸಲಾಗಿದೆ. ಹೋಟೆಲ್‌ಗ‌ಳು, ಸೆಲೂನ್‌ಗಳು, ಬಾರ್‌ ಗಳು, ರೆಸ್ಟೋರೆಂಟ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌, ಮಾಲ್‌ಗ‌ಳು, ಟೀ ಸ್ಟಾಲ್ಸ್‌, ಫ‌ುಟ್‌ ಪಾತ್‌ ವೆಂಡರ್, ಪಾನ್‌ ಶಾಪ್ಸ್‌ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್‌ ಆಗಲಿವೆ.

ಕೇವಲ ದಿನಸಿ,  ತರಕಾರಿ, ಹಾಲು, ಔಷಧ, ಆರೋಗ್ಯ ಸೇವೆ, ಮಾಂಸ ಸೇರಿದಂತೆ ತುರ್ತು ಸೇವೆಗಳ ಅಂಗಡಿಗಳು ಮಾತ್ರ ತೆರೆಯಲಿವೆ.  ಪೆಟ್ರೋಲ್‌ ಬಂಕ್‌ ಸಹ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಎಲ್ಲಾ ಅಂಗಡಿ  ಗಳು ಬೆಳಗ್ಗೆ 7ರಿಂದ ಸಂಜೆ 7  ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.  ಗರದ ಎಲ್ಲಾ ಮಾರುಕಟ್ಟೆಗಳು, ಉದ್ಯಾನವನಗಳು, ಆಟದ ಮೈದಾನಗಳು ಬಂದ್‌ ಆಗಲಿದ್ದು, ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತದಂತೆ ಹಾಗೂ ಎಲ್ಲಾ ರೀತಿಯ  ವ್ಯಾಪಾರ ವ್ಯವಹಾರಗಳು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

ಅಂಗಡಿ ತೆರೆಯುವಂತಿಲ್ಲ: ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಕರ್ಪೂ ಜಾರಿಯಲ್ಲಿರಲಿದ್ದು, ಹಾಲು, ತರಕಾರಿ, ದಿನಸಿ, ಆರೋಗ್ಯ ಮತ್ತು  ಹೋಟೆಲ್‌ ಪಾರ್ಸೆಲ್‌ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ಅಂಗಡಿ ಮುಂಗಟ್ಟು ಮಳಿಗೆಗಳನ್ನು ತೆರೆಯುವಂತಿಲ್ಲ. ಯಾವುದೇ ವಾಣಿಜ್ಯ ಅಂಗಡಿ -ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಮದ್ಯದಂಗಡಿಗಳನ್ನು ಕೂಡ  ತೆರೆಯುವಂತಿಲ್ಲ. ತೆರೆದಲ್ಲಿ ಕ್ರಮ ಕೈಗೊಳ್ಳ ಲಾಗುವುದು. ಈಗಾಗಲೇ ಈ ಕುರಿತು ಸೂಚನೆ ನೀಡಿದ್ದೇವೆ ಎಂದರು.

ಮೈಸೂರಿಗೆ ಪ್ರವೇಶ ಕಲ್ಪಿಸುವ ಚೆಕ್‌ಪೋಸ್ಟ್‌ ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೊರ ರಾಜ್ಯದಿಂದ 700ಕ್ಕೂ ಹೆಚ್ಚು ಮಂದಿ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಕ್ವಾರೆಂಟೈನ್‌ ಮಾಡಲಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ಅನಗತ್ಯ ಪಾಸ್‌ ವಿತರಣೆಗೆ ಬ್ರೇಕ್‌ ಹಾಕಲಾಗಿದೆ.
-ಡಾ.ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ಭೇಟಿ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಮೂರನೇ ಪರೀಕ್ಷೆಯಲ್ಲಿ ಸಚಿವ ಸಿ.ಟಿ.ರವಿಗೆ ಕೋವಿಡ್ ಪಾಸಿಟಿವ್ ದೃಢ

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್

ಗ್ಯಾಬ್ರಿಯಲ್, ಬ್ಲ್ಯಾಕ್ ವುಡ್ ಬೊಂಬಾಟ್ ಆಟ: ಐತಿಹಾಸಿಕ ಗೆಲುವು ದಾಖಲಿಸಿದ ವಿಂಡೀಸ್

ಬೆಂಗಳೂರಲ್ಲಿ ಸ್ವಪ್ನಾ ಪತ್ತೆಯಾಗಿದ್ದು ಹೇಗೆ?

ಬೆಂಗಳೂರಲ್ಲಿ ಸ್ವಪ್ನಾ ಪತ್ತೆಯಾಗಿದ್ದು ಹೇಗೆ?

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಲೆಗಳಿಗೆ ನೀರು ಹರಿಸಲು ಶೀಘ್ರ ಸಭೆ

ನಾಲೆಗಳಿಗೆ ನೀರು ಹರಿಸಲು ಶೀಘ್ರ ಸಭೆ

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

ಸಿದ್ದರಾಮಯ್ಯ ವಿಧಾನಸೌಧಕ್ಕೆ ಬಂದರೆ ಅಗತ್ಯ ದಾಖಲೆ ನೀಡುತ್ತೇವೆ: ಎಸ್‍.ಟಿ.ಸೋಮಶೇಖರ್

ಸಿದ್ದರಾಮಯ್ಯ ವಿಧಾನಸೌಧಕ್ಕೆ ಬಂದರೆ ಅಗತ್ಯ ದಾಖಲೆ ನೀಡುತ್ತೇವೆ: ಎಸ್‍.ಟಿ.ಸೋಮಶೇಖರ್

ashdha-shukra

ಆಷಾಢ ಶುಕ್ರವಾರ: ದೇವಿಗೆ ದುರ್ಗಾಲಂಕಾರ

shukra 4

ಶುಕ್ರವಾರವೂ 4 ಸೋಂಕಿತರು ಸಾವು

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

ನೆಲಮಂಗಲ: ಶೂನಲ್ಲಿದ್ದ ನಾಗರ ಹಾವಿನ ಮರಿ ರಕ್ಷಣೆ

ನೆಲಮಂಗಲ: ಶೂನಲ್ಲಿದ್ದ ನಾಗರ ಹಾವಿನ ಮರಿ ರಕ್ಷಣೆ

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಸಂಪೂರ್ಣ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಿ: ದೇವೇಗೌಡ ಆಗ್ರಹ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ಭೇಟಿ

ಕುಖ್ಯಾತ ಪಾತಕಿ ವಿಕಾಸ್‌ ದುಬೆ ಗ್ರಾಮಕ್ಕೆ ಎಸ್‌ಐಟಿ ತಂಡ ಭೇಟಿ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್: ರಕ್ಷಣಾ ಕಾರ್ಯ

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

ಪಕ್ಷದ ಶಿಸ್ತು ಮೀರಿದರೆ ಕಠಿನ ಕ್ರಮ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.