ಕಾರ್ಖಾನೆಗಳು ಉದ್ಯಾನವನ ನಿರ್ವಹಿಸಲಿ

Team Udayavani, May 31, 2020, 4:58 AM IST

udyana park

ಮೈಸೂರು: ನಗರದ ಬಡಾವಣೆ, ಪಾರ್ಕ್‌ಗಳು ಸೇರಿದಂತೆ ಒಂದೊಂದು ಕಡೆ ಎಷ್ಟು ಗಿಡಗಳನ್ನು ನೆಡಬಹುದು, ಅವುಗಳ ನಿರ್ವಹಣೆ ಹೊಣೆಯನ್ನು ಬಡಾವಣೆಗಳ ಅಸೋಸಿಯೇಷನ್‌ ಇಲ್ಲವೇ ಸಮೀಪ ಇರುವ ಕಾರ್ಖಾನೆಗಳಂತಹ  ಖಾಸಗಿಯವರ ಸುಪರ್ದಿಗೂ ವಹಿಸಿ, ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಜೂನ್‌ 5ರ ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,  ವಿವಿಯಲ್ಲಿ ಎಷ್ಟು ಗಿಡಗಳನ್ನು ನೆಡಬಹುದು,

ಈ ಬಾರಿ ನೀವು ಎಷ್ಟು ಗಿಡಗಳನ್ನು ನೆಡುತ್ತೀರಿ ಎಂಬ ನಿಗದಿತ ಗುರಿ ಹಾಕಿಕೊಂಡು ಕಾರ್ಯನಿರ್ವಹಿಸಿ. ಹೇಳುವ ಲೆಕ್ಕವೊಂದು, ನೆಡುವ ಲೆಕ್ಕ ಇನ್ನೊಂದು ಆಗಬಾರದು ಎಂದರು.  ಇನ್ನೊಂದು ಪ್ರಮುಖ ಸಂಗತಿಯೆಂದರೆ ನಗರ ಪಾಲಿಕೆಗೆ ಎಷ್ಟು ಗಿಡ ಹಾಗೂ ಯಾವ ಯಾವ ಜಾತಿ, ತಳಿಯ ಗಿಡಗಳನ್ನು ನೆಡಬೇಕು ಎಂಬ ಬಗ್ಗೆ ಸರಿಯಾಗಿ ಯೋಜನೆ ರೂಪಿಸಿದರೆ, ಈ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ನರೇಗಾ ಸದುಪಯೋಗವಾಗಲಿ: ಇತ್ತ ಸಾರ್ವಜನಿಕರಿಗೆ ಉದ್ಯೋಗವೂ ಸಿಗಬೇಕು, ಅತ್ತ ಜಿಲ್ಲೆ ಹಸಿರೀಕರಣವೂ ಆಗಬೇಕು ಎಂಬ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಬೇಕು.  ಈಗ ನಿರ್ಧಾರ ಮಾಡಲಾಗಿರುವಂತೆ ನರೇಗಾ ಯೋಜನೆಯಲ್ಲಿ ಗಿಡಗಳನ್ನು ನೆಡುವುದು  ಉತ್ತಮ ಕಾರ್ಯಕ್ರಮ. ಆದರೆ, ಇದು ಕೇವಲ ಪೇಪರ್‌ ವರ್ಕ್‌ ರೀತಿ ಆಗಬಾರದು. ಕೆಲಸ  ಮಾಡಿದವರಿಗೂ ಹಣ ಸಿಗುವ ಜೊತೆಗೆ ಗಿಡಗಳನ್ನೂ ಸಮರ್ಪಕವಾಗಿ ನೆಡಬೇಕು ಎಂದು  ಸೂಚಿಸಿದರು.

ಗಿಡ ನೆಡುವ ಯೋಜನೆ ಸಿದ್ಧರಾಗಿ: ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ಗಿಡಗಳು ಎಷ್ಟು ಇವೆ, ಯಾವ ಗಿಡಗಳನ್ನು ಯಾವ ಪ್ರದೇಶದಲ್ಲಿ ನೆಡಬೇಕು? ಅವುಗಳನ್ನು ನೆಡಲು ಯಾವ ರೀತಿ ಯೋಜನೆ ಹಾಕಿಕೊಂಡು ಅಧಿಕಾರಿಗಳು ಬಂದಿದ್ದಾರೆ ಎಂಬುದು ಮುಖ್ಯ. ವಿದ್ಯುತ್‌ ತಂತಿಗಳ ಕೆಳಗೆ ಯಾವ ಗಿಡಗಳನ್ನು ಬೆಳೆಸಬೇಕು. ಎಷ್ಟು ಎತ್ತರದ ಗಿಡಗಳನ್ನು ನೆಡಬಹುದು? ಒಮ್ಮೆ ಅವುಗಳು ಬೆಳೆದ ಮೇಲೆ ಮತ್ತೆ ಕಡಿಯುವಂತಾಗಬಾರದು. ಅಲ್ಲದೆ,  ಗಿಡಗಳನ್ನು ಖಾಸಗಿಯವರು ಪ್ರೀತಿಯಿಂದ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಅವುಗಳನ್ನು ನಾವು ಪಡೆದು ಪರಿಸರ ದಿನದಂದು ನೆಟ್ಟು ಸುಮ್ಮನಾಗಿ, ಕೊನೆಗೆ ಅತ್ತ ಮುಖ ಹಾಕದೇ ಇದ್ದರೆ ಮಾಡಿದ ಕೆಲಸ ಸಾರ್ಥಕವಾಗದು. ಇವುಗಳ  ಬಗ್ಗೆ ನಿಗಾ ಬೇಕು ಎಂದರು.

ಕೈಗಾರಿಕೆಗಳಿಗೂ ಜವಾಬ್ದಾರಿ ಕೊಡಿ: ಡೀಸಿ ಅಭಿರಾಮ್‌ ಜಿ. ಶಂಕರ್‌ ಮಾತನಾಡಿ, ಪರಿಸರ ಪೋಷಣೆ ಜವಾಬ್ದಾರಿಯನ್ನು ಕೈಗಾರಿಕೆಗಳಿಗೂ ಕೊಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಖಾಸಗಿಯಾಗಿ ಪಾರ್ಕ್‌ ನಿರ್ವಹಣೆಗಳಂತಹ ಚಟುವಟಿಕೆಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದರು. ಜಿಪಂ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ, ನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಎಂಡಿಎ ಆಯುಕ್ತ ಡಾ.ಡಿ.ಬಿ. ನಟೇಶ್‌, ಡಿಸಿಎಫ್ ಕೆ.ಸಿ. ಪ್ರಶಾಂತ್‌ಕುಮಾರ್‌, ಎಸ್ಪಿ  ಸಿ.ಬಿ. ರಿಷ್ಯಂತ್‌, ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ ಗೌಡ ಇದ್ದರು.

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರ

ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಳೆಯಿಂದ ಸಿಎಫ್ ಟಿಆರ್‌ಐನಲ್ಲಿ ಟೆಕ್‌ ಭಾರತ್‌

ನಾಳೆಯಿಂದ ಸಿಎಫ್ ಟಿಆರ್‌ಐನಲ್ಲಿ ಟೆಕ್‌ ಭಾರತ್‌

2rain

ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ

ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.