ಬಾರ್ ಮಾಲಿಕರಿಗೆ ದಂಡ
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸುತ್ತಿದ್ದ ಜನ
Team Udayavani, May 6, 2020, 12:51 PM IST
ಸಾಂದರ್ಭಿಕ ಚಿತ್ರ
ಮೈಸೂರು: ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆ 2ನೇ ದಿನವಾದ ಮಂಗಳವಾರವೂ ವೈನ್ ಸ್ಟೋರ್ ಮತ್ತು ಬಾರ್‌ಗಳ ಮುಂದೆ ನೂರಾರು ಮಂದಿ ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದರು. ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆ ಸೋಮವಾರ ಸಾಕಷ್ಟು ಮದ್ಯ ಖರೀದಿಸಿದ್ದರಾದರೂ ಮತ್ತೆ ಮಂಗಳವಾರ ಬಾರ್‌ಗಳ ಮುಂದೆ ನಿಂತು ಮದ್ಯ ಖರೀದಿಸಿದ್ದು, ವಿಶೇಷವಾಗಿತ್ತು.
ಮಂಗಳವಾರ ಬೆಳಗಿನ ಜಾವವೆ ನಗರದ ವಿವಿಧ ವೈನ್ಸ್‌ಗಳ ಮುಂದೆ ಸಾಲು ಗಟ್ಟಿ ಕಾದು ಕುಳಿತ್ತಿದ್ದರು. ಸುಡುಬಿಸಿಲನ್ನು ಲೆಕ್ಕಿಸದೆ ರಸ್ತೆ ಬದಿಯಲ್ಲಿ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದರು. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಂಜೆ 7 ಗಂಟೆ ವರೆಗೆ ವ್ಯಾಪಾರ ನಡೆಯಿತು. ಕೋವಿಡ್ ಎಗ್ಗಿಲ್ಲದೇ ತನ್ನ ವ್ಯಾಪ್ತಿ ವಿಸ್ತರಿಸುತ್ತಿದ್ದರೂ ನಗರ ಬಹುತೇಕ ಮದ್ಯದಂಗಡಿಗಳಲ್ಲಿ ಮದ್ಯ ಖರೀದಿಗಾಗಿ ಬಂದಿದ್ದವರು ಅಂತರ ಕಾಯ್ದುಕೊಳ್ಳದೆ ಒಂದೆಡೆ ಸರದಿಯಲ್ಲಿ ನಿಂತು ಮದ್ಯ ಖರೀದಿಸಿರುವುದು ಆತಂಕ ಮೂಡಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಮಾ.23 ರಿಂದ ನಗರದ 280 ವಿವಿಧ ಬಗೆಯ ಬಾರ್‌ಗಳು, ತಾಲೂಕುಗಳ 200ಕ್ಕೂ ಹೆಚ್ಚು ವಿವಿಧ ಬಗೆಯ ಮದ್ಯದಂ ಗಡಿಗಳಲ್ಲೂ ಮದ್ಯದ ವಹಿವಾಟು ಸ್ಥಗಿತವಾಗಿತ್ತು. 3ನೇ ಹಂತದ ಲಾಕ್ ಡೌನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಕಾರಣ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮದ್ಯ ಮಾರಾಟ ನಡೆಯಿತು.
ಇಬ್ಬರು ಮಾಲೀಕರಿಗೆ ದಂಡ: ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ್ ಧರಿಸದೆ ಇರುವವರಿಗೆ ಮದ್ಯ ಮಾರಾಟ ಮಾಡಿ ರುವುದು, ಸ್ಯಾನಿಟೈಸರ್ ಇಡದ ಎರಡು ಮದ್ಯದಂಗಡಿ ಮಾಲೀಕರಿಗೆ ಮೈಸೂರು ಮಹಾನಗರ ಪಾಲಿಕೆ ತಲಾ 500 ರೂ. ದಂಡ ವಿಧಿಸಿದ್ದಾರೆ. ಕುವೆಂಪುನಗರ ಮತ್ತು ಅರವಿಂದ ನಗರದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆ ದಂಡ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು