Udayavni Special

ಜೀವದ ಹಂಗು ತೊರೆದು ಬಾವಿಗಿಳಿದ 108 ಚಾಲಕ

Team Udayavani, May 29, 2020, 6:26 AM IST

ಜೀವದ ಹಂಗು ತೊರೆದು ಬಾವಿಗಿಳಿದ 108 ಚಾಲಕ

ಕುಂದಾಪುರ: ಗುಡ್ಡ ಮ್ಮಾಡಿಯಲ್ಲಿ ಬಾವಿ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದ ವ್ಯಕ್ತಿ ಹಾಗೂ ಅವರನ್ನು ರಕ್ಷಿಸಲು ಇಳಿದವರು ಆಮ್ಲಜನಕ ಕೊರತೆಯಿಂದ ಅಸ್ವಸ್ಥಗೊಂಡಿದ್ದು, ಈ ವೇಳೆ ಅಲ್ಲಿಗೆ ಬಂದ ಕಿರಿಮಂಜೇಶ್ವರ 108 ಆ್ಯಂಬುಲೆನ್ಸ್‌ನ ಚಾಲಕ ಶ್ರೀಧರ್‌ ಅವರು ಜೀವದ ಹಂಗು ತೊರೆದು ಬಾವಿ ಗಿಳಿದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದರು.

ಆ್ಯಂಬುಲೆನ್ಸ್‌ ಚಾಲಕ ಶ್ರೀಧರ್‌ ಅವರ ಸಮಯ ಪ್ರಜ್ಞೆಯು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

11 ಗಂಟೆ ಸುಮಾರಿಗೆ ಕಿರಿಮಂಜೇಶ್ವರ 108 ಆ್ಯಂಬುಲೆನ್ಸ್‌ ವಾಹನಕ್ಕೆ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ಬಾವಿಗೆ ಬಿದ್ದ ಪ್ರಕರಣದ ಕುರಿತಂತೆ ಕರೆ ಬರುತ್ತದೆ. ಕೂಡಲೇ ಅಲ್ಲಿಗೆ ಆಗಮಿಸಿದ 108 ಚಾಲಕ ಶ್ರೀಧರ್‌ ಹಾಗೂ ಸಿಬಂದಿ ನೋಡುವಾಗ ಇಬ್ಬರು ಕೂಡ ಬಾವಿಯಲ್ಲಿ ಅಸ್ವಸ್ಥರಾಗಿದ್ದರು. ಈ ವೇಳೆ ಅಗ್ನಿಶಾಮಕ ದಳದವರು ಬರುವವರೆಗೆ ಕಾಯುವಷ್ಟು ಸಮಯವಿಲ್ಲವಾದ್ದರಿಂದ ಹಿಂದೆ ಮುಂದೆ ನೋಡದ ಚಾಲಕ ಶ್ರೀಧರ್‌ ಬಾವಿಗೆ ಇಳಿದಿದ್ದಾರೆ. ಮೊದಲಿಗೆ ವಾಲ್ಟರ್‌ ಡಿ’ಅಲ್ಮೇಡಾ ಅವರನ್ನು ನಾಜೂಕಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಇನ್ನೊಬ್ಬರನ್ನು ಸ್ಥಳೀಯರೊಂದಿಗೆ ಸೇರಿ ಮೇಲಕ್ಕೆತ್ತಿದ್ದಾರೆ. ಇಬ್ಬರನ್ನು ಮೇಲಕ್ಕೆತ್ತಿದ ಬಳಿಕ ಸ್ಥಳದಲ್ಲಿ ಕಿರಿಮಂಜೇಶ್ವರದ ಸ್ಟಾಫ್‌ ನರ್ಸ್‌ (ಇಎಂಟಿ) ಸಹನಾ ಅವರು ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಿ ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಕೂಡ ಅಷ್ಟರಲ್ಲಾಗಲೇ ವಾಲ್ಟರ್‌ ಮೃತಪಟ್ಟಿದ್ದರು.

ಆ್ಯಂಬುಲೆನ್ಸ್‌ ಚಾಲಕ ಶ್ರೀಧರ್‌ ಹಾಗೂ ಸ್ಟಾಪ್‌ ನರ್ಸ್‌ ಸಹನಾ ಅವರ ಸಮಯೋಚಿತ ಕಾರ್ಯದಿಂದಾಗಿ ಬಾವಿಯೊಳಗೆ ಅಸ್ವಸ್ಥಗೊಂಡಿದ್ದ ಅಲ್ಬನ್‌ ಅಲ್ಮೇಡ ಅವರನ್ನು ಬದುಕಿಸಲು ಸಾಧ್ಯವಾಗಿದ್ದು, ಇವರ ಈ ಕೆಲಸಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಂಟ್ವಾಳ: ಒಂದೇ ದಿನ 20ಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣ

ಬಂಟ್ವಾಳ: ಒಂದೇ ದಿನ 20ಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣ

ಕರಾವಳಿಯಲ್ಲಿ ಕೋವಿಡ್ ಕಂಟಕ: ದ.ಕನ್ನಡ ಜಿಲ್ಲೆಯಲ್ಲಿ ಇಂದು 168 ಸೋಂಕು ಪ್ರಕರಣಗಳು?

ಕರಾವಳಿಯಲ್ಲಿ ಕೋವಿಡ್ ಕಂಟಕ: ದ.ಕನ್ನಡ ಜಿಲ್ಲೆಯಲ್ಲಿ ಇಂದು 168 ಸೋಂಕು ಪ್ರಕರಣಗಳು?

ಸೋಂಕು ಬರುವುದು ಕಾಂಗ್ರೆಸ್ ನವರಿಗೆ ಮಾತ್ರವೇ? ಬಿಜೆಪಿಯವರಿಗೆ ಬರುವುದಿಲ್ಲವೇ?: ಕಿಮ್ಮನೆ

ಸೋಂಕು ಬರುವುದು ಕಾಂಗ್ರೆಸ್ ನವರಿಗೆ ಮಾತ್ರವೇ? ಬಿಜೆಪಿಯವರಿಗೆ ಬರುವುದಿಲ್ಲವೇ?: ಕಿಮ್ಮನೆ

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

ಕೊಡಂಬೆಟ್ಟು ಕರ್ತವ್ಯನಿರತ ಆಶಾ ಕಾರ್ಯಕರ್ತೆ ಮೇಲೆ  ಹಲ್ಲೆ!

ಕೊಡಂಬೆಟ್ಟು ಕರ್ತವ್ಯನಿರತ ಆಶಾ ಕಾರ್ಯಕರ್ತೆ ಮೇಲೆ  ಹಲ್ಲೆ!

ಕಲಬುರಗಿ ಜಿಲ್ಲಾ ಬಿಜೆಪಿ ಶಾಸಕರೊಬ್ಬರಿಗೆ ಕೋವಿಡ್ ಸೋಂಕು ದೃಢ

ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರಿಗೆ ಕೋವಿಡ್ ಸೋಂಕು ದೃಢ

ಗುಡ್ಡ ಕುಸಿತ ಭೀತಿ: ರಾತ್ರಿ ವೇಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಇಲ್ಲ ಅನುಮತಿ

ಗುಡ್ಡ ಕುಸಿತ ಭೀತಿ: ರಾತ್ರಿ ವೇಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಇಲ್ಲ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಂದಾಪುರ : ಮಳೆಯ ಅಬ್ಬರ ಕಡಿಮೆಯಾದರೂ ಕಡಲಬ್ಬರ ಬಿರುಸು!

ಕುಂದಾಪುರ : ಮಳೆಯ ಅಬ್ಬರ ಕಡಿಮೆಯಾದರೂ ಕಡಲಬ್ಬರ ಬಿರುಸು!

ಶಂಕರಪುರ; ಸಾಯಿ ಸಾಂತ್ವಾನ ಮಂದಿರದ ವತಿಯಿಂದ ಕೊರೋನಾ ಜನಜಾಗೃತಿ ಪ್ರಚಾರ ವಾಹನಕ್ಕೆ ಚಾಲನೆ

ಕುಂದಾಪುರ: ಸಿದ್ದಾಪುರ ಗ್ರಾಮದಲ್ಲಿ ಮೂವರಿಗೆ; ಹಳ್ಳಿಹೊಳೆಯ ಒಬ್ಬರಿಗೆ ಸೋಂಕು ದೃಢ

ಕುಂದಾಪುರ: ಸಿದ್ದಾಪುರ ಗ್ರಾಮದಲ್ಲಿ ಮೂವರಿಗೆ; ಹಳ್ಳಿಹೊಳೆಯ ಒಬ್ಬರಿಗೆ ಸೋಂಕು ದೃಢ

ಕಾಪು: ಮೋದಿ ಸರಕಾರದ ಬೆಲೆಯೇರಿಕೆ ನೀತಿ ಖಂಡಿಸಿ ಪ್ರತಿಭಟನೆ, ಮನವಿ ಸಲ್ಲಿಕೆ

ಕಾಪು: ಮೋದಿ ಸರಕಾರದ ಬೆಲೆಯೇರಿಕೆ ನೀತಿ ಖಂಡಿಸಿ ಪ್ರತಿಭಟನೆ, ಮನವಿ ಸಲ್ಲಿಕೆ

* ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ

ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ, ಕಡತಗಳಿಗೆ ಹಾನಿ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ಬಂಟ್ವಾಳ: ಒಂದೇ ದಿನ 20ಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣ

ಬಂಟ್ವಾಳ: ಒಂದೇ ದಿನ 20ಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣ

9-July-22

ಸೋಂಕು ಪ್ರದೇಶ ಸೀಲ್‌ಡೌನ್‌ಗೆ ಆಗ್ರಹ

9-July-21

ಬೇಟೆಯಾಡದೇ ಅಚ್ಚರಿ ಮೂಡಿಸಿದ ಚಿರತೆ!

ಶಾಸಕರಿಂದ ಅಧಿಕಾರ ದುರುಪಯೋಗ: ಕಾಶಪ್ಪನವರ

ಶಾಸಕರಿಂದ ಅಧಿಕಾರ ದುರುಪಯೋಗ: ಕಾಶಪ್ಪನವರ

ಆರ್ಯವೈಶ್ಯರ ಅಭಿವೃದ್ಧಿಗೆ ಯೋಜನೆ 

ಆರ್ಯವೈಶ್ಯರ ಅಭಿವೃದ್ಧಿಗೆ ಯೋಜನೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.