ನಿಶ್ಚಿತಾರ್ಥ ಮಾಡಿಕೊಂಡ ನಟ ರಾಣಾ ದಗ್ಗುಬಾಟಿ
Team Udayavani, May 23, 2020, 4:00 AM IST
ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತಾನು ಪ್ರೀತಿಸಿದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ತಾನು ಪ್ರೀತಿಸುತ್ತಿರುವ ವಿಷಯ ಬಹಿರಂಗಪಡಿಸಿ ತನ್ನ ಫ್ಯಾನ್ಸ್ ಗಳಿಗೆ ಸರ್ ಪ್ರೈಸ್ ನೀಡಿದ್ದ ರಾಣಾ, ಪ್ರೀತಿಯ ತಿಳಿಸಿದ ಒಂದೇ ವಾರದಲ್ಲಿ ಮಿಹೀಕಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.
ಇನ್ನು ಈ ವಿಷಯವನ್ನು ಸ್ವತಃ ರಾಣಾ ಅವರೇ ಇನ್ಸ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾರೆ. ಈ ವಿಚಾರವಾಗಿ ತಮ್ಮ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ರಾಣಾ, ಈಗ ಇದು ಅಧಿಕೃತವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಿಹೀಕಾ ಜೊತೆಯಲ್ಲಿ ನಿಶ್ಚಿತಾರ್ಥದಲ್ಲಿ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಿಹೀಕಾ ಕಿತ್ತಲೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ರಾಣಾ ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್ ತೊಟ್ಟು ಪೋಸ್ ನೀಡಿದ್ದಾರೆ.
ಸದ್ಯ ರಾಣಾ ಮತ್ತು ಮಿಹೀಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಓಡಾಡುತ್ತಿದೆ. ಇನ್ನು ರಾಣಾ ದುಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡಿರುವ ಮಿಹೀಕಾ ಹೈದರಾಬಾದ್ ಮೂಲದವರು. ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಅಧ್ಯಯನ ಮಾಡಿರುವ ಮಿಹೀಕಾ ಉದ್ಯಮಿ ಸಮರ್ಥ್ ಬಜಾಜ್ ಅವರ ಸಹೋದರಿ. ಜೊತೆಗೆ ಮಾಡೆಲಿಂಗ್ ಕಡೆಗೂ ಆಸಕ್ತಿ ಹೊಂದಿರುವ ಮಿಹೀಕಾ ಸದ್ಯ ತನ್ನ ತಾಯಿ ಬಂಟಿ ಬಜಾಜ್ ಅವರ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್