Airport: ತಿರುವನಂತಪುರ ಸೈಲೆಂಟ್ ಏರ್ಪೋಟ್
Team Udayavani, Dec 27, 2023, 11:43 PM IST
ತಿರುವನಂತಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024ರ ಜನವರಿ 1ರಿಂದ ಸೈಲೆಂಟ್ ಏರ್ಪೋಟ್ ಆಗಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಯಾವುದೇ ಶಬ್ದಗಳ ಅಡೆತಡೆ ಇಲ್ಲದೇ ಶಾಂತಿಯುತವಾಗಿ ವಿಶ್ರಮಿಸಲು ವಿಮಾನ ನಿಲ್ದಾಣ ಈ ಸೈಲೆಂಟ್ ಉಪಕ್ರಮ ಅನುಸರಿಸುತ್ತಿದೆ.
ವಿಮಾನಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಟರ್ಮಿನಲ್-1 ಮತ್ತು 2ರಲ್ಲಿ ಸ್ಕ್ರೀನ್ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅತೀ ಅಗತ್ಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವೇ ಅನೌನ್ಸ್ಮೆಂಟ್ ಮಾಡುವುದಾಗಿ ಹೇಳಿದೆ.