ಎಲ್ಲಾ ವರದಿಗಳೂ ನೆಗೆಟಿವ್‌; ಭಯ ಬೇಡ


Team Udayavani, Mar 5, 2020, 3:10 AM IST

yella-varadui

ಬೆಂಗಳೂರು: ರಾಜ್ಯದಲ್ಲಿ ಜ.21 ರಿಂದ ಇಲ್ಲಿಯವರೆಗೆ 275 ಮಂದಿಯನ್ನು ಕೊರೊನಾ ಶಂಕಿತರು ಎಂದು ಗುರುತಿಸಲಾಗಿತ್ತು. ಅವರಲ್ಲಿ 253 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಿದ್ದು, ಎಲ್ಲ ವರದಿಗಳು ನೆಗೆಟಿವ್‌ ಎಂದು ಬಂದಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ಕುರಿತು ವಿಧಾನಸೌಧ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.21ರಿಂದ ಬುಧವಾರದವರೆಗೂ ಬೆಂಗ ಳೂರಿನ ವಿಮಾನ ನಿಲ್ದಾಣದಲ್ಲಿ 42,283 ಪ್ರಯಾಣಿ ಕರನ್ನು ತಪಾ ಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಕೊರೊನಾ ಬಾಧಿತ 11 ದೇಶಗಳಲ್ಲಿ ಪ್ರವಾಸ ಕೈಗೊಂ ಡಿದ್ದ 468 ಪ್ರಯಾ ಣಿಕರನ್ನು ಗುರುತಿಸಿ ತಪಾಸಣೆ ನಡೆಸಿ ಮನೆ ಗಳಲ್ಲಿ ಪ್ರತ್ಯೇಕ ವಾಗಿ ಇರಿಸಲಾಗಿದೆ.

ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. ಇವರಲ್ಲಿ 275 ಮಂದಿಯನ್ನು ಶಂಕಿತರು ಎಂದು ಗುರುತು ಮಾಡ ಲಾಗಿತ್ತು. ಆ ಪೈಕಿ ಅಗತ್ಯವಿರು ವವರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್‌ ಎಂದು ಬರುತ್ತಿವೆ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.

ಟೆಕ್ಕಿಯಲ್ಲಿ ಕೊರೊನಾ ಕಾಯಿಲೆ ಬಂದಿರುವುದು ಖಚಿತಪಟ್ಟಿರುವ ಹಿನ್ನೆಲೆಯಲ್ಲಿ, ಆತ ಕೆಲಸ ಮಾಡುತ್ತಿದ್ದ ಕಚೇರಿ, ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌, ಪ್ರಯಾಣಿ ಸಿದ ಕಾರು ಮತ್ತು ಬಸ್‌ ಗುರುತಿಸಿ, ಈತನ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಸಹ ತಪಾಸಣೆ ಮಾಡಿ, ಅಗತ್ಯ ವೈದ್ಯಕೀಯ ಸಲಹೆ ನೀಡಲಾಗಿದೆ. ಈತ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಎಲ್ಲ ನಿವಾಸಿಗಳ ತಪಾಸಣೆ ಮಾಡಲಾಗಿದೆ ಎಂದರು.

ಸಮಿತಿ ರಚನೆ: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅದರಂತೆ ನಮ್ಮ ಅಧಿ ಕಾರಿಗಳು ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಕೊರೊನಾ ಹರಡದಂತೆ ಅಧಿಕಾರಿಗಳು ಕ್ರಮ ತೆಗೆದು ಕೊಂಡಿದ್ದಾರೆ. ರಾಜ್ಯದಲ್ಲಿ 50 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಪ್ರತ್ಯೇಕ ಹಾಸಿಗೆಗಳನ್ನು ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ. ಆಸ್ಪತ್ರೆಗಳಿಗೆ ಅವಶ್ಯ ವಿರುವ ವೆಂಟಿ ಲೇಟರ್‌, ಔಷಧಿಗಳು, ವೈಯಕ್ತಿಕ ರಕ್ಷಣಾ ಸಲಕರಣೆ ಗಳು ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮ ರಾಜ ನಗರ, ಉಡುಪಿ, ಮೈಸೂರು, ರಾಯ ಚೂರು, ಕಲಬು ರಗಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಇಂದಿನಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತ್ವರಿತ ಪ್ರಕ್ರಿಯಾ ತಂಡ ರಚನೆ: ರಾಜ್ಯಮಟ್ಟದ ನೋಡಲ್‌ ತಂಡ ಹಾಗೂ ಎಲ್ಲ ಜಿಲ್ಲೆಗಳಲ್ಲಿ ತ್ವರಿತ ಪ್ರಕ್ರಿಯಾ ತಂಡ ರಚಿಸಲಾಗಿದೆ. ಜತೆಗೆ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಪ್ರತಿದಿನ ಸಭೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಸಹಾಯವಾಣಿಗೆ 7,366 ಕರೆ: ಕೊರೊನಾ ಕಾಯಿಲೆ ಕುರಿತು ಮಾಹಿತಿಗೆ 104 ಆರೋಗ್ಯ ಸಹಾಯವಾಣಿ ಇದ್ದು, ಈವರೆಗೆ 7,366 ಕರೆಗಳು ಬಂದಿವೆ. ವಿದೇಶದಿಂದ ಬಂದು ಸೋಂಕಿತರಾಗಿದ್ದರೆ ಅವರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ತಿಳಿಸುವಂತೆ ಸಚಿವರು ಮನವಿ ಮಾಡಿದರು.

ಸಹೋದ್ಯೋಗಿಗೆ ಸೋಂಕಿಲ್ಲ: ಕೊರೊನಾ ಸೋಂಕಿತ ಟೆಕ್ಕಿ ರೂಮ್‌ಮೇಟ್‌ ಹಾಗೂ ಆತನ ಸಹೋದ್ಯೋಗಿಗೂ ವೈದ್ಯರು ಕೊರೊನಾ ಸೋಂಕು ಪರೀಕ್ಷೆ ಮಾಡಿದ್ದು, ಇವರಿಬ್ಬರಿಗೂ ಸೋಂಕು ತಗುಲಿಲ್ಲ ಎಂದು ರಾಜೀವ್‌ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್‌ ತಿಳಿಸಿದ್ದಾರೆ.

ಕೊರೊನಾ ಪರೀಕ್ಷಾ ವರದಿಗಳ ಕುರಿತು ಮಾಹಿತಿ ನೀಡಿದ ಅವರು, ಟೆಕ್ಕಿಯ ರೂಮ್‌ಮೇಟ್‌, ಸಹೋದ್ಯೋಗಿ, ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದ ಮೂರು ಮಂದಿ ಸೇರಿ ಒಟ್ಟು ಐದು ಮಂದಿಗೆ ಪರೀಕ್ಷೆ ಮಾಡಲಾಗಿದೆ. ಎಲ್ಲರ ವರದಿಗಳೂ ನೆಗೆಟಿವ್‌ ಬಂದಿದ್ದು, ನಾಳೆ ಬೆಳಗ್ಗೆಯೊಳಗೆ ಎಲ್ಲರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅಪಾರ್ಟ್‌ಮೆಂಟ್‌ ಸಂಪೂರ್ಣ ತಲಾಶ್‌: ಟೆಕ್ಕಿ ವಾಸವಿದ್ದ ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಎಲ್ಲಾ ಮನೆಗಳ ನಿವಾಸಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಹಾಗೂ ಬುಧವಾರ ಅಲ್ಲಿಯೇ ಇದ್ದುಕೊಂಡು 82 ಮನೆಗಳ 371 ಮಂದಿಯನ್ನು ನೇರವಾಗಿ ಭೇಟಿ ಮಾಡಿ, ವಿಚಾರಣೆ ನಡೆಸಿ ಅಗತ್ಯವಿರುವವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಜತೆಗೆ ಇಬ್ಬರು ಆಶಾಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕಿಯರು ಆರೋಗ್ಯ ಸಮೀಕ್ಷೆಯನ್ನು ಮಾಡಿದ್ದಾರೆ.

ಬುಧವಾರ ರಾತ್ರಿ ವೇಳೆಗೆ ಅಪಾರ್ಟ್‌ಮೆಂಟ್‌ ನಿವಾಸಿಗಳ ತಪಾಸಣೆ ಮುಕ್ತಾಯವಾಯಿತು. ಯಾರಲ್ಲೂ ಅನಾರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಎಲ್ಲಾ ನಿವಾಸಿಗಳು ಸುರಕ್ಷಿತವಾಗಿದ್ದಾರೆ. ಕೆಲ ನಿವಾಸಿಗಳು ಅನಗತ್ಯ ಭಯಕ್ಕೆ ಒಳಗಾಗಿದ್ದು, ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿ ಮಾಹಿತಿ ನೀಡುವುದರ ಜತೆಗೆ ಧೈರ್ಯ ತುಂಬಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುಧಾಕರ್‌ ತಿಳಿಸಿದ್ದಾರೆ.

ಬೀದರ್‌ನಲ್ಲಿ ಮೂವರಿಗೆ ಕೊರೊನಾ ಸೋಂಕು ಶಂಕೆ
ಬೀದರ: ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ರುವ ಮೂವರು ವ್ಯಕ್ತಿಗಳಿಗೆ ಬುಧವಾರ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮೂವರ ರಕ್ತ ಮತ್ತು ಗಂಟಲು ಕಫ‌ದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಮೂವರಲ್ಲಿ ಇಬ್ಬರು ಬೀದರ, ಇನ್ನೊಬ್ಬರು ಔರಾದ ತಾಲೂಕಿನವರಾಗಿದ್ದಾರೆ. ಕತಾರ್‌ನಿಂದ ವ್ಯಕ್ತಿ ಯೊಬ್ಬ ಇತ್ತೀಚೆಗೆ ತಮ್ಮೂರಿಗೆ ಆಗಮಿಸಿದ್ದ. ಆತನ ಮಗನಿಗೆ ತೀವ್ರ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ. ಈ ವೇಳೆ ವೈದ್ಯಾ ಧಿಕಾರಿಗಳು ಆತನ ತಪಾಸಣೆ ನಡೆಸಿದ್ದು, ಕೊರೊನಾ ವೈರಸ್‌ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಹಾಗಾಗಿ, ತಂದೆ ಮತ್ತು ಮಗನನ್ನು ವಿಶೇಷ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾರ್ವೇಯಿಂದ ಬಂದಿರುವ ಮತ್ತೂಬ್ಬ ವ್ಯಕ್ತಿಗೆ ಕೆಮ್ಮು, ಜ್ವರ ಬಂದಿದ್ದು, ತಪಾ ಸಣೆ ವೇಳೆ ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತವಾ ಗಿದೆ. ಮೂವರ ರಕ್ತ ಮತ್ತು ಕಫ‌ದ ಮಾದರಿಯನ್ನು ಬೆಂಗಳೂರು, ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಟಾಪ್ ನ್ಯೂಸ್

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

ವಿಷಾಹಾರ ಸೇವನೆ  : 11ಕುರಿ ಸಾವು

ವಿಷಾಹಾರ ಸೇವನೆ  : 11ಕುರಿ ಸಾವು

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

ಕಲ್ಯಾಣಕ್ಕೆ ಖೂಬಾ-ಚವ್ಹಾಣ ಕೊಡುಗೆ ಶೂನ್ಯ

ಕಲ್ಯಾಣಕ್ಕೆ ಖೂಬಾ-ಚವ್ಹಾಣ ಕೊಡುಗೆ ಶೂನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.