ನರೇಗಾ ಕೋಟ್ಯಂತರ ರೂ ಭ್ರಷ್ಟಾಚಾರ ಆರೋಪ : ಅರಕೆರೆ ಗ್ರಾಮಸ್ಥರ ಪ್ರತಿಭಟನೆ


Team Udayavani, Jan 14, 2022, 7:37 PM IST

1-narega

ಕುಣಿಗಲ್ : ತಾಲೂಕಿನ ಕಸಬಾ ಹೋಬಳಿ ಟಿ.ಹೊಸಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸದಸ್ಯರೊಂದಿಗೆ ಶಾಮೀಲಾಗಿ ನರೇಗಾ ಯೋಜನೆಯನ್ನು ದುರ್ಬಳಕ್ಕೆ ಮಾಡಿಕೊಂಡು ಕೋಟ್ಯಾಂತರೂ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಅರಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀನ ಉದ್ಯೋಗ ಖಾತ್ರಿ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು, ಹಣ ಮಾಡುವ ಉದ್ದೇಶದಿಂದ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನರಸಿಂಹಮೂರ್ತಿ ಹಾಗೂ ಸದಸ್ಯರು ಹೊಂದಾಗಿ ಗುತ್ತಿಗೆದಾರರ ಮೂಲಕ ಜೆಸಿಬಿ ಯಂತ್ರ ಬಳಸಿ, ಕಾಮಗಾರಿ ಮಾಡಿ, ಗ್ರಾಮಸ್ಥರಿಗೆ ಮಾನವ ದಿನಗಳನ್ನು ನೀಡದೇ ಅನ್ಯಾಯ ಮಾಡಿದ್ದಾರೆ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗ್ರಾಮದ ಮುಖಂಡರಾದ ಎ.ಆರ್.ಸುರೇಶ್, ಎ.ಎಂ.ಕೃಷ್ಣಮೂರ್ತಿ, ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾ.ಪಂ ಆಡಳಿತ ವಿರುದ್ದ ಧಿಕ್ಕಾರ ಕೂಗಿದರು.

ಯೋಜನೆ ಉಲ್ಲಂಘನೆ
ಮುಖಂಡ ಎ.ಆರ್.ಸುರೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸಿ ಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದು, ಜಾಬ್‌ಕಾರ್ಡ್ ನೀಡುವ ಮೂಲಕ ಉದ್ಯೋಗ ಕಲ್ಪಿಸಿಕೊಡುವುದು ಯೋಜನೆ ಉದ್ದೇಶವಾಗಿದೆ ಆದರೆ ಪಿಡಿಓ ನರಸಿಂಹಮೂರ್ತಿ ಗ್ರಾ.ಪಂ ಅಧ್ಯಕ್ಷ ನಾಗಣ್ಣ, ಸದಸ್ಯ ಶ್ರೀನಿವಾಸ್ ಸರ್ಕಾರದ ಯೋಜನೆಯನ್ನು ಗಾಳಿಗೆ ತೂರಿ ಸ್ಥಳೀಯರಿಗೆ ಮಾನವ ದಿನಗಳನ್ನು ನೀಡದೇ, ಗುತ್ತಿಗೆದಾರರ ಮೂಲಕ ಹೊರ ರಾಜ್ಯದ ಜನರಿಂದ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಮಾಡಿಸಿದ್ದಾರೆ, ಇದು ಉದ್ಯೋಗ ಖಾತ್ರಿ ಯೋಜನೆಗೆ ವಿರುದ್ದವಾಗಿದೆ ಎಂದು ಆರೋಪಿಸಿದರು.

ಕೋಟ್ಯಾಂತರೂ ಅವ್ಯವಹಾರ
ಜಾಬ್‌ಕಾರ್ಡ್ ಹೊಂದಿರು ಗ್ರಾಮಸ್ಥರು ಉದ್ಯೋಗಕ್ಕಾಗಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿದರೇ ಉದ್ಯೋಗ ನೀಡುತ್ತಿಲ್ಲ, ಆದರೆ ಹಣ ಮಾಡುವ ಉದ್ದೇಶದಿಂದ ಗ್ರಾ.ಪಂ ಅಧಿಕಾರಿಗಳು ಸ್ಥಳೀಯರೇ ಅಲ್ಲದವರಾದ ಬೆಂಗಳೂರಿನ ವಾಸಿಗಳಿಗೆ, ಅಂಗನವಾಡಿ ಮತ್ತು ಸರ್ಕಾರಿ ನೌಕರರಿಗೆ ಉದ್ಯೋಗ ನೀಡಿ, ಅವರ ಖಾತೆಗೆ ನರೇಗಾ ಯೋಜನೆಯ ಮಾನವ ದಿನಗಳ ಹಣವನ್ನು ಜಮಾ ಮಾಡಿ ಆ ಮೂಲಕ ಕೋಟ್ಯಾಂತರೂ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ನರೇಗಾದ ಅವ್ಯವಹಾರ ಅಕ್ರಮದ ಬಗ್ಗೆ ಕುಣಿಗಲ್ ತಾ.ಪಂ ಇಓ ಹಾಗೂ ಜಿ.ಪಂ ಸಿಇಓ ಅವರಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮಕೈಗೊಂಡಿಲ್ಲ ಇದು ಮತಷ್ಟು ಅವ್ಯವಹಾರ ನಡೆಸಲು ದಾರಿ ಮಾಡಿ ಕೊಟ್ಟಂತ್ತಾಗಿದೆ ಮೇಲ್ನೋಟಕ್ಕೆ ಹಿರಿಯ ಅಧಿಕಾರಿಗಳು ಪಾಲುದಾರರು ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.

ಜನರಿಗೆ ಅಶುದ್ದ ನೀರು
ಗ್ರಾಮದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ಸ್ವಚ್ಛಗೊಳಿಸಿ ಎರಡು ಮೂರು ವರ್ಷ ಕಳೆದರೂ ಈವರೆಗೂ ಸ್ವಚ್ಛಗೊಳಿಸಿಲ್ಲ ಜನರು ಅಶುದ್ದವಾದ ನೀರು ಕುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಸ್ವಚ್ಛತೆ ಇಲ್ಲದೇ ಊರಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ ಈಗಾಗಲೇ ಕೊರೊನಾ ತಾಲೂಕಿನಾಧ್ಯಂತ ವ್ಯಾಪಿಸಿದ್ದು ಜನರು ಭಯದಲ್ಲಿ ಬಧುಕುತ್ತಿದ್ದಾರೆ ಆದರೆ ಗ್ರಾ.ಪಂ ಆಡಳಿತ ಸ್ವಚ್ಛತೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸುರೇಶ್ ಗ್ರಾ.ಪಂ ವಿರುದ್ದ ಹರಿದ್ದಾಯಿದರು.

ಪ್ರತಿಭಟನೆ ಎಚ್ಚರಿಕೆ
ಮುಖಂಡ ಎ.ಎಂ.ಕೃಷ್ಣಮೂರ್ತಿ ಮಾತನಾಡಿ ೨೦೧೯-೨೦ ಹಾಗೂ ೨೦೨೧-೨೨ ನೇ ಸಾಲಿನಲ್ಲಿ ನರೇಗಾ ಯೋಜನಡಿಯಲ್ಲಿ ಕೆರೆಮೇಗಲಪಾಳ್ಯ ಪ.ಜಾತಿ ಕಾಲೋನಿಯ ಶಿವಲಿಂಗಯ್ಯ ಅವರ ಮನೆಯಿಂದ ಜಯಮ್ಮ ಅವರ ಮನೆವರೆಗೆ ಹಾಗೂ ಅರಕೆರೆ ಗ್ರಾಮದ ಮುಖ್ಯರಸ್ತೆಯಿಂದ ಕರೀಂಸಾಬ್ ಮನೆಯ ಮಾರ್ಗವಾಗಿ ಕುಂಟಪ್ಪನ ಮನೆವರೆಗೆ ಮತ್ತು ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಬಸಿ ಕಾಲುವೆ ಮತ್ತು ಡಕ್ ನಿರ್ಮಾಣ ಕಾಮಗಾರಿಯನ್ನು ಮಾಡಲಾಗಿದೆ, ಇದೇ ಹಳೇ ಕಾಮಗಾರಿಗೆ ಜ ೧೧ ರಂದು ಎನ್‌ಎಂಆರ್ ತೆಗೆದು ಹೊಸದಾಗಿ ಮನವ ದಿನಗಳ ಕಾಮಗಾರಿ ಮಾಡಲಾಗುತ್ತಿದೆ ಎಂದು ನಿತ್ಯ ಹಾಜರಾತಿ ಪುಸ್ತಕದಲ್ಲಿ ನೊಂದಾಯಿಸಲಾಗುತ್ತಿದೆ, ಇದು ಆಕ್ರಮವಾಗಿದೆ ಎಂದು ಕಿಡಿಕಾರಿದರು, ಕೂಡಲೇ ಸಂಬAಧಪಟ್ಟ ಹಿರಿಯ ಅಧಿಕಾರಿಗಳು ಈ ಸಂಬAಧ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮಸ್ಥರೊಂದುಗೂಡಿ ಗ್ರಾ.ಪಂ ಕಚೇರಿ ಹಾಗೂ ತಾ.ಪಂ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರಿಯಾಜ್ ಅಹಮದ್, ನಿಸಾರ್ ಅಹಮದ್, ವೆಂಕಟೇಶ್, ತಮ್ಮಣ್ಣ, ಧನಂಜಯ್ಯ, ಯಶೋಧ, ಗಂಗಲಕ್ಷö್ಮಮ್ಮ, ಮಂಜುಳ, ಕೆಂಪಮ್ಮ ಸೇರಿದಂತೆ ಇತರರು ಪಾಲ್ಗೊಂಡಿದರು.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.