ನಿಷೇಧದ ಬಳಿಕವೂ ಚೀನಿ ಅಂತರ್ಜಾಲ ಮಾರಾಟ ತಾಣಗಳು ಸಕ್ರಿಯ?
Team Udayavani, Jul 11, 2020, 11:28 AM IST
ಮುಂಬಯಿ: ಭಾರತ ಸರಕಾರದಿಂದ ನಿಷೇಧಕ್ಕೊಳಗಾಗಿದ್ದರೂ ಅಂತರ್ಜಾಲ ಆಧಾರಿತ ಚೀನಿ ಮಾರಾಟ ತಾಣಗಳು ಈಗಲೂ ಸಕ್ರಿಯವಾಗಿಯೇ ಇವೆ! ಹೀಗೆಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. ತಮ್ಮದೇ ಮಾರ್ಗಗಳ ಮೂಲಕ ಕ್ಲಬ್ ಫ್ಯಾಕ್ಟರಿ, ಶೀನ್ ಆ್ಯಪ್ ಗಳು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಈ ಪೈಕಿ ರಾಂವೆ ವೆಬ್ಸೈಟ್ ಚಾಲ್ತಿಯಲ್ಲಿದ್ದರೂ, ಅಲ್ಲಿ ಕೊಳ್ಳಲು ಆಗುತ್ತಿಲ್ಲವೆಂದು ಕೆಲವು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರಂತೆ.
59 ಆ್ಯಪ್ ಗಳ ನಿಷೇಧದ ಬಳಿಕ, ಇವುಗಳ ವೆಬ್ಸೈಟ್ಗಳು ದೂರಸಂಪರ್ಕ ಕಂಪೆನಿಗಳ ಅಂತರ್ಜಾಲ ವ್ಯವಸ್ಥೆ ಮೂಲಕ ಈಗಲೂ ಕಾರ್ಯಾಚರಣೆ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈಗ ಹುಟ್ಟಿಕೊಂಡಿರುವ ಇನ್ನೊಂದು ಗುಮಾನಿಯ ಪ್ರಕಾರ, ಕ್ಲಬ್ಫ್ಯಾಕ್ಟರಿ, ಶೀನ್ ಕಂಪೆನಿಗಳು ಗ್ರಾಹಕರಿಗೆ ಪರ್ಯಾಯ ಲಿಂಕ್ ಕಳುಹಿಸಿ ತಮ್ಮ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕೊಟ್ಟಿವೆ ಎನ್ನುವುದು!