Australia : ಮೂಲನಿವಾಸಿಗಳಿಗಾಗಿ ಮಂಡಳಿ ಪ್ರಸ್ತಾಪ ವಜಾಗೊಳಿಸಿದ ಆಸ್ಟ್ರೇಲಿಯಾ
Team Udayavani, Oct 14, 2023, 11:09 PM IST
ಮೆಲ್ಬೋರ್ನ್: ಮೂಲನಿವಾಸಿಗಳನ್ನು ರಾಷ್ಟ್ರದ ಸಂವಿಧಾನದಲ್ಲಿ ಗುರುತಿಸಬೇಕು, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲಹೆ ನೀಡಲು ಮಂಡಳಿ ಸ್ಥಾಪಿಸಬೇಕು ಎಂಬ ಪ್ರಸ್ತಾಪವನ್ನು ಆಸ್ಟ್ರೇಲಿಯಾ ಸಂಸತ್ ವಜಾಗೊಳಿಸಿದೆ. ಈ ಬಗ್ಗೆ ಆ ದೇಶದಾದ್ಯಂತ ಅಭಿಯಾನ ನಡೆಸಿ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು.
ನಾಗರಿಕರು ಪ್ರಸ್ತಾಪದ ಪರ ಹಾಗೂ ವಿರುದ್ಧವಾಗಿ ಮತ ಚಲಾಯಿಸಿದ್ದರು. ಬಹುಮತ ಪಡೆಯಲು ಆಸ್ಟ್ರೇಲಿಯಾದ ಆರು ಪ್ರಾಂತ್ಯಗಳ ಪೈಕಿ ಕನಿಷ್ಠ ನಾಲ್ಕರಲ್ಲಿ ಬೆಂಬಲ ಬೆಂಬಲ ಬೇಕಿತ್ತು. ಆದರೆ ಪ್ರಸ್ತಾಪಕ್ಕೆ ಅಗತ್ಯ ಬಹುಮತ ಸಿಗಲಿಲ್ಲ. ಹೀಗಾಗಿ ಪ್ರಸ್ತಾಪವನ್ನು ಆಸ್ಟ್ರೇಲಿಯಾ ಸಂಸತ್ ವಜಾಗೊಳಿಸಿದೆ.