Exports: ದೇಶದ ರಫ್ತು ಪ್ರಮಾಣ ಶೇ.2.6ರಷ್ಟು ಕುಸಿತ
Team Udayavani, Oct 14, 2023, 11:07 PM IST
ಹೊಸದಿಲ್ಲಿ: ದೇಶದ ರಫ್ತು ಪ್ರಮಾಣವು ಸೆಪ್ಟೆಂಬರ್ ತಿಂಗಳಲ್ಲಿ ಶೇ.2.6ರಷ್ಟು ತಗ್ಗಿದೆ. ಇದರಿಂದ ರಫ್ತು 2.87 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆಗೊಳಿಸುವ ದತ್ತಾಂಶದಿಂದ ತಿಳಿದುಬಂದಿದೆ.
ಇನ್ನೊಂದೆಡೆ, ಸರಕುಗಳ ಬೆಲೆಗಳನ್ನು ಸರಾಗಗೊಳಿಸಿದ ಕಾರಣದಿಂದ ಸೆಪ್ಟೆಂಬರ್ನಲ್ಲಿ ದೇಶದ ಆಮದು ಶೇ.15ರಷ್ಟು ತಗ್ಗಿದೆ. ಇದರಿಂದ ಆಮದು 4.48 ಲಕ್ಷ ಕೋಟಿ ರೂ.ಗೆ ಕುಸಿದಿದೆ. ಸತತವಾಗಿ ಕಳೆದ 10 ತಿಂಗಳಿಂದ ದೇಶದ ಆಮದು ಪ್ರಮಾಣ ತಗ್ಗುತ್ತಾ ಬಂದಿದೆ.
ಇದೇ ವೇಳೆ, ಈ ವರ್ಷದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ರಫ್ತು ಪ್ರಮಾಣವು ಶೇ.8.77ರಷ್ಟು ಇಳಿಕೆಯಾಗಿದರೆ, ಆಮದು ಪ್ರಮಾಣವು ಶೇ.12.23ರಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ