ಬೆಳಪು ಗ್ರಾ.ಪಂ ಅಧ್ಯಕ್ಷರಾಗಿ ಶೋಭಾ ಜಿ ಭಟ್, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಅವಿರೋಧ ಆಯ್ಕೆ
Team Udayavani, Feb 16, 2021, 7:13 PM IST
ಕಾಪು: ಬೆಳಪು ಗ್ರಾ ಪಂ ಅಧ್ಯಕ್ಷರಾಗಿ ಬೆಳಪು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲಿತ ಶೋಭಾ ಜಿ. ಭಟ್ ಹಾಗೂ ಶರತ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸದಸ್ಯ ಬಲದ ಗ್ರಾ.ಪಂನಲ್ಲಿ ಗ್ರಾಮಾಭಿವೃದ್ಧಿ ಬೆಂಬಲಿತ 8, ಬಿಜೆಪಿ ಬೆಂಬಲಿತ 1 ಹಾಗೂ ಎಸ್ಡಿಪಿಐ ಬೆಂಬಲಿತ 2 ಸದಸ್ಯರು ಚುನಾಯಿತರಾಗಿದ್ದರು.
ಮಾನ್ಯ ಮಹಿಳೆ ಮೀಸಲಿನಡಿ ಅಧ್ಯಕ್ಷ ಸ್ಥಾನಕ್ಕೆ 4ನೇ ಅವಧಿಗೆ ಸದಸ್ಯರಾದ ಶೋಭಾ ಮತ್ತು ನಫೀಜಾ ಬಾನು, ಹಿಂದುಳಿದ ವರ್ಗ ಎ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಸದಸ್ಯರಾದ ಶರತ್ ಕುಮಾರ್ ಮತ್ತು ಪಾಹಿಂ ಬೆಳಪು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ನಫೀಜಾ ಹಾಗೂ ಪಾಹಿಂ ಕಣದಿಂದ ಹಿಂದೆ ಸರಿದರು.
ಇದನ್ನೂ ಓದಿ:ಇನ್ನಂಜೆ ಗ್ರಾಮ ಪಂಚಾಯತ್ನಲ್ಲಿ ಮತ್ತೆ ಬಿಜೆಪಿ ಆಡಳಿತ ಅಧಿಕಾರಕ್ಕೆ
ಕಣದಲ್ಲಿ ಉಳಿದ ಶೋಭಾ ಮತ್ತು ಶರತ್ ಆಯ್ಕೆಯನ್ನು ಚುನಾವಣಾಧಿಕಾರಿ ವೀಣಾ ವಿವೇಕಾನಂದ ಘೋಷಿಸಿದರು. ಆಡಳಿತಾಧಿಕಾರಿ ಸಂತೋಷ್, ಪಿಡಿಒ ರಮೇಶ್ ಹಾಗೂ ಕಾರ್ಯದರ್ಶಿ ಸುಮಿತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ