Karnataka: ಭಕ್ತವತ್ಸಲ ಸಮಿತಿ ವರದಿ: ಇಂದು ಸಂಪುಟದಲ್ಲಿ ಚರ್ಚೆ


Team Udayavani, Oct 4, 2023, 11:18 PM IST

vidhana soudha

ಬೆಂಗಳೂರು: ಬಿಹಾರದ ಜಾತಿಗಣತಿ ಬಹಿರಂಗವಾಗುತ್ತಿದ್ದಂತೆ ರಾಜ್ಯದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಅಯೋಗದಿಂದ ಪಡೆದು ಬಹಿರಂಗಪಡಿಸಬೇಕು, ನ್ಯಾ| ಡಾ| ಕೆ. ಭಕ್ತವತ್ಸಲ ಸಮಿತಿಯ ವರದಿ ಜಾರಿಯಾಗಬೇಕು ಎಂಬಿತ್ಯಾದಿ ಕೂಗು ಎದ್ದಿದೆ.
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ನ್ಯಾ| ಭಕ್ತವತ್ಸಲ ಸಮಿತಿಯ ವರದಿ ಚರ್ಚೆಗೆ ಬರುವ ಸಾಧ್ಯತೆಗಳಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರವೂ ಸೇರಿದಂತೆ ಜಾತಿಗಣತಿ ಮತ್ತು ಮೀಸಲಾತಿ ಬಗ್ಗೆ ಸಮಾಲೋಚನೆ ನಡೆಯಲಿದೆ.

ಹಿಂದುಳಿದ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಮುಂದೆ ಪ್ರಕರಣವಿದ್ದರಿಂದ ಸಮಿತಿ ರಚಿಸಿದ್ದ ಹಿಂದಿನ ಸರಕಾರ, 2022ರಲ್ಲಿ ಮಧ್ಯಾಂತರ ವರದಿ ಪಡೆದು ಸಂಪುಟ ಸಭೆಯಲ್ಲಿ ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು.

2023ರ ಜೂನ್‌ ತಿಂಗಳಲ್ಲಿ ಸಮಿತಿಯು ತನ್ನ ಅಂತಿಮ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿದ್ದು, ರಾಜಕೀಯ ಪ್ರಾತಿನಿಧ್ಯ ಖಚಿತವಾದ ಅನಂತರವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವುದರಿಂದ ಈ ವರದಿ ಪ್ರಮುಖ ಪಾತ್ರ ವಹಿಸಲಿದೆ.

ಹಿಂದುಳಿದ ವರ್ಗಗಳನ್ನು ನಾಲ್ಕು ಪ್ರವರ್ಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿದ್ದ ಸಮಿತಿ, ಶೇ.33 ರಷ್ಟು ಮೀಸಲಾತಿ ನಾಲ್ಕೂ ಪ್ರವರ್ಗಗಳಿಗೆ ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು. ಪ್ರವರ್ಗ-1 ರಲ್ಲಿರುವ ಅತ್ಯಂತ ಹಿಂದುಳಿದ 381 ಜಾತಿಗಳಿಗೆ ಶೇ.99, ಪ್ರವರ್ಗ-2 ರಡಿ 367 ಜಾತಿಗಳಿಗೆ ಶೇ.99, ಪ್ರವರ್ಗ-“ಬಿ’ಯಲ್ಲಿರುವ ಮುಸ್ಲಿಂ, ಪ್ರವರ್ಗ-3(ಎ)ದಲ್ಲಿರುವ ಕೊಡವ, ಬಲಿಜ ಹಾಗೂ ಇನ್ನಿತರ 12 ಜಾತಿಗಳು ಮತ್ತು ಪ್ರವರ್ಗ-3 (ಬಿ)ಯಲ್ಲಿರುವ ಮರಾಠ, ಉಪಜಾತಿಗಳು, ಕ್ರಿಶ್ಚಿಯನ್‌ ಸೇರಿ ಒಟ್ಟು 32 ಜಾತಿಗಳಿಗೆ ಶೇ.6.6 ಹಾಗೂ ಪ್ರವರ್ಗ-4 ರಡಿ ಪ್ರವರ್ಗ-3 (ಎ)ದಲ್ಲಿರುವ ಒಕ್ಕಲಿಗ ಮತ್ತು 19 ಉಪಜಾತಿ, ಪ್ರವರ್ಗ-3 (ಬಿ) ಯಲ್ಲಿರುವ ವೀರಶೈವ ಲಿಂಗಾಯತ ಮತ್ತು ಉಪಜಾತಿಗಳಿಗೆ ಶೇ.6.6 ರಷ್ಟು ಮೀಸಲಾತಿ ಕಲ್ಪಿಸುವ ಕುರಿತಂತೆ ಸಮಿತಿ ಶಿಫಾರಸು ಮಾಡಿತ್ತು.

 

ಟಾಪ್ ನ್ಯೂಸ್

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Somwarpet ಮರ ಬಿದ್ದು ಕಾರ್ಮಿಕ ಸಾವು

Somwarpet ಮರ ಬಿದ್ದು ಕಾರ್ಮಿಕ ಸಾವು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Somwarpet ಮರ ಬಿದ್ದು ಕಾರ್ಮಿಕ ಸಾವು

Somwarpet ಮರ ಬಿದ್ದು ಕಾರ್ಮಿಕ ಸಾವು

1-wewwqewq

Bantwal: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.