ಭಾರತದ ಮೇಲೆ ಚೀನದಿಂದ ದೊಡ್ಡ ದಾಳಿ?

ಭಾರತ ವಿಚಾರದಲ್ಲಿ ಅನುಭವಿಸಿದ ಅಪಮಾನ ಮೆಟ್ಟಲು ಚೀನ ಅಧ್ಯಕ್ಷ ಸಿದ್ಧತೆ

Team Udayavani, Sep 15, 2020, 6:00 AM IST

ಭಾರತದ ಮೇಲೆ ಚೀನದಿಂದ ದೊಡ್ಡ ದಾಳಿ?

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಲಡಾಖ್‌ ಬಳಿಯಿರುವ ಭಾರತ -ಚೀನ ಗಡಿ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಭೂಭಾಗಗಳನ್ನು ಅತಿಕ್ರಮಿಸಲು ಅನೇಕ ಬಾರಿ ಪ್ರಯತ್ನಿಸಿ ಮಣ್ಣುಮುಕ್ಕಿರುವ ಚೀನ, ಭಾರತದ ಮೇಲೆ ದೊಡ್ಡ ಮಟ್ಟದ ಆಕ್ರಮಣ ನಡೆಸಬಹುದು ಎಂಬ ಅಭಿಪ್ರಾಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿವೆ.

ಜೂನ್‌ನಲ್ಲಿ ಗಾಲ್ವಾನ್‌ನಲ್ಲಿ, ಭಾರತೀಯ ಯೋಧರ ಮೇಲೆ ಚೀನ ಸೈನಿಕರು ಹಠಾತ್‌ ದಾಳಿ ನಡೆಸಿದ್ದರು. ಆಗ, 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದು ಭಾರತೀಯ ಯೋಧರು ನೀಡಿದ ತಿರುಗೇಟಿಗೆ 60ಕ್ಕೂ ಹೆಚ್ಚು ಚೀನ ಯೋಧರು ಅಸುನೀಗಿದ್ದರು. ಇತ್ತೀಚೆಗೆ, ಸೆ.8ರಂದು ಲಡಾಖ್‌ನ ಪಾಂಗಾಂಗ್‌ ಸರೋವರದ ಫಿಂಗರ್‌ 3 ಪ್ರಾಂತ್ಯದಲ್ಲಿ ಚೀನ ಸೈನಿಕರು, ಭಾರತಕ್ಕೆ ಸೇರಿದ ಕೆಲ ಪ್ರದೇಶಗಳನ್ನು ಆಕ್ರಮಿಸಲು 2 ಬಾರಿ ಯತ್ನಿಸಿದ್ದಾಗ ಭಾರತೀಯ ಯೋಧರು ಅವರನ್ನು ಹಿಮ್ಮೆಟ್ಟಿಸಿದ್ದರು.

ಇಂಥ ಸತತ ಹಿನ್ನಡೆಗಳು ಚೀನ ಸೇನೆಯ ಈ ವೈಫ‌ಲ್ಯಗಳು ಸೇನೆಯ ಮುಖ್ಯಸ್ಥರೂ ಆಗಿರುವ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ತೀವ್ರ ಮುಖಭಂಗ ಉಂಟು ಮಾಡಿವೆೆ. ರಾಜಕೀಯ ವಲಯ ಮಾತ್ರವಲ್ಲ, ಸೇನೆಯೊಳಗೇ ತಾವು ನಗೆಪಾಟಲಿಗೆ ಈಡಾಗಿರುವುದರಿಂದ ಅವರು ಭಾರತದ ಮೇಲೆ ಮತ್ತೂಂದು ಸುತ್ತಿನ ದಾಳಿ ನಡೆಸಲು ಷಡ್ಯಂತ್ರ ರೂಪಿಸಬಹುದು ಎಂದು “ನ್ಯೂಸ್‌ವೀಕ್‌’ನಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ ಗಾರ್ಡನ್‌ ಜಿ. ಚಾಂಗ್‌ ಎಂಬ ತಜ್ಞರು ಅಂದಾಜಿಸಿದ್ದಾರೆ.

ರಾಜತಾಂತ್ರಿಕ ಷಡ್ಯಂತ್ರ: ಮತ್ತೂಂದೆಡೆ, ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ) ಯೋಜನೆಯ ಸುಗಮ ಅನುಷ್ಠಾನಕ್ಕಾಗಿ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತನ್ನ ರಾಯಭಾರಿಗಳನ್ನು ಚೀನ ಬದಲಿಸಲು ಕ್ರಮ ಕೈಗೊಂಡಿದೆ. ಜಿನ್‌ಪಿಂಗ್‌ ಅವರ ಆಪ್ತರನ್ನೇ ರಾಯಭಾರಿಗಳನ್ನಾಗಿಸಿ ಬಿಆರ್‌ಐ ಯೋಜನೆಗೆ ಆ ರಾಷ್ಟ್ರಗಳು ಅನುವು ಮಾಡಿಕೊಡಲು ಬೇಕಾದ ಲಾಬಿಗಳನ್ನು ನಡೆಸಲು ಚೀನ ತಂತ್ರಗಾರಿಕೆ ರೂಪಿಸಿದೆ. ಈ ಯೋಜನೆ ವಿರೋಧಿಸಿರುವ ಭಾರತವನ್ನು ಈ ವಿಚಾರದಲ್ಲಿ ಏಕಾಂಗಿಯಾಗಿಸಲು ಈ ಪ್ರಯತ್ನಕ್ಕೆ ಚೀನ ಕೈ ಹಾಕಿದೆ.

ಚೀನದಿಂದ ಒಎಫ್ ಕೇಬಲ್‌ ಅಳವಡಿಕೆ: ಭಾರತ-ಚೀನ ನೈಜ ಗಡಿ ರೇಖೆ ಬಳಿಯಿರುವ ಪಾಂಗಾಂಗ್‌ ಸರೋವರದ ದಕ್ಷಿಣ ಭಾಗದಲ್ಲಿ ಚೀನ ಸರಕಾರ, ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು ಹಾಕಲು ಸಿದ್ಧತೆ ನಡೆಸಿದೆ ಎಂದು ಭಾರತ ಹೇಳಿದೆ. ಗಡಿ ರೇಖೆಯ ಸಮೀಪದಲ್ಲಿರುವ ಚೀನ ಸೇನೆ, ಗಡಿ ರೇಖೆಗಿಂತ ತುಂಬಾ ಹಿಂದೆ ಇರುವ ತನ್ನ ಸೇನಾ ನೆಲೆಗಳಿಗೆ ತ್ವರಿತವಾಗಿ ಸಂದೇಶಗಳನ್ನು ರವಾನಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕೇಬಲ್‌ಗಳನ್ನು ಹಾಕುತ್ತಿದೆ ಎಂದಿದೆ.

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.