ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಈಗ ಮಾದರಿ

26ರಿಂದ 170ಕ್ಕೆ ಏರಿದ ಮಕ್ಕಳ ಸಂಖ್ಯೆ ; ಚಿತ್ತಾಕರ್ಷಕ ಚಿತ್ರಗಳಿಂದ ಮಕ್ಕಳ ಕೈಬೀಸಿ ಕರೆಯುತ್ತಿದೆ ಶಾಲೆ; ಶಿಕ್ಷಕ ಕೃಷ್ಣಾರೆಡ್ಡಿ ಕಾರ್ಯಕ್ಕೆ ಜನ ಮೆಚ್ಚುಗೆ

Team Udayavani, Sep 7, 2021, 4:21 PM IST

ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಈಗ ಮಾದರಿ

ಚೇಳೂರು: ಗಡಿಭಾಗದ ಈ ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟರೆ ಸಾಕು ನೀವು ರೈಲು, ಕೆಎಸ್‌ಆರ್‌ಟಿಸಿ ಬಸ್‌, ವಿಧಾನಸೌಧ, ಹೂ, ಗ್ಲೋಬ್‌, ಹೀಗೆ ಹಲವು ಸ್ಥಳಗಳದರ್ಶನ ಪಡೆಯಬಹುದು. ಅಷ್ಟರ ಮಟ್ಟಿಗೆ ಗೋಡೆಗಳ ಮೇಲೆ ಚಿತ್ರ ಬಿಡಿಸಿ ಶಾಲೆಯನ್ನು ಆಕರ್ಷಣೀಯ ಕೇಂದ್ರವಾಗಿಸಲಾಗಿದೆ.ಖಾಸಗಿ ಶಾಲೆಯನ್ನೂ ಮೀರಿಸುವಂತೆ ಅಭಿವೃದ್ಧಿ ಪಡಿಸಿರುವ ಸಹಶಿಕ್ಷಕ ಐ.ವಿ.ಕೃಷ್ಣಾರೆಡ್ಡಿ, ಮುಖ್ಯ ಶಿಕ್ಷಕ ಮುಖ್ಯ ಶಿಕ್ಷಕ ಟಿ.ವೆಂಕಟ ರಮಣಪ್ಪ ಅವರ ಇಚ್ಛಾಶಕ್ತಿ ಇತರರಿಗೆ ಮಾದರಿ ಆಗಿದೆ.

ಸ್ವಾತಂತ್ರ್ಯ ಪೂರ್ವ 1926ರಲ್ಲಿ ಪ್ರಾರಂಭಿಸಲಾಗಿದ್ದ ಈ ಶಾಲೆಯು 2014-15ನೇ ಸಾಲಿನಲ್ಲಿ ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ
ತಲುಪಿತ್ತು. ಇಂತಹ ಸಂದರ್ಭದಲ್ಲಿ ಗಡಿಭಾಗದ ಶಾಲೆ ಉಳಿಸಿಕೊಳ್ಳಲೇ ಬೇಕೆಂದು ಸಿಆರ್‌ಪಿ ಆಗಿದ್ದ ಐ.ವಿ. ಕೃಷ್ಣಾರೆಡ್ಡಿ ಅವರನ್ನು ಬಲವಂತ ದಿಂದ ಇಲ್ಲಿಗೆ ವರ್ಗಾವಣೆ ಮಾಡಿತ್ತು. ಇವರು ಬಂದ ನಂತರ ಶಾಲೆಯ ಸ್ವರೂಪವೇ ಬದಲಾಗಿದೆ.

ಹಿಂದೆಯೂ ಶಾಲಾಭಿವೃದ್ಧಿಗೆ ಶ್ರಮಿಸಿದ್ದ ಶಿಕ್ಷಕ: ಇದೇ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದ ಐ.ವಿ.ಕೃಷ್ಣಾರೆಡ್ಡಿ ಗ್ರಾಪಂ ಸದಸ್ಯರು, ದಾನಿಗಳ ಸಹಕಾರ ದೊಂದಿಗೆ ಶಾಲೆಗೆ ಪೀಠೊಪಕರಣ, ಕ್ರೀಡಾ ಸಾಮಗ್ರಿಗಳು,ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿ ಆಗಿದ್ದರು. ಈ ಮೂಲಕ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚಿಸಲು ಶ್ರಮವಹಿಸಿದ್ದರು.

ಕೃಷ್ಣಾರೆಡ್ಡಿ ಅವರ ಕಾರ್ಯವೈಖರಿಯನ್ನು ಮೆಚ್ಚಿ2013- 14ನೇ ಸಾಲಿನಲ್ಲಿ ಅಂದಿನ ಬಿಇಒ ಕೆ.ವೆಂಕಟೇಶ್‌ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಲು ಶ್ರಮಿಸಿದ್ದರು. ಆಗ ಶಾಲೆಯಲ್ಲಿ 32 ಮಕ್ಕಳಿದ್ದರು. ನಂತರ 2014-15ನೇ ಸಾಲಿನಲ್ಲಿ ಮುಖ್ಯ ಶಿಕ್ಷಕ ಕೃಷ್ಣಾರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಯಿತು. ನಂತರ ಶಾಲೆಯ ಮಕ್ಕಳ ಸಂಖ್ಯೆ 26ಕ್ಕೆ ಇಳಿಯಿತು. ಉಳಿದ ಮಕ್ಕಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಲು ಮುಂದಾಗಿದ್ದರಿಂದ ಅನಿವಾರ್ಯವಾಗಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪಿತ್ತು. ಮತ್ತೆ ಶಾಲೆಗೆ ವರ್ಗಾವಣೆ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭ ವಾದ ಶಾಲೆ ಉಳಿಸಲು ಚಿಂತಾಮಣಿ ತಾಲೂಕು ಕಡದಲಮರಿ ಕೇಂದ್ರದ ಸಿಆರ್‌ಪಿ ಆಗಿದ್ದ ಐ.ವಿ.ಕೃಷ್ಣಾರೆಡ್ಡಿ ಅವರನ್ನು 2017-18ನೇ ಸಾಲಿನಲ್ಲಿ ಬಲವಂತವಾಗಿ ವರ್ಗಾವಣೆ ಮಾಡಲಾಯಿತು.ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನುಉಳಿಸಲಾಯಿತು.

ಇದನ್ನೂ ಓದಿ:ಶುಗರ್‌ಲೆಸ್‌ ಚಿತ್ರದ ‘ತಾಯಾಣೆ’ ಹಾಡಿಗೆ ಮೆಚ್ಚುಗೆ

ಗೋಡೆಗಳ”ಚಿತ್ರ’ಣವೇ ಬದಲು: ಶಾಲೆಗೆವರ್ಗಾವಣೆ ಆಗಿ ಬಂದ ಶಿಕ್ಷಕ ಕೃಷ್ಣಾರೆಡ್ಡಿ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಂಪೌಂಡ್‌,‌ ಅಡುಗೆ ಕೋಣೆ, ಶೌಚಾಲಯ ಕಟ್ಟಿಸಿ, ಮಳೆ ನೀರಿಂದ ತೇವಗೊಂಡು ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಶಾಲಾ ಕೊಠಡಿ ಗಳಿಗೆ ಸುಣ್ಣ ಬಣ್ಣ ಬಳಿಸಿದರು. ಕಚೇರಿ ಗೋಡೆಯ ಮೇಲೆ ವಿಧಾನಸೌಧ, ಶಾಲಾ ಕೊಠಡಿಗಳ ಮೇಲೆ ಕೆಎಸ್‌ಆರ್‌ಟಿಸಿ ಬಸ್‌, ರೈಲು, ಹೂಗಳು ಮುಂತಾದ ಚಿತ್ರಗಳು ಬಿಡಿಸಿ ಮಕ್ಕಳು, ಪೋಷಕರ ಚಿತ್ತಾಕರ್ಷಣೆ ಮಾಡಿದರು.

ಮುಖ್ಯ ಶಿಕ್ಷಕರ ಸಹಕಾರ: ಶಿಕ್ಷಕ ಕೃಷ್ಣಾರೆಡ್ಡಿ ಅವರ ಕಾರ್ಯಕ್ಕೆ ಮುಖ್ಯ ಶಿಕ್ಷಕ ಟಿ.ವೆಂಕಟರಮಣಪ್ಪ ಬೆನ್ನೆಲುಬಾಗಿದ್ದಾರೆ. ಸಹ ಶಿಕ್ಷಕರು, ಗ್ರಾಮ ಸ್ಥರು ಉತ್ತಮ ಸಹಕಾರ ನೀಡುತ್ತಿದ್ದಾರೆ.ಇದರಿಂದ ಮುಚ್ಚುವ ಹಂತದಲ್ಲಿದ್ದ ಇತಿಹಾಸವುಳ್ಳ ಶಾಲೆಯ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಕೇಳಿ ಬಂದಿದೆ. ಶಾಲೆಗೆ ಯಾರೇ ಭೇಟಿ ನೀಡಲಿ ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತನಾಡಿ, ಮಕ್ಕಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.

ಕೋವಿಡ್‌ ಸಮಯದಲ್ಲೂ ಕೆಲಸ: ಕೋವಿಡ್‌ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮುಚ್ಚಿದ್ದಾಗಲೂ, ಶಿಕ್ಷಕ ಕೃಷ್ಣಾರೆಡ್ಡಿ ಅವರು ಶಾಲೆಗೆ ಹಾಜರಾಗಿ, ಶಾಲಾ ಕೊಠಡಿಗಳಲ್ಲಿನ ಕಸವನ್ನು ಗುಡಿಸಿ, ಆವರಣದಲ್ಲಿನ ಗಿಡಗಳಿಗೆ ನೀರು ಹಾಕುವುದು, ಗುಂಡಿ ಮಾಡುವುದು, ಇತರೆಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. ಇಂತಹ ಕಾರ್ಯಗಳಿಂದ ‌ 7 ಬಾರಿ ಜನಮೆಚ್ಚಿದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಯಶಸ್ವಿದಾಖಲಾತಿ ಆಂದೋಲನಾ:ಕೇವಲ ಶಾಲೆಯ ಸೌಂದರ್ಯಕ್ಕೆ ಒತ್ತು ನೀಡದ ಶಿಕ್ಷಕ ಕೃಷ್ಣಾರೆಡ್ಡಿ, ಮುಖ್ಯ ಶಿಕ್ಷಕರು, ಸಿಬ್ಬಂದಿ ಸರ್ಕಾರದ ಆದೇಶದಂತೆ ಪರಿಣಾಮಕಾರಿ ಆಗಿ ದಾಖಲಾತಿ ಆಂದೋಲನ ನಡೆಸಿದರು. ಊರೂರು, ಮನೆಗಳನ್ನು ಸುತ್ತಿ ಎಲ್‌ ಕೆಜಿಯಿಂದ 7ನೇ ತರಗತಿ ವರೆಗೂ ಒಟ್ಟು172 ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ ಹೋಬಳಿಯಲ್ಲೇ ಜನಮನ ಮೆಚ್ಚಿದ ಸರ್ಕಾರಿ ಶಾಲೆ ಆಗಿದೆ.

ಶಾಸಕರ ಮೆಚ್ಚುಗೆ:ಈ ಶಾಲೆಗೆ ಇತ್ತೀಚಿಗೆ ಭೇಟಿ ನೀಡಿದ್ದ ಕ್ಷೇತ್ರದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಶಿಕ್ಷಕರ ಕಾರ್ಯ ವೈಖರಿಗೆ ಮುಚ್ಚುಗೆ ವ್ಯಕ್ತ ಪಡಿಸಿದ್ದರು. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆ ತೆರೆದು 172 ಮಕ್ಕಳನ್ನು ದಾಖಲಾತಿ ಮಾಡಿ, ಶಾಲಾ ಕಚೇರಿ, ಕೊಠಡಿಗಳಿಗೆ ಸಣ್ಣ ಬಣ್ಣ ಬಳಿಸಿ
ಸುಂದರವಾಗಿ ಮಾಡಿದ್ದಕ್ಕೆ ಶಿಕ್ಷಕ ‌ವೃಂದವನ್ನು ಅಭಿನಂದಿಸಿದ್ದಾರೆ.

ಶಿಕ್ಷಕ ಮನಸ್ಸು ಮಾಡಿದ್ರೆ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಶಾಲೆಯನ್ನೂ ಅಭಿವೃದ್ಧಿಪಡಿಸಿ ಮಕ್ಕಳ ದಾಖಲಾತಿಯೂ ಹೆಚ್ಚಿಸಬಲ್ಲ ಎಂಬುದಕ್ಕೆ ಹೋಬಳಿ ಕೇಂದ್ರದಲ್ಲಿನ ಈ ಮಾದರಿ ಪ್ರಾಥಮಿಕ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.

ಮಕ್ಕಳ ಪೋಷಕರು, ದಾನಿಗಳು ನೆರವಿನ ಜೊತೆಗೆ ಸಹಕಾರವೂ ನೀಡುತ್ತಿದ್ದಾರೆ. ಇದೀಗ ಶಾಲಾ ಮುಂಭಾಗದಲ್ಲಿ ಪಾರ್ಕ್‌ ನಿರ್ಮಾಣ ಮಾಡ ಬೇಕಾಗಿದೆ. ಶಾಸಕರೂ ಸಹಕಾರಕೊಡುತ್ತಿದ್ದಾರೆ. ಶಾಲೆಗೆ ಸಹಾಯ ಹಸ್ತ ಚಾಚುತ್ತಿರುವ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ.
– ಟಿ.ವೆಂಕಟರಮಣಪ್ಪ, ಮುಖ್ಯಶಿಕ್ಷಕ, ಸರ್ಕಾರಿ ಮಾದರಿ
ಶಾಲೆ, ಚೇಳೂರು

ಚೇಳೂರು ಹೃದಯ ಭಾಗದಲ್ಲಿನ ಸರ್ಕಾರಿ ಶಾಲೆಯಲ್ಲಿ ಸ್ವತ್ಛತೆಕಾಪಾಡುವುದರ ಜೊತೆಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಪೋಷಕರೊಂದಿಗೆ
ಪ್ರೀತಿ- ವಿಶ್ವಾಸ ಬೆಳೆಸಿಕೊಂಡಿರುವುದು ಸಂತಸದವಿಷಯ. ಈ ಶಾಲೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ.
– ಎಸ್‌.ಎನ್‌.ಸುಬ್ಟಾರೆಡ್ಡಿ, ಶಾಸಕ, ಬಾಗೇಪಲ್ಲಿ.

ಮಕ್ಕಳ ದಾಖಲಾತಿ ಕಳೆದ ವರ್ಷಕ್ಕಿಂತ ಹೆಚ್ಚಿದೆ.ಇಲ್ಲಿನ ಶಿಕ್ಷಕರು ಶಾಲೆ ಉಳಿ ಸಲು ಅವಿರತ ಶ್ರಮಿಸುತ್ತಿದ್ದಾರೆ. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಗೆ ಮರುಜೀವನ ನೀಡಿದ ಇಲ್ಲಿನ ಶಿಕ್ಷಕರಿಗೆ ಇಲಾಖೆಯು ಅಭಿನಂದಿಸಿ ಪ್ರೋತ್ಸಾಹಿಸಬೇಕಿದೆ.
– ಟೀ ಹೋಟೆಲ್‌ ರಂಜಾನ್‌,
ಚಿನ್ನಮಲ್ಲಪ್ಪ, ಪೋಷಕರು, ಚೇಳೂರು.

-ಪಿ.ವಿ.ಲೋಕೇಶ್‌

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.