ಕಾಂಗ್ರೆಸ್‌ ಪ್ರಮುಖ ಟ್ವಿಟರ್‌ ಖಾತೆಯೇ ಬಂದ್‌

ಐಎನ್‌ಸಿ ಇಂಡಿಯಾ ಖಾತೆಯೂ ಸ್ಥಗಿತ; 21 ನಾಯಕರು, 7 ಪಕ್ಷದ ಖಾತೆಗಳು ಸ್ತಬ್ಧ

Team Udayavani, Aug 12, 2021, 10:45 PM IST

ಕಾಂಗ್ರೆಸ್‌ ಪ್ರಮುಖ ಟ್ವಿಟರ್‌ ಖಾತೆಯೇ ಬಂದ್‌

ನವದೆಹಲಿ: ಟ್ವಿಟರ್‌ ಮತ್ತು ಕಾಂಗ್ರೆಸ್‌ ನಡುವಿನ “ಖಾತೆ’ ಕ್ಯಾತೆ ಜೋರಾಗಿದೆ. ದೆಹಲಿಯ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಸಂತ್ರ ಸ್ತೆಯ ಹೆತ್ತವರ ಫೋಟೋ ಹಾಕಿದ್ದ ಆರೋಪದ ಮೇಲೆ ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯನ್ನು ಸ್ತಬ್ಧ ಮಾಡಿದ್ದ ಟ್ವಿಟರ್‌ ಇಂಡಿಯಾ, ಈಗ 21 ನಾಯಕರು ಮತ್ತು ಪಕ್ಷದ ಪ್ರಮುಖ ಖಾತೆ ಹಾಗೂ ಕೆಲವು ರಾಜ್ಯಗಳ ಅಕೌಂಟ್‌ಗಳನ್ನೂ ಬ್ಲ್ಯಾಕ್‌ ಮಾಡಿದೆ.

ನಿಯಮಾವಳಿಗಳ ಉಲ್ಲಂಘನೆ ಆರೋಪದ ಮೇಲೆ ಈ ಎಲ್ಲಾ ಖಾತೆಗಳನ್ನು ಬಂದ್‌ ಮಾಡಲಾಗಿದೆ ಎಂದು ಟ್ವಿಟರ್‌ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌, ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಟ್ವಿಟರ್‌ ಈ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.

ಮೋದಿ ಸರ್ಕಾರದ ಮಾತಿನಂತೆ ವರ್ತಿಸುತ್ತಿರುವ ಟ್ವಿಟರ್‌ ಸಂಸ್ಥೆ, ನಮ್ಮ ಧ್ವನಿಯನ್ನು ಅಡಗಿಸುತ್ತಿದೆ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ಆರೋಪಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ, ತ.ನಾಡು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ: ಸಿ.ಟಿ.ರವಿ

ಯಾವ ಖಾತೆಗಳು ಬಂದ್‌?
ಐಎನ್‌ಸಿ ಇಂಡಿಯಾ(ಕಾಂಗ್ರೆಸ್‌ನ ಪ್ರಮುಖ ಅಕೌಂಟ್‌), ಮುಂಬೈ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ದಾಮನ್‌ ಆ್ಯಂಡ್‌ ದಿಯು, ತಮಿಳುನಾಡು ಕಾಂಗ್ರೆಸ್‌ ಸಮಿತಿಗಳ ಖಾತೆ ಬಂದ್‌ ಆಗಿವೆ. ಇನ್ನು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ರಣದೀಪ್‌ ಸುರ್ಜೆವಾಲಾ, ಅಜಯ್‌ ಮಾಕೇನ್‌, ಕೆ.ಸಿ. ವೇಣುಗೋಪಾಲ್‌, ಮಣಿಕ್ಕನ್‌ ಟ್ಯಾಗೋರ್‌, ಸುಶ್ಮಿತಾ ದೇವ್‌, ಹರೀಶ್‌ ಸಿಂಗ್‌ ರಾವತ್‌, ಚೆಲ್ಲ ಕುಮಾರ್‌ ಸೇರಿದಂತೆ 21 ನಾಯಕರ ಖಾತೆಗಳೂ ಬ್ಲ್ಯಾಕ್‌ ಆಗಿವೆ. ಹಾಗೆಯೇ ಮಹಾರಾಷ್ಟ್ರ ಕಾಂಗ್ರೆಸ್‌ನ 500 ನಾಯಕರ ಖಾತೆಗಳನ್ನು ಬಂದ್‌ ಮಾಡಲಾಗಿದೆ.

ಎಲ್ಲರ ಪ್ರೊಫೈಲ್‌ನಲ್ಲೂ ರಾಹುಲ್‌!
ರಾಹುಲ್‌ ಖಾತೆ ಬ್ಲಾಕ್‌ ಮಾಡಿರುವುದನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ದೇಶಾದ್ಯಂತ ಕಾಂಗ್ರೆಸ್‌ನ ಬಹುತೇಕ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ತಮ್ಮ ಖಾತೆಗಳ ಪ್ರೊಫೈಲ್‌ನಲ್ಲಿ ರಾಹುಲ್‌ ಫೋಟೋಗಳನ್ನು ಹಾಕಿ ಕೊಂಡಿದ್ದಾರೆ. ಗುರುವಾರ ಪ್ರಿಯಾಂಕಾ ವಾದ್ರಾ ಅವರ ಖಾತೆಯಲ್ಲೂ ರಾಹುಲ್‌ ಅವರ ಪ್ರೊಫೈಲ್‌ ಫೋಟೋ ಪ್ರತ್ಯಕ್ಷವಾಗಿದೆ.

ಟಾಪ್ ನ್ಯೂಸ್

tdy-24

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸಂಸ್ಕೃತದಲ್ಲಿ ಬಿಲ್‌!

ಜಮ್ಮುವಿನ ದಾಸ್ತಾನು ಕೇಂದ್ರದಲ್ಲಿ ಇನ್ನು ಮುಂದೆ ಸಂಸ್ಕೃತದಲ್ಲಿ ಬಿಲ್‌!

ಅಂಜನಾದ್ರಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ ಮಾಡದಂತೆ ಹಿಂಜಾವೇ ಹಾಕಿದ್ದ ಬ್ಯಾನರ್ ತೆರವು

ಅಂಜನಾದ್ರಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ ಮಾಡದಂತೆ ಹಿಂಜಾವೇ ಹಾಕಿದ್ದ ಬ್ಯಾನರ್ ತೆರವು

shettar

ಗಡಿ ವಿವಾದ ಮಹಾರಾಷ್ಟ್ರದ ರಾಜಕೀಯ ಗಿಮಿಕ್: ಜಗದೀಶ ಶೆಟ್ಟರ್

ಡಿ. 16,17,18 : ಕಾಪುವಿನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ 2022: ಶಾಸಕ ಲಾಲಾಜಿ ಆರ್. ಮೆಂಡನ್

ಡಿ. 16,17,18 : ಕಾಪುವಿನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ 2022: ಶಾಸಕ ಲಾಲಾಜಿ ಆರ್. ಮೆಂಡನ್

addanda

ಮೈಸೂರಿನ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-24

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸಂಸ್ಕೃತದಲ್ಲಿ ಬಿಲ್‌!

ಜಮ್ಮುವಿನ ದಾಸ್ತಾನು ಕೇಂದ್ರದಲ್ಲಿ ಇನ್ನು ಮುಂದೆ ಸಂಸ್ಕೃತದಲ್ಲಿ ಬಿಲ್‌!

Do You Have 100 Heads Like Ravan? Mallikarjun kharge on PM Modi

ಮೋದಿಗೆ ರಾವಣನಂತೆ 100 ತಲೆಗಳಿವೆಯೇ?: ರಾಜಕೀಯ ಗದ್ದಲಕ್ಕೆ ಕಾರಣವಾಯ್ತು ಖರ್ಗೆ ಹೇಳಿಕೆ

ಉತ್ತರ ಪ್ರದೇಶದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮಿ ಸಿಂಗ್ ನೇಮಕ

ಉತ್ತರ ಪ್ರದೇಶದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ನೇಮಕ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

tdy-24

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಆರೆ ಕಾಲನಿಯಲ್ಲಿ ಮೆಟ್ರೋ ಕಾರ್‌ ಶೆಡ್‌ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅಸ್ತು

ಬಿಜೆಪಿಯಿಂದ ಮತ ಕಳ್ಳತನ ಕೃತ್ಯ: ಡಿಕೆ ಶಿವಕುಮಾರ್‌

ಬಿಜೆಪಿಯಿಂದ ಮತ ಕಳ್ಳತನ ಕೃತ್ಯ: ಡಿಕೆ ಶಿವಕುಮಾರ್‌

ಕಲುಷಿತ ನೀರು ಸೇವಿಸಿ ಬಚನಾಳ ಗ್ರಾಮದಲ್ಲಿ ವಾಂತಿ ಬೇಧಿ: ಇಪ್ಪತ್ತಕ್ಕೂ ಹೆಚ್ಚು ಜನ ಅಸ್ವಸ್ಥ

ಕಲುಷಿತ ನೀರು ಸೇವಿಸಿ ಬಚನಾಳ ಗ್ರಾಮದಲ್ಲಿ ವಾಂತಿ ಬೇಧಿ: ಇಪ್ಪತ್ತಕ್ಕೂ ಹೆಚ್ಚು ಜನ ಅಸ್ವಸ್ಥ

ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸಂಸ್ಕೃತದಲ್ಲಿ ಬಿಲ್‌!

ಜಮ್ಮುವಿನ ದಾಸ್ತಾನು ಕೇಂದ್ರದಲ್ಲಿ ಇನ್ನು ಮುಂದೆ ಸಂಸ್ಕೃತದಲ್ಲಿ ಬಿಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.