ಸಿಂಗಾಪುರ ಆಹಾರೋದ್ಯಮಕ್ಕೂ ಹೊಡೆತ


Team Udayavani, May 6, 2020, 11:36 AM IST

ಸಿಂಗಾಪುರ ಆಹಾರೋದ್ಯಮಕ್ಕೂ ಹೊಡೆತ

ಸಿಂಗಾಪುರ: ವಿಶ್ವದಲ್ಲೇ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿಗೆ ಹೆಸರುವಾಸಿಯಾದ ದೇಶಗಳ ಪೈಕಿ ಸಿಂಗಾಪುರ ಗುರುತಿಸಿಕೊಂಡಿದೆ. ಇದೊಂದು ಅಂತಾರಾಷ್ಟ್ರೀಯ ಪ್ರವಾಸ ಕೇಂದ್ರವೂ ಹೌದು. ಹಾಗಾಗಿ ಇಲ್ಲಿ ಆಹಾರ ಮತ್ತು ಅತಿಥ್ಯ ಕ್ಷೇತ್ರಗಳು ಮುಂಚೂಣಿಯಲ್ಲಿವೆ.

ಆದರೆ ಕೋವಿಡ್‌-19 ಬಿಕ್ಕಟ್ಟಿನಿಂದಾಗಿ ಈ ವಾಣಿಜ್ಯ ನಗರಿ ನಲುಗುತ್ತಿದ್ದು, ಮುಖ್ಯವಾಗಿ ಪ್ರವಾಸಿಗರನ್ನೇ ನೆಚ್ಚಿ ಕೊಂಡಿದ್ದ ಹೊಟೇಲ್‌ ಉದ್ಯಮಿಗಳು ಮತ್ತು ಬೀದಿ ಬದಿ ಕ್ಯಾಂಟೀನ್‌ಗಳನ್ನು ನಡೆಸಿ ಜೀವನ ಮಾಡುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತಷ್ಟು ಹದಗೆಡಿಸಿತು
ಸಿಂಗಾಪುರದಲ್ಲಿ ಕೆಲ ಹೆಸರಾಂತ ಫುಡ್‌ ಸ್ಟ್ರೀಟ್ ಗಳಿದ್ದು, ಉತ್ತಮ ರುಚಿಯೊಂದಿಗೆ ಅಗ್ಗದ ಬೆಲೆಯಲ್ಲಿ ಆಹಾರ ಸಿಗುತ್ತದೆ. ಇದು ಪ್ರವಾಸಿಗರ ಆಕರ್ಷಣೀಯ ಸ್ಥಳಗಳೂ ಹೌದು. ಆದರೆ ಕೋವಿಡ್‌-19 ಆರ್ಭಟ ಪ್ರಾರಂಭವಾಗುವ ಮುನ್ನವೇ ಆರ್ಥಿಕ ಸಂಕಷ್ಟಕ್ಕೆ ಈ ಉದ್ಯಮಗಳು ಸಿಲುಕಿದ್ದು, ಈಗ ಮತ್ತಷ್ಟು ಹದಗೆಟ್ಟಿವೆ ಎಂದು ಅಲ್‌ ಜಜೀರಾ ವರದಿ ಮಾಡಿದೆ.

ದೇಶದಲ್ಲಿ ಏಪ್ರಿಲ್‌ 7 ರಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ಪರಿಣಾಮ ನಗರದ ಪ್ರತಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕನಿಷ್ಠ ಜೂನ್‌ 1 ರವರೆಗೆ ಕಡೆ ಇದೇ ಸ್ಥಿತಿ ಇರ ಬಹುದು ಎನ್ನಲಾಗುತ್ತಿದೆ. ಈಗಾಗಲೇ ವ್ಯಾಪಾರ ಪ್ರಮಾ ಣದಲ್ಲಿ ಮೂರನೇ ಎರಡು ಭಾಗದಷ್ಟು ಕುಸಿತವಾಗಿದೆ. ಆದ ಕಾರಣ ಇದೇ ವೃತ್ತಿಯನ್ನು ನಂಬಿಕೊಂಡವರೆಲ್ಲಾ ಅತಂತ್ರರಾಗಿದ್ದಾರೆ. ಇದರ ಮಧ್ಯೆ ಜೀವನ ಶೈಲಿ ಹಾಗೂ ಮತ್ತಿತರ ಕಾರಣಗಳಿಂದ ಜನರೂ ಸಣ್ಣ ಪುಟ್ಟ ಹೋಟೆಲ್‌-ಕ್ಯಾಂಟೀನ್‌ಗಳಲ್ಲಿನ ಆಹಾರ ಸೇವನೆಯಿಂದ ದೂರ ಉಳಿಯುತ್ತಿದ್ದಾರೆ. ಸರಕಾರವು ಸದ್ಯಕ್ಕೆ ಅಗತ್ಯ ವಸ್ತುಗಳ ಖರೀದಿಸುವಿಕೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಆದರೆ ನಮ್ಮನ್ನು ಮರೆತೇ ಬಿಟ್ಟಿದೆ ಎಂದು ಮಾಧ್ಯಮ ಗಳಿಗೆ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಜಾರಿಯಾದಾಗಿನಿಂದ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದ್ದು, ಶೇ.20 ರಿಂದ ಶೇ.30 ರಷ್ಟು ದರ ಏರಿಕೆಯಾಗಿದೆ. ಇದೂ ಸಹ ಉದ್ಯಮವನ್ನು ನಷ್ಟದತ್ತ ದೂಡುತ್ತಿದೆ.

ಹೋಮ್‌ ಡೆಲಿವರಿ ಉಪಾಯ
ಉದ್ಯಮವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಕೆಲವು ಉದ್ಯಮಿಗಳು ಹಾಗೂ ಕಂಪೆನಿಗಳು ಹೋಮ್‌ ಡೆಲಿವರಿಗೆ ಮುಂದಾಗಿವೆ. ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಲು ಫೇಸ್‌ಬುಕ್‌ ಮೊರೆಹೋಗಿದ್ದಾರೆ. ಯುನೈಟೆಡ್‌ -ಡಬಾವೊ 2020 ( ಹೋಮ್‌ ಡೆಲೆವರಿ ಎಂಬ ಅರ್ಥವನ್ನು ನೀಡಲಿದ್ದು ಅಲ್ಲಿನ ಆಡು ಭಾಷೆ ಇದಾಗಿದೆ ) ಎಂಬ ಖಾತೆ ತೆರೆದಿದ್ದು, ಸ್ಥಗಿತಗೊಂಡಿದ್ದ ವ್ಯಾಪಾರ ಚಟುವಟಿಕೆಗಳಿಗೆ ಪುನರಾರಂಭಿಸುವ ಪ್ರಯತ್ನ ನಡೆದಿದೆ. ಎಪ್ರಿಲ್‌ ಮೊದಲ ವಾರದಲ್ಲಿ ಈ ಖಾತೆ ರಚನೆಯಾಗಿದ್ದು, ಆರಂಭದ ದಿನಗಳಲ್ಲಿ ಕೇವಲ ಬೆರಳೆಣಿಕೆ ಯಷ್ಟು ಜನರಿ ದ್ದರು. ಆದರೆ ಪ್ರಸ್ತುತ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಅಂಗಡಿಗಳಲ್ಲಿ ನಡೆಯುತ್ತಿದ್ದ ನಿಗದಿತ ವ್ಯಾಪಾರ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆಯಾದರೂ, ಸಾಮಾಜಿಕ ಜಾಲತಾಣ ಮೂಲಕ ಗ್ರಾಹಕರು ಆರ್ಡರ್‌ಗಳನ್ನು ನೀಡುತ್ತಿದ್ದು, ಒಟ್ಟಾರೆ ವ್ಯವಹಾರದಲ್ಲಿ ಶೇ.50ರಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.