ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಚಿಲಿಂಬಿಯಲ್ಲಿ ಹಾಡಹಗಲೇ ನಡೆದ ಘಟನೆ

Team Udayavani, Sep 29, 2021, 1:38 AM IST

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಸಾಂದರ್ಭಿಕ ಚಿತ್ರ,

ಮಂಗಳೂರು ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆ ನಡೆಸಿ 4.20 ಲಕ್ಷ ರೂ. ಸುಲಿಗೆ ಮಾಡಿದ ಘಟನೆ ಮಂಗಳವಾರ ನಗರದ ಚಿಲಿಂಬಿಯ ಗಾಂಧಿನಗರದಲ್ಲಿ ನಡೆದಿದೆ.

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ ಭೋಜಪ್ಪ (57) ಅವರು ಮಧ್ಯಾಹ್ನ 12.30ರ ವೇಳೆಗೆ ಚಿಲಿಂಬಿಯಲ್ಲಿರುವ ಬ್ಯಾಂಕ್‌ ಖಾತೆಗೆ ಜಮೆ ಮಾಡಲೆಂದು 4.20 ಲ.ರೂ.ಗಳ‌ನ್ನು ಬ್ಯಾಗಿನಲ್ಲಿರಿಸಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದರು. ಚಿಲಿಂಬಿಯಲ್ಲಿ ಬೈಕನ್ನು ಯುಟರ್ನ್ ಮಾಡಿ ಬ್ಯಾಂಕ್‌ ಕಡೆಗೆ ತೆರಳುವಾಗ ಇಬ್ಬರು ತಡೆದು ನಿಲ್ಲಿಸಿ ಬ್ಯಾಟ್‌ನಿಂದ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪ ಅವರ ತಲೆ ಮತ್ತು ಭುಜಕ್ಕೆ ಗಾಯಗಳಾಗಿವೆ.

ಮಾಹಿತಿ ಇತ್ತೆ?
ಪೆಟ್ರೋಲ್‌ ಬಂಕ್‌ನಿಂದ ಬ್ಯಾಂಕ್‌ಗೆ ಪ್ರತೀದಿನ ಕೂಡ ಹಣವನ್ನು ಕೊಂಡೊಯ್ಯುವ ಬಗ್ಗೆ ಸುಲಿಗೆಕೋರರಿಗೆ ಮೊದಲೇ ಮಾಹಿತಿ ಇದ್ದು ಅದರಂತೆ ಯೋಜನೆ ರೂಪಿಸಿ ಸುಲಿಗೆ ನಡೆಸಿರುವ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ:ಶಿರಾಡಿ ರಸ್ತೆ ಎಲ್ಲ ವಾಹನಗಳಿಗೆ ಮುಕ್ತ

ಸರ ಕಳವು ನಡೆದಿತ್ತು
ಎರಡು ತಿಂಗಳ ಹಿಂದೆ ಚಿಲಿಂಬಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆಯರ ಸರ ಕಳವು ನಡೆದಿತ್ತು. ಮಾತ್ರವಲ್ಲದೆ ನಗರದ ಮೂರು ಕಡೆ ನಿಲ್ಲಿಸಲಾಗಿದ್ದ ಕಾರುಗಳ ಗಾಜು ಒಡೆದು ಬೆಲೆಬಾಳುವ ಸೊತ್ತುಗಳ ಕಳವು ನಡೆದಿತ್ತು. ಇದರೊಂದಿಗೆ ನಗರದ 6 ಕಡೆಗಳಲ್ಲಿ ಬೈಕ್‌ ಕಳ್ಳತನ ಘಟನೆಗಳು ಕೂಡ ನಡೆದಿದ್ದು ಕಳ್ಳರು, ದರೋಡೆಕೋರರ ಪತ್ತೆಯಾಗಿಲ್ಲ. ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಸುಲಿಗೆ ಪ್ರಕರಣದ ಅಣಕು ಪ್ರದರ್ಶನ ನಡೆಸಿದ್ದರು. ಕೆಲವು ದಿನಗಳಿಂದ ವಾಹನಗಳ ವಿಶೇಷ ತಪಾಸಣ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಮಂಗಳವಾರ ಸುಲಿಗೆ ಘಟನೆ ನಡೆದಿದೆ.

ಫ‌ುಡ್‌ ಡೆಲಿವರಿ ಸಂಸ್ಥೆಯ ಟಿ-ಶರ್ಟ್‌!
ಬೈಕ್‌ನಲ್ಲಿ ಬಂದಿದ್ದವರು ಫ‌ುಡ್‌ ಡೆಲಿವರಿ ಸಂಸ್ಥೆಯೊಂದರ ಸಮವಸ್ತ್ರದ ರೀತಿಯ ಟೀ ಶರ್ಟ್‌ ಧರಿಸಿದ್ದರು ಎಂದು ತಿಳಿದುಬಂದಿದೆ. ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಕೆಮರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇಬ್ಬರು ಕೂಡ ಹೆಲ್ಮೆಟ್‌ ಧರಿಸಿಯೇ ಕೃತ್ಯ ನಡೆಸಿರುವುದು ಗೊತ್ತಾಗಿದೆ.

ಟಾಪ್ ನ್ಯೂಸ್

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಪ್ರತಿಭಟನೆ ಹೆಸರಲ್ಲಿ ದೀರ್ಘಾವಧಿವರೆಗೆ ರಸ್ತೆ ತಡೆ ಸಲ್ಲದು

ಪ್ರತಿಭಟನೆ ಹೆಸರಲ್ಲಿ ದೀರ್ಘಾವಧಿವರೆಗೆ ರಸ್ತೆ ತಡೆ ಸಲ್ಲದು

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಸಿಕೆಯಲ್ಲಿ ದ.ಕ. ಉತ್ತಮ ಸಾಧನೆ: ಅಂಗಾರ

ಲಸಿಕೆಯಲ್ಲಿ ದ.ಕ. ಉತ್ತಮ ಸಾಧನೆ: ಅಂಗಾರ

ಕುಂದಾಪುರ-ಮುರ್ಡೇಶ್ವರ ಹೆದ್ದಾರಿ ದತ್ತು: ಆಳ್ವಾಸ್‌-ರಾ.ಹೆ. ಪ್ರಾ. ಒಡಂಬಡಿಕೆ

ಕುಂದಾಪುರ-ಮುರ್ಡೇಶ್ವರ ಹೆದ್ದಾರಿ ದತ್ತು: ಆಳ್ವಾಸ್‌-ರಾ.ಹೆ. ಪ್ರಾ. ಒಡಂಬಡಿಕೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಪ್ರತಿಭಟನೆ ಹೆಸರಲ್ಲಿ ದೀರ್ಘಾವಧಿವರೆಗೆ ರಸ್ತೆ ತಡೆ ಸಲ್ಲದು

ಪ್ರತಿಭಟನೆ ಹೆಸರಲ್ಲಿ ದೀರ್ಘಾವಧಿವರೆಗೆ ರಸ್ತೆ ತಡೆ ಸಲ್ಲದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.