ದೇಶೀಯ ಕಸರತ್ತುಗಳಿಗೆ ಕ್ರೀಡಾಮಾನ್ಯತೆ


Team Udayavani, Dec 24, 2020, 4:03 AM IST

ದೇಶೀಯ ಕಸರತ್ತುಗಳಿಗೆ ಕ್ರೀಡಾಮಾನ್ಯತೆ

ಇತ್ತೀಚೆಗಷ್ಟೇ ಯೋಗಾಸನಕ್ಕೆ ಕೇಂದ್ರ ಅಧಿಕೃತ ಕ್ರೀಡಾ ಸ್ಥಾನಮಾನ ನೀಡಿತ್ತು. ಅದರ ಬೆನ್ನಲ್ಲೇ ದೇಶೀಯ ಸಮರಕಲೆಗಳಾದ ಕಳರಿ ಪಯಟ್ಟು, ಥಾಂಗ್‌-ತಾ, ಗತಕಾಕ್ಕೂ ಕ್ರೀಡಾ ಮಾನ್ಯತೆ ನೀಡಲಾಗಿದೆ. ಕರ್ನಾಟಕ ಖುಷಿಪಡುವ ಸಂಗತಿಯೆಂ ದರೆ ಮಲ್ಲಕಂಬಕ್ಕೂ ಈ ಮಾನ್ಯತೆ  ಸಿಕ್ಕಿದೆ.

ಒಂದು ರೀತಿಯಲ್ಲಿ ಮಲ್ಲಕಂಬವನ್ನು ಸಮರಕಲೆಯೆನ್ನ ಬಹುದು ಅಥವಾ ಯೋಗಾಸನದ ಇನ್ನೊಂದು ರೂಪ ಎಂದರೂ ತಪ್ಪಾಗುವುದಿಲ್ಲ ಅಥವಾ ಜಿಮ್ನಾಸ್ಟಿಕ್‌ನ ಭಾರತೀಯ ಮಾದರಿ ಎಂದೂ ಹೇಳಬಹುದು! ಈ ಮೂರೂ ಗುಣಗಳು ಮೇಳೈಸಿರುವ ಅದ್ಭುತ ವಿದ್ಯೆ ಮಲ್ಲ ಕಂಬ. ಹೆಸರೇ ಹೇಳುವಂತೆ ಮಲ್ಲರು ಅಂದರೆ ಕುಸ್ತಿ ಪಟುಗಳು ತಮ್ಮ ದೇಹವನ್ನು ಹುರಿಗೊಳಿಸಲು ಬಳ ಸುವ ಕಂಬವೇ ಮಲ್ಲಕಂಬ. ಪ್ರಾಚೀನ ಕಾಲದಲ್ಲಿ ಕುಸ್ತಿ ಒಂದು ಹೋರಾಟದ ಪ್ರಕಾರವೇ ಆಗಿತ್ತು. ಜರಾಸಂಧನನ್ನು ಭೀಮ ಕುಸ್ತಿ ಮಾಡಿಯೇ ಕೊಂದಿದ್ದು! ಕಾಲಕ್ರಮೇಣ ಅದು ಕ್ರೀಡೆಯಾಗಿ ಬದಲಾಯಿತು. ಮಲ್ಲಕಂಬದಲ್ಲಿ ಮೂರುವಿಧ…

1. ಸ್ಥಿರ ಮಲ್ಲಕಂಬ: ನೆಲಕ್ಕೆ ಸ್ಥಿರವಾಗಿ ಹುಗಿದಿರುವ ನಿರ್ದಿಷ್ಟ ಎತ್ತರದ ಕಂಬವನ್ನು ಏರಿ ವಿವಿಧ ರೀತಿಯ ಯೋಗಭಂಗಿಗಳನ್ನು ಮಾಡುವುದು. ಈ ಕಂಬದ ಎತ್ತರ 260ರಿಂದ 280 ಸೆಂ.ಮೀ. ಇರುತ್ತದೆ.

2. ನೇತಾಡುವ ಮಲ್ಲಕಂಬ: ಸ್ಥಿರ ಮಲ್ಲಕಂಬವನ್ನೇ ಮೇಲಿನಿಂದ ಕತ್ತರಿಸಿ, (ಸುಮಾರು 170- 190 ಸೆಂ.ಮೀ.ನಷ್ಟು) ಅದರ ಮೇಲು¤ ದಿಗೆ ಒಂದು ಕಬ್ಬಿಣದ ಸರಪಳಿಯನ್ನು ಸಿಕ್ಕಿಸಲಾಗುತ್ತದೆ. ಇದನ್ನು ಕಂಬ ಸಹಿತ ನೇತುಬಿಡಲಾಗುತ್ತದೆ. ಈ ಕಂಬವನ್ನು ಹಿಡಿದು ನೇತಾಡುತ್ತ ಮಾಡುವ ವ್ಯಾಯಾಮವೇ ನೇತಾಡುವ ಮಲ್ಲಕಂಬ.

3. ಹಗ್ಗದ ಮಲ್ಲಕಂಬ: ಮೇಲಿನಿಂದ ನೇತುಬಿಟ್ಟಿರುವ ಹಗ್ಗವೊಂದನ್ನು ಹಿಡಿದುಕೊಂಡು ಕೌಶಲ ಪ್ರದರ್ಶಿಸಲಾಗುತ್ತದೆ. ಇದೇ ಹಗ್ಗದ ಮಲ್ಲಕಂಬ.

ಕೇರಳದ ಕಳರಿಪಯಟ್ಟು
ಕೇರಳದ ಈ ಯುದ್ಧವಿದ್ಯೆ ಕ್ರಿ.ಪೂ. ಮೂರನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಡಚ್‌ ಲೇಖಕ ಅರ್ನಾಡ್‌ ವಾನ್‌ ಡೆರ್‌ ವೀರ್‌, ಇಡೀ ಜಗತ್ತಿನ ಯುದ್ಧಕಲೆಗಳ ತಾಯಿ ಈ ಕಳರಿಪಯಟ್ಟು ಎನ್ನುತ್ತಾರೆ. ಕಳರಿ ಎಂದರೆ ಯುದ್ಧ ಭೂಮಿ, ಪಯಟ್ಟು ಎಂದರೆ ದೇಹವನ್ನು ಬಳಸಿ ಮಾಡುವ ಯುದ್ಧ ಕಲೆಯ ಅಭ್ಯಾಸ. ಒಟ್ಟಾರೆ ಯುದ್ಧ ಭೂಮಿಯಲ್ಲಿ ಯುದ್ಧ ಕಲೆಯ ಅಭ್ಯಾಸ ಎನ್ನಬಹುದು. ಇದರಲ್ಲಿ ಉತ್ತರ ಮತ್ತು ದಕ್ಷಿಣ ಎಂಬ ಎರಡು ಶೈಲಿಗಳಿವೆ. ಉತ್ತರದ ಶೈಲಿ ಪೂರ್ಣ ದೇಹವನ್ನು ಕಣ್ಣಾಗಿಸಿಕೊಂಡು, ಹೋರಾಟಕ್ಕೆ ಬಳಸಿಕೊಳ್ಳುವುದಾಗಿದೆ. ಆದರೆ ದಕ್ಷಿಣದ ಶೈಲಿಯನ್ನು ಅಗಸ್ತ್ಯ ಋಷಿಗಳು ಉತ್ತರಭಾರತದಿಂದ ತಂದಿದ್ದು ಎಂಬ ಮಾತುಗಳಿವೆ.

ಪಂಜಾಬ್‌ನ ಗತಕಾ
ದೊಣ್ಣೆ ಅಥವಾ ದಂಡವನ್ನು ಹಿಡಿದು ಯುದ್ಧ ಮಾಡುವುದು ಗತಕಾ ಎಂದು ಕರೆಸಿಕೊಂಡಿದೆ. ಇದರಲ್ಲಿ ಕತ್ತಿ ಹಿಡಿದು ಮಾಡುವ ಕತ್ತಿವರಸೆ ಮಾದರಿಯ ಯುದ್ಧಕಲೆಯೂ ಇದೆ. ಗತಕಾ ಪದ ಸಂಸ್ಕೃತದ ಗದಾ ಪದದಿಂದ ವುತ್ಪತ್ತಿಯಾಗಿದೆ. ಪಂಜಾಬ್‌ನ ಸಿಕ್ಖರ ಮಧ್ಯೆ ಹುಟ್ಟಿ, ಅಲ್ಲೇ ಜನಪ್ರಿಯ ವಾಗಿದೆ. ಇದನ್ನು ಜನಪ್ರಿಯಗೊಳಿ ಸಲಿಕ್ಕಾಗಿಯೇ ಅಂತಾರಾಷ್ಟ್ರೀಯ ಗತ ಕಾ ಒಕ್ಕೂಟವೆಂಬ ಸಂಸ್ಥೆಯೂ ಇದೆ.

ಮಣಿಪುರದ ಥಾಂಗ್‌-ತಾ
ಮಣಿಪುರದಲ್ಲಿ ಹ್ಯೂಯೆನ್‌ ಲಾಂಗ್ಲಾನ್‌ ಎಂಬ ಸಮರಕಲೆಯಿದೆ. ಇದರಲ್ಲಿ ಎರಡು ವಿಧ. 1. ಥಾಂಗ್‌-ತಾ 2. ಸರಿತ್‌-ಸರಕ್‌. ಥಾಂಗ್‌-ತಾ ಎಂದರೆ ಶಸ್ತ್ರಸಹಿತ ಸಮರಕಲೆ. ಸರಿತ್‌-ಸರಕ್‌ ಶಸ್ತ್ರರಹಿತವಾಗಿ ಪೂರ್ಣದೇಹವನ್ನು ಬಳಸಿ ಹೋರಾಡುವ ವಿದ್ಯೆ. ಪ್ರಸ್ತುತ ಮಾನ್ಯತೆ ಸಿಕ್ಕಿರುವುದು ಥಾಂಗ್‌-ತಾಗೆ.

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.