ಕೋವಿಡ್ ಸೋಂಕಿನಿಂದ ರಷ್ಯಾ ಅಧ್ಯಕ್ಷರ ರಕ್ಷಣೆಗೆ ಸುರಂಗ !
Team Udayavani, Jun 19, 2020, 2:24 PM IST
ಮಾಸ್ಕೋ: ರಷ್ಯಾ ಅಧ್ಯಕ್ಷರನ್ನು ಕೋವಿಡ್ -19 ವೈರಸ್ನಿಂದ ರಕ್ಷಿಸುವ ಸಲುವಾಗಿ ಪ್ರತ್ಯೇಕ ಡಿಸಿನ್ಫೆಕ್ಷನ್ ಸುರಂಗವೊಂದನ್ನು ಸಿದ್ಧಪಡಿಸಿರುವ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಪಟ್ಟಿಯಲ್ಲಿ ರಷ್ಯಾ 3ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್ಪುಟಿನ್ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸಿನ್ಫೆಕ್ಷನ್ ಸುರಂಗವನ್ನು ಅಧ್ಯಕ್ಷರ ಭದ್ರತಾ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಯಾರಾದರೂ ಅಧ್ಯಕ್ಷರು ವಾಸಿಸುವ ಕಟ್ಟಡ ಪ್ರವೇಶಿಸಬೇಕೆಂದರೆ ಡಿಸಿನ್ಫೆಕ್ಷನ್ ಸುರಂಗ ಮಾರ್ಗದ ಮೂಲಕ ತೆರಳು ವ್ಯವಸ್ಥೆ ಮಾಡಲಾಗಿದೆ. ರಷ್ಯಾದ ಪೆನ್ಜಾ ನಗರದಲ್ಲರುವ ಕಂಪೆನಿಯೊಂದು ಈ ಅತ್ಯಾಧುನಿಕ ಸುರಂಗ ಮಾರ್ಗ ನಿರ್ಮಿಸಿದೆ.
ರಷ್ಯಾದಲ್ಲಿ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಿದ್ದು, ಗುರುವಾರ ರಾಷ್ಟ್ರದಲ್ಲಿನ ಸೋಂಕಿತರ ಸಂಖ್ಯೆ 5,53,301ಕ್ಕೆ ಹೆಚ್ಚಳವಾಗಿದೆ. 7,478 ಮಂದಿ ಮೃತಪಟ್ಟಿದ್ದಾರೆ. 3,04,342 ಮಂದಿ ಈ ವರೆಗೆ ಗುಣಮುಖರಾಗಿದ್ದು, 2,41,481 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ