ಕನಸು ಈಡೇರಲು ಸುಮ್ಮನೆ ಕೂರಬೇಡಿ

ಕನಸುಗಾರ ಪುತ್ರನ ವಿಶ್ವಾಸದ ಮಾತು...

Team Udayavani, May 26, 2020, 4:09 AM IST

kanasu-manu

ಸಾಮಾನ್ಯವಾಗಿ ಸ್ಟಾರ್‌ನಟರು ತಮ್ಮ ಟ್ವೀಟ್‌ ಮೂಲಕ ಏನಾದರೊಂದು ಸಂದೇಶ ಕೊಟ್ಟರೆ, ಅವರ ಅಭಿಮಾನಿಗಳು ಅದನ್ನು ಚಾಚು ತಪ್ಪದೆ ಮಾಡುತ್ತಾರೆ. ಒಂದಷ್ಟು ಮಂದಿ ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ಈಗ ರವಿಚಂದ್ರನ್‌ ಪುತ್ರ ಮನುರಂಜನ್‌ ಅವರೂ ಸಹ ತಮ್ಮ ಟ್ವಿಟ್ಟರ್‌ಖಾತೆಯಲ್ಲೊಂದು ಸಂದೇಶ ಹಾಕಿದ್ದಾರೆ. ಅವರ ಸಂದೇಶಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅಂದಹಾಗೆ, ಮನುರಂಜನ್‌ ಅವರು ಮಾಡಿರುವ ಟ್ವೀಟ್‌ನಲ್ಲಿ, “ನಿಮ್ಮ ಕನಸುಗಳು ನನಸಾಗುವವರೆಗೆ ಸುಮ್ಮನೆ ಕೂರಬೇಡಿ. ಎಂದಿಗೂ ನೀವು ವಿಶ್ವಾಸ ಕಳೆದುಕೊಳ್ಳಬೇಡಿ. ಏನೂ ಇಲ್ಲವಾಗ ಯಾರಾದರೂ ಇದ್ದೇ ಇರುತ್ತಾರೆ. ಯಾವ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬೇಡಿ’ ಎಂದು ಪಾಸಿಟಿವ್‌ ಅಂಶಗಳ ಕುರಿತು ಟ್ವೀಟ್‌ ಮಾಡಿದ್ದಾರೆ. ಅವರ ಈ ಟ್ವೀಟ್‌ ನೋಡಿ ಅನೇಕ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಮನುರಂಜನ್‌ ಅಭಿನಯದ “ಪ್ರಾರಂಭ ‘ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಕೊರೊನಾ ಸಮಸ್ಯೆ ಎದುರಾಗದಿದ್ದರೆ, ಇಷ್ಟೊತ್ತಿಗಾಗಲೇ “ಪ್ರಾರಂಭ ‘ ಚಿತ್ರ ತನ್ನ ಕಾರ್ಯಾರಂಭ ಶುರು ಮಾಡಬೇಕಿತ್ತು. ಲಾಕ್‌ಡೌನ್‌ ಕಾರಣ, ಸಿನಿಮಾ ಬಿಡುಗಡೆಗೊಂಡಿಲ್ಲ. ಇತ್ತೀಚೆಗೆ ಚಿತ್ರತಂಡ ಚಿತ್ರದ ಲಿರಿಕಲ್‌ ವಿಡಿಯೊ ಬಿಡುಗಡೆ ಮಾಡಿದೆ. ಆನಂದ್‌ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದು, ಹಾಡು ಕೇಳಿದವರಿಂದ ಮೆಚ್ಚುಗೆ ಸಿಕ್ಕಿದೆ. ಇದೊಂದು ಲವ್‌ಸ್ಟೋರಿಯಾಗಿದ್ದರೂ, ಈ ಚಿತ್ರದಲ್ಲಿ ಮನುರಂಜನ್‌ ವಿಭಿನ್ನ ಪಾತ್ರ ಮಾಡಿದ್ದಾರೆ. ಅವರಿಗಿಲ್ಲಿ ಎರಡು ಶೇಡ್‌ ಇರುವಂತಹ ಪಾತ್ರ ಸಿಕ್ಕಿದೆ.

ಈ ಚಿತ್ರವನ್ನು ಮನುಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಅವರ ಸಹೋದರ ಜಗದೀಶ್‌ ಕಲ್ಯಾಡಿ ಸಿನಮಾವನ್ನು ನಿರ್ಮಾಣ ಮಾಡಿದ್ದಾರೆ. ರವಿ ವಡೇರಹಳ್ಳಿ ಚಿತ್ರದ ಸಹ ನಿರ್ಮಾಪಕರು. ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣವಿದೆ. ಪ್ರಜ್ವಲ್‌ ಪೈ, ವಿಜಯಕುಮಾರ್‌, ಜೈ, ನವೀನ್‌ ಕುಮಾರ್‌,ಗುರುಪ್ರಸಾದ್‌, ರವಿ ಸಂತೆ ಹೈಕ್ಲು, ಸಂತೋಷ್‌ ನಾಯ್ಕ, ಥ್ರಿಲ್ಲರ್‌ ಮಂಜು, ವಿಕ್ರಮ್‌ ಮೋರ್‌, ಕಿಶೋರ್‌, ಮನೋಜ್‌, ಚೇತನ್‌ ಇತರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ಮೈಸೂರು ಟಾಕೀಸ್‌ ರಿಲೀಸ್‌ ಮಾಡುತ್ತಿದೆ.

ಟಾಪ್ ನ್ಯೂಸ್

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶಭಕ್ತಿ ಬಿಂಬಿಸುವ ಜಯ ಹೇ..

ದೇಶಭಕ್ತಿ ಬಿಂಬಿಸುವ ಜಯ ಹೇ..

rachita ram

ಮೊದಲ ತೆಲುಗು ಸಿನಿಮಾದ ರಿಲೀಸ್ ಖುಷಿಯಲ್ಲಿ ರಚಿತಾ ರಾಮ್

ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

daali dhananjay

ಧನಂಜಯ 25ನೇ ಚಿತ್ರ ಘೋಷಣೆ: ವಿಜಯ್ ನಿರ್ದೇಶನದಲ್ಲಿ ಡಾಲಿ ಸಿನಿಮಾ

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.