ಭ್ರಷ್ಟಾಚಾರದ ಆರೋಪಗಳನ್ನು ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ?

Team Udayavani, Sep 12, 2019, 3:28 PM IST

ಮಣಿಪಾಲ: ಭ್ರಷ್ಟಾಚಾರದ ಆರೋಪಗಳನ್ನು ಒಂದು ಸಮುದಾಯ ಅಥವಾ ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ? ಎಂದು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ರಾಜಣ್ಣ: ಜಾತಿ ಪದ್ದತಿಯನ್ನು ನಿಷೇಧಿಸಬೇಕು. ಮಠಕ್ಕೆ ಕೊಡುವ ಆದ್ಯತೆ ಸಂಪೂರ್ಣ ವಾಗಿ ಕಡಿಮೆಯಾಗಬೇಕು. ಜಾತ್ಯಾತೀತ ಪದ ರಾಜಕೀಯದಿಂದ ಅಪವಿತ್ರವಾಗಿದೆ. ಲೋಕಾಯುಕ್ತ ಕಾನೂನು ಬಲಿಷ್ಠವಾಗಬೇಕು, ಜಾತಿ ಆಧಾರಿತ ವ್ಯವಸ್ಥೆ ನಿಲ್ಲಬೇಕು.

ಶಂಕರ್ ಬಂಟ್ವಾಳ:  ರಾಜಕೀಯದಲ್ಲಿ ಜಾತಿ ಲೆಕ್ಕಾಚಾರ ಶುದ್ಧ ತಪ್ಪು, ಆರ್ಹತೆ ಮತ್ತು ಯೋಗ್ಯತೆಗೆ ಪ್ರಾಮುಖ್ಯತೆ ಸಿಕ್ಕಿದ್ದಲ್ಲಿ ಮುಂದಿನ ಪೀಳಿಗೆಯವರು  ಉತ್ತಮವಾಗಿರಲು  ಸಾಧ್ಯವಿದೆ.

ಶಿವ ಶಿಂಶ :  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಹೊಸತಲ್ಲ.  ಆದರೂ ಸಂವಿಧಾನದ ಹಾಗೂ ಕಾನೂನು ಆಶಯಗಳಿಗೆ ಮಾಡುವ ಅಪಚಾರ ಇದಾಗಿದೆ. ರಾಜಕೀಯ ಪಕ್ಷಗಳು ಜಾತಿ, ಹಣ ಬಲಗಳ ಮೂಲಕ ಅಧಿಕಾರ ಹೊಂದುತ್ತಿವೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತಿವೆ.

ರಂಗನಾಥ್: ನ್ಯಾಯ ನೀತಿಗಳು ಎಲ್ಲರಿಗೂ ಒಂದೇ. ಜಾತಿ ಧರ್ಮದ ಆಧಾರದ ಮೇಲೆ ನಿರ್ಧಾರ ಮಾಡುವುದಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾತಿ ರಾಜಕಾರಣ ಸಲ್ಲ. ಜಾತಿ ಧರ್ಮಗಳು ಆಚಾರ ವಿಚಾರಗಳಿಗೆ ಮಾತ್ರ ಸೀಮಿತ.

ನವಿ ದಾಸ್:  ಜಾತಿ, ಮತ, ಧರ್ಮ ಇವುಗಳ ಬಗ್ಗೆ ಸಾಂವಿಧಾನಿಕವಾಗಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಉನ್ನತ ಮಟ್ಟದ ಅಧಿಕಾರಿಗಳು ಹತ್ಯೆಯಾದಾಗ  ಅದರ ನ್ಯಾಯಕ್ಕೆ ಹೋರಾಟ ಮಾಡದೆ ಇರುವಂತಹ ಜಾತಿ, ಒಬ್ಬ ಪ್ರಜೆಗಳಿಂದ ಚುನಾಯಿತ ವ್ಯಕ್ತಿ ಬಗ್ಗೆ ಏಕೆ ?  ನಮ್ಮ ದೇಶ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೊದಲು ಜಾತಿಯ ನಿರ್ಮೂಲನೆ ಅಗತ್ಯ.

ಲಿಂಗಪ್ಪ ಗೌಡ:  ಇದು‌ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜಾತಿ ಮತ ಪಂಥ ಧರ್ಮ ಭ್ರಷ್ಟಾಚಾರ ನಿರ್ಮೂಲನೆ ತೊಡರು ಆಗಬಾರದು, ಭ್ರಷ್ಟಾಚಾರ ಮಾಡುವವರನ್ನು ಜಾತಿ ನೋಡಿ ಅಳೆದರೆ. ನಾಳೆ ನಮ್ಮಂತಹ ಮೂರ್ಖರು ಯಾರು ಇರುವುದಿಲ್ಲ.

ಸೈಮನ್ ಫರ್ನಾಂಡೀಸ್:  ಖಂಡಿತಾ ತಪ್ಪು. ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಯಾವುದೇ ಜಾತಿಯವರಾಗಲಿ, ಧರ್ಮದವರಾಗಲಿ, ಸಮುದಾಯದವರಾಗಲಿ, ಅವರು ಮಾಡಿದ ತಪ್ಪು ತಪ್ಪೇ. ! ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಪರಾಧ..

ದೊಡ್ಡನಗೌಡ : ಪ್ರತಿಯೊಬ್ಬ ರಾಜಕಾರಣಿಗಳಿಗೂ ಅಭಿಮಾನಿಗಳಿರುತ್ತಾರೆ ಹಾಗೆ ಪ್ರತಿಯೊಂದು ಜಾತಿಗೂ ಗುರುಗಳಿದ್ದಾರೆ.  ಆದರೇ ಜನರನ್ನು ತಿದ್ದುವ, ಸೌಹಾರ್ದತೆ, ಸಹಬಾಳ್ವೆಯ ಮಹತ್ವ ಸಾರಬೇಕಾಗಿರುವ ಮಠ ಮಂದಿರಗಳು ಜಾತಿ ರಾಜಕಾರಣದ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ.

ಕೆ ಎಸ್ ಕೃಷ್ಣ: ಪ್ರತಿಯೋಬ್ಬ ರಾಜಕಾರಣಿಗಳಿಗೂ ಅವರವರ ಜಾತಿಯ ಮಠಾಧೀಶರು ಬೆಂಬಲಕ್ಕೆ ನಿಂತುಕೊಂಡರೆ ನ್ಯಾಯ,ನೀತಿ,ಧರ್ಮಕ್ಕೆ ಬೆಲೆ ಎಲ್ಲಿ?

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಯಾದಗಿರಿ: ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಷನ್‌ ರಸ್ತೆ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಎರಡು ದಿನಗಳವರೆಗೆ...

  • ಕೋಲಾರ: ನಗರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕೈಷಿ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನ ನೋಡಿಗರ ಕಣ್ಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ...

  • ಮಸ್ಕಿ: ಮನುಷ್ಯನಿಗೆ ಆರೋಗ್ಯವೇ ಸಂಪತ್ತು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು. ಪಟ್ಟಣದ...

  • ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ಯುವಕರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಭಕ್ತಿಮಾರ್ಗವನ್ನು ರೂಢಿಸಿಕೊಂಡು ಅಧ್ಯಾತ್ಮದ ಒಲವಿನಿಂದ ಧರ್ಮದ ದಾರಿಯಲ್ಲಿ...

  • ಹಳೇಬೀಡು: ಫೆ.1ರಿಂದ 9ರವರಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹಳೇಬೀಡು ಭರದ ಸಿದ್ಧತೆ ನಡೆಯುತ್ತಿದೆ. ಹಳೇಬೀಡು ಸಮೀಪದ ಮಾಯಗೊಂಡನಹಳ್ಳಿ ವಿಶಾಲ...