Apple: ಚಾರ್ಜ್ ಹಾಕಿ ನಿದ್ರಿಸಬೇಡಿ: ಆ್ಯಪಲ್ ಎಚ್ಚರಿಕೆ
Team Udayavani, Aug 18, 2023, 7:17 AM IST
ನವದೆಹಲಿ: ಮೊಬೈಲ್ಗಳನ್ನು ಚಾರ್ಜಿಂಗ್ ಹಾಕಿ, ಅದರ ಪಕ್ಕವೇ ಮಲಗಿ ನಿದ್ರಿಸುವ ಬಳಕೆದಾರರಿಗೆ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ಎಚ್ಚರಿಕೆ ನೀಡಿದ್ದು ಇಂಥ ಅಭ್ಯಾಸಗಳು ಪ್ರಾಣಕ್ಕೇ ಸಂಚಕಾರ ತರಬಹುದು ಎಂದಿದೆ. ಸರಿಯಾಗಿ ಫೋನ್ ಚಾರ್ಜಿಂಗ್ ಹಾಕುವುದರ ಕುರಿತು ಮಾಹಿತಿ ನೀಡಿರುವ ಸಂಸ್ಥೆ, ಕೆಲವೊಮ್ಮೆ ಚಾರ್ಜಿಂಗ್ ಹಾಕಿರುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸುವ ತೀವ್ರತೆಗೆ ಬೆಂಕಿ ಹೊತ್ತಿಕೊಳ್ಳುವ, ಫೋನ್ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಇದರಿಂದ ಪಕ್ಕದಲ್ಲಿ ಮಲಗಿದ್ದವರಿಗೂ ಗಾಯಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆದಷ್ಟು ಗಾಳಿಗೆ ತೆರೆದುಕೊಳ್ಳುವ ಪ್ರದೇಶದಲ್ಲಿ ಮೊಬೈಲ್ ಚಾರ್ಜಿಂಗ್ ಹಾಕುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ದಿಂಬಿನ ಕೆಳಗೆ, ಹೊದಿಕೆಯ ಒಳಗೆ ಮೊಬೈಲ್ಗಳನ್ನು ಇಟ್ಟು ಮಲಗುವುದನ್ನೂ ನಿಗ್ರಹಿಸುವಂತೆ ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ