Afghanistan: ನವದೆಹಲಿಯ ರಾಯಭಾರ ಕಚೇರಿ ಮುಚ್ಚಿದ ಆಫ್ಘನ್
Team Udayavani, Nov 24, 2023, 9:50 PM IST
ನವದೆಹಲಿ: ಅಫ್ಘಾನಿಸ್ತಾನ ಸರ್ಕಾರ ನವದೆಹಲಿಯಲ್ಲಿ ಹೊಂದಿರುವ ರಾಯಭಾರ ಕಚೇರಿಯನ್ನು ಗುರುವಾರದಿಂದಲೇ ಅನ್ವಯವಾಗುವಂತೆ ಮುಚ್ಚಿರುವುದಾಗಿ ಹೇಳಿಕೊಂಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ರಾಯಭಾರ ಕಚೇರಿ, “ಭಾರತ ಸರ್ಕಾರದ ಸತತ ಒತ್ತಡದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಸೆ.30ರಂದೇ ನಮ್ಮ ಕಚೇರಿಯ ವ್ಯವಹಾರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಭಾರತ ಸರ್ಕಾರದ ವತಿಯಿಂದ ಅಫ್ಘಾನಿಸ್ತಾನ ಸರ್ಕಾರದ ಪರ ನಿಲುವು ವ್ಯಕ್ತವಾಗಬಹುದು ಎಂಬ ನಿರೀಕ್ಷೆಯಿಂದ ಕಚೇರಿ ಸ್ಥಗಿತಗೊಳಿಸುವ ನಿರ್ಧಾರ ಮುಂದೂಡಿಕೆ ಮಾಡಲಾಗಿತ್ತು’ ಎಂದು ತಿಳಿಸಿದೆ.