ಮಾಜಿ ಬಾಕ್ಸಿಂಗ್ ಚಾಂಪಿಯನ್ ಡುರಾನ್ಗೆ ಕೋವಿಡ್-19 ಸೋಂಕು
Team Udayavani, Jun 26, 2020, 10:23 PM IST
ಪನಾಮಾ: ಬಾಕ್ಸಿಂಗ್ ಲೆಜೆಂಡ್, ಮಾಜಿ ವಿಶ್ವ ಚಾಂಪಿಯನ್ ರಾಬರ್ಟೊ ಡುರಾನ್ ಅವರಿಗೆ ಕೋವಿಡ್-19 ಸೋಂಕು ಅಂಟಿಕೊಂಡಿದೆ.
“ಫ್ಲೂ ‘ನಂಥ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಗ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಯಿತು ಎಂದು ಅವರ ಪುತ್ರ ರಾಬಿನ್ ಡುರಾನ್ ಹೇಳಿದ್ದಾರೆ.
“ತಂದೆಯೇನೂ ಗಂಭೀರ ಸ್ಥಿತಿಯಲ್ಲಿಲ್ಲ. ಅವರ ಶ್ವಾಸಕೋಶಕ್ಕೆ ಯಾವುದೇ ಹಾನಿ ಆಗಿಲ್ಲ. ಸೋಂಕಿನ ವಿಶೇಷ ಲಕ್ಷಣಗಳೂ ಕಂಡುಬಂದಿಲ್ಲ. ವೈದ್ಯರು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಶೀಘ್ರವೇ ಗುಣಮುಖರಾಗುವ ವಿಶ್ವಾಸವಿದೆ’ ಎಂದು ರಾಬಿನ್ ಹೇಳಿದರು.
69 ವರ್ಷದ ರಾಬರ್ಟೊ ಡುರಾನ್ 5 ದಶಕಗಳ ಕಾಲ ಬಾಕ್ಸಿಂಗ್ ಅಖಾಡದಲ್ಲಿ ಮೆರೆದು 2002ರಲ್ಲಿ ನಿವೃತ್ತರಾಗಿದ್ದರು. 4 ವಿವಿಧ ವಿಶ್ವ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 103 ಗೆಲುವು, 70 ನಾಕ್ಟ್ಸ್ ಮತ್ತು 16 ಸೋಲು ಇವರ ಒಟ್ಟಾರೆ ಬಾಕ್ಸಿಂಗ್ ದಾಖಲೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ