ಮನೆಕೆಲಸದ ಮಹಿಳೆ ಅಂತ್ಯಕ್ರಿಯೆ ನಡೆಸಿದ ಗೌತಮ್ ಗಂಭೀರ್
Team Udayavani, Apr 25, 2020, 6:21 AM IST
ಹೊಸದಿಲ್ಲಿ: ಮೃತಪಟ್ಟ ತಮ್ಮ ಮನೆ ಕೆಲಸದ ಮಹಿಳೆ ಸರಸ್ವತಿ ಪಾತ್ರ (48) ಅವರ ಅಂತ್ಯಸಂಸ್ಕಾರವನ್ನು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರೇ ನಡೆಸಿಕೊಟ್ಟಿದ್ದಾರೆ.
ಒಡಿಶಾ ಮೂಲದವರಾಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅವರ ರಾಜ್ಯಕ್ಕೆ ಮೃತದೇಹ ಕಳು ಹಿಸಿಕೊಡಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಗಂಭೀರ್ ಖುದ್ದಾಗಿ ಅಂತ್ಯಸಂಸ್ಕಾರಕ್ಕೆ ಏರ್ಪಾಡು ಮಾಡಿದ್ದಾರೆ ಮತ್ತು ಅವರೇ ಅದನ್ನು ನಡೆಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.