ಗುಳೇದಗುಡ್ಡ ಪುರಸಭೆಗೆ ಹೆಸ್ಕಾಂ ಕರೆಂಟ್‌ ಶಾಕ್‌

ಬಿಲ್‌ ಬಾಕಿ: ವಿದ್ಯುತ್‌ ಕಡಿತಗೊಳಿಸಿದ ಹೆಸ್ಕಾಂ ಆಧಿಕಾರಿಗಳಿಂದ ಬಿಲ್‌ ಪಾವತಿಸುವ ಭರವಸೆ

Team Udayavani, May 29, 2022, 3:40 PM IST

20

ಗುಳೇದಗುಡ್ಡ: ಇಲ್ಲಿಯ ಪುರಸಭೆ ಒಂದು ತಿಂಗಳಿನ ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ಹೆಸ್ಕಾಂ ಇಲಾಖೆ ಪುರಸಭೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ.

ಗುಳೇದಗುಡ್ಡ ಪುರಸಭೆ ಒಂದು ತಿಂಗಳಿನ ಬಿಲ್‌ 4 ಲಕ್ಷ 98 ಸಾವಿರ ರೂ. ಪಾವತಿಸದಿರುವುದಕ್ಕೆ ಹೆಸ್ಕಾಂ ಅಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ 11ಗಂಟೆಯಿಂದ ಸಂಜೆ 5ಗಂಟೆವರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪರಿಣಾಮ, ಪುರಸಭೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಪರದಾಡಿದರು.

ಹೆಸ್ಕಾ ಕಂದಾಯ ಸಹಾಯಕ ಲೆಕ್ಕಾಧಿಕಾರಿ ಮಹಾಂತೇಶ ಚಿಮ್ಮನಕಟ್ಟಿ ಅವರು ದೂರವಾಣಿ ಮೂಲಕ ಮಾತನಾಡಿ, ಈಗಾಗಲೇ ಪುರಸಭೆ ಒಂದು ತಿಂಗಳಿನ ವಿದ್ಯುತ್‌ ಬಿಲ್‌ ಬಾಕಿ 4 ಲಕ್ಷ 98 ಸಾವಿರ ಇದ್ದು, ಇದಕ್ಕಾಗಿ ನಾವು ವಿದ್ಯುತ್‌ ಬಿಲ್‌ ಸಹ ಕೊಟ್ಟಿತ್ತು. ಅದಾದ ನಂತರ ನೋಟಿಸ್‌ ಸಹ ಪುರಸಭೆಗೆ ನೀಡಿತ್ತಾದರೂ ಪುರಸಭೆಯವರು ಇಲಾಖೆಯ ಬಿಲ್‌ ಪಾವತಿಸಿಲ್ಲ. ನಾವು ನೀಡಿದ ನೋಟಿಸ್‌ಗೆ ಪುರಸಭೆಯಿಂದ ಸಕಾರಾತ್ಮಕ ಉತ್ತರ ಬರಲಿಲ್ಲ. ನಮ್ಮ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇನೆ. ಗುಳೇದಗುಡ್ಡ ಪುರಸಭೆಗೆ ಸಾಕಷ್ಟು ಅನುದಾನ ಬಂದಿದೆ. ವಿದುತ್‌ ಸಂಪರ್ಕ ಕಡಿತ ಮಾಡಿ, ತಾವೇ ಸ್ವತಃ ಬಂದು ಬಿಲ್‌ ತುಂಬುತ್ತಾರೆ ಎಂದು ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಹೆಸ್ಕಾಂ ಮೇಲ್ವಿಚಾರಕರಾದ ಎಂ.ಎಚ್‌. ಮಡಿವಾಳರ ಹಾಗೂ ಸಿಬ್ಬಂದಿಯನ್ನು ಗುಳೇದಗುಡ್ಡ ಪುರಸಭೆಗೆ ಕಳುಹಿಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ತಿಳಿಸಿದ್ದಾರೆ ಎಂದರು.

ಬಾಕಿ ಇರುವ ಬಿಲ್‌ ಪಾವತಿಸುವುದಾಗಿ ಪುರಸಭೆ ಅಧಿಕಾರಿಗಳು ಭರವಸೆ ಕೊಟ್ಟ ನಂತರ ಹೆಸ್ಕಾ ಅಧಿಕಾರಿಗಳು ಸಂಜೆ 5ಗಂಟೆಯ ನಂತರ ಕಟ್‌ ಮಾಡಿದ ವಿದ್ಯುತ ಲೈನ್‌ನ್ನು ಪುನಃ ಜೋಡಿಸಿ ವಿದ್ಯುತ್‌ ಸಂಪರ್ಕ ಒದಗಿಸಿಕೊಟ್ಟರು.

ನಾನು ಬೆಂಗಳೂರಿಗೆ ಪುರಸಭೆ ಕೆಲಸದ ನಿಮಿತ್ತ ಹೋಗಿದ್ದು, ಗುಳೇದಗುಡ್ಡ ಪುರಸಭೆಗೆ ಸದ್ಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾದ ಕಾರಣ, ನನ್ನ ಸಹಿಯ ತಂಬ್‌ ಇಲ್ಲದ್ದರಿಂದ ಚೆಕ್‌ ತೆಗೆಯಲು ವಿಳಂಬವಾಗಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. –ಫಕ್ರುದ್ದೀನ್‌ ಹುಲ್ಲಿಕೇರಿ, ಮುಖ್ಯಾಧಿಕಾರಿ ಪುರಸಭೆ-ಗುಳೇದ ಗುಡ್ಡ

ಹೆಸ್ಕಾಂ ಕಂದಾಯ ಸಹಾಯಕ ಲೆಕ್ಕಾಧಿಕಾರಿಗಳು ಪುರಸಭೆಯ ಬಿಲ್‌ 5 ಲಕ್ಷ ಬಾಕಿ ಇದ್ದ ಬಗ್ಗೆ ನನಗೆ ತಿಳಿಸಿದರು. ಆದಕಾರಣ ಪುರಸಭೆಯ ವಿದ್ಯುತ್‌ ಸಂಪರ್ಕಕಡಿತ ಮಾಡಲು ಸೂಚಿಸಿದ್ದೇನೆ. ಸದ್ಯ ಪುರಸಭೆ ಅಧಿಕಾರಿಗಳು ಪಾವತಿಸುತ್ತೇನೆ ಎಂದು ನಮ್ಮ ಎಇಇ ಅಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪುನಃ ವಿದ್ಯುತ್‌ ಸಂಪರ್ಕ ಒದಗಿಸುವಂತೆ ನಮ್ಮ ಹೆಸ್ಕಾಂ ಸಿಬ್ಬಂದಿಗೆ ತಿಳಿಸಿದ್ದೇನೆ.  –ಬಿ.ಎಚ್‌.ಬಿದರಿಕರ ಶಾಖಾಧಿಕಾರಿಗಳು ಹೆಸ್ಕಾಂ, ಗುಳೇದಗುಡ್ಡ.

ಟಾಪ್ ನ್ಯೂಸ್

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.