ಆರು ತಿಂಗಳೊಳಗೆ ಹೊಳಲ್ಕೆರೆ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವೆ : ಶಾಸಕ ಎಂ.ಚಂದ್ರಪ್ಪ

1ಕೋಟಿ 10 ಲಕ್ಷ ರೂ ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡಗಳ ಶಂಕುಸ್ಥಾಪನೆ 

Team Udayavani, Mar 6, 2022, 4:03 PM IST

ಆರು ತಿಂಗಳೊಳಗೆ ಹೊಳಲ್ಕೆರೆ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವೆ : ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ : ಹಿಂಸೆ ಕೊಟ್ಟು, ವ್ಯಾಮೋಹ. ಆಸೆ ತೋರಿಸಿ ಅಧಿಕಾರ ಪಡೆಯುವುದಲ್ಲ , ಒಂದು ಸಾರಿ ಗೆಲ್ಲಬಹುದು ಪದೇಪದೇ ಗೆಲ್ಲಲು ಸಾರ್ವಜನಿಕರ ಬದುಕನ್ನು ನನ್ನದೆಂದು ಸ್ವೀಕರಿಸಿ ಯಜಮಾನನಾ ರೀತಿ ಈ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡಲು ಪಣ ತೊಟ್ಟಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು.

ಕ್ಷೇತ್ರದ ಸುಮಾರು 490 ಹಳ್ಳಿಗಳು ಕೂಡ ನನ್ನ ಮನೆತನ ಇದ್ದಂತೆ, ಈ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯನ್ನು ನೋಡಿದ್ದೇನೆ ಕೇಳಿದ್ದೇನೆ ಮೊದಲು ಈ ಗ್ರಾಮದಿಂದ ಹೋಗುವ ರಸ್ತೆಯು ಸಿಂಗಲ್ ರಸ್ತೆ ಆಗಿತ್ತು 26 ಕೋಟಿ ರೂ ವೆಚ್ಚದಲ್ಲಿ ಡಬ್ಬಲ್ ರಸ್ತೆ ಮಾಡಿಸಿದೆ ನಾವು ಮಾಡುವ ಕೆಲಸ ಪ್ರಾಮಾಣಿಕವಾಗಿರಬೇಕು ಚಿಕ್ಕಜಾಜೂರು ಗ್ರಾಮಕ್ಕೆ ಹಿಂದೆ ನೀರಿನ ಸಮಸ್ಯೆ ಎಂದು ಗ್ರಾಮದ ಪಿ ಎಸ್ ಮೂರ್ತಿ ಅವರು ನನಗೆ ಕರೆ ಮಾಡಿ ಹೇಳಿದಾಗ ನಾನು ಎಂಟು ಬೋರ್ವೆಲ್ ಕೊರೆಸಿ ಕೊಟ್ಟೆ ಅದರಲ್ಲಿ 6 ಬೋರ್ವೆಲ್ ಗಳಲ್ಲಿ ನೀರು ಬಂದಿದೆ ಎಂದು ತಿಳಿಸಿದಾಗ ನನಗೆ ತುಂಬಾ ಸಂತೋಷವಾಯಿತು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ನಾನು ಒಂದು ವರ್ಷದಿಂದ ಹೋರಾಟ ಮಾಡಿದ್ದೇನೆ ಈ ತಾಲೂಕಿನ 360 ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು 367 ಕೋಟಿ ಅನುದಾನ ನೀಡಿದ್ದೇನೆ ಪ್ರತಿ ಮನೆ ಮನೆಗೂ ನೀರಿನ ವ್ಯವಸ್ಥೆ ಮಾಡಬೇಕೆನ್ನುವುದು ನನ್ನ ಗುರಿ ವಾಣಿವಿಲಾಸ ಸಾಗರ ದಿಂದ ಬರುವ ನೀರನ್ನು ಫಿಲ್ಟರ್ ಮಾಡಿ ಇನ್ನೊಂದು ವರ್ಷದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡೇ ಮಾಡುತ್ತೇನೆ ಎಂದರು

ನಾಲ್ಕು ವರ್ಷದ ಕೆಳಗಡೆ ರೈತರು ತಮ್ಮ ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಸಾಲಸೂಲ ಮಾಡಿ ಬೋರ್ವೆಲ್ ಕೊರೆಸಿದರು, ನೀರು ಬಾರದ ಕಾರಣ ಎಷ್ಟು ತೋಟಗಳು ಒಣಗಿರುವುದನ್ನು ಕಂಡು ರೈತರ ಕಷ್ಟವನ್ನು ಅರಿತು ಈ ಬಜೆಟ್ ನಲ್ಲಿ 350 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸವನ್ನು ಇನ್ನೂ ಕೇವಲ ಆರು ತಿಂಗಳೊಳಗೆ ಮುಗಿಸುತ್ತೇನೆ ಎಂದು ಹೇಳಲು ಇಚ್ಚಿಸುತ್ತೇನೆ, ಕೆರೆ ಚೆಕ್ ಡ್ಯಾಮ್ ಇಲ್ಲದ ಹಳ್ಳಿಗಳಿಗೆ ಸುಮಾರು 300ಕ್ಕಿಂತ ಹೆಚ್ಚು ಕೆರೆ ಅಭಿವೃದ್ಧಿ ಮಾಡುವ ಕೆಲಸ ಕೈಗೆತ್ತಿಕೊಂಡಿದ್ದೇನೆ ಸಮೀಪದ ಕಡೂರು ಹತ್ತಿರ ಈಗ ಮಾಡಿರುವ ಎರಡು ಹೊಸ ಕೆರೆಗಳು ಅಲ್ಲಿನ ಸುತ್ತಮುತ್ತಲಿನ ಬೋರ್ವೆಲ್ ಗಳಲ್ಲಿ ನೀರು ಬರಲು ಅನುಕೂಲಕರವಾಗಿವೆ ತೋಟ ಜಮೀನುಗಳಿಗೆ ಫಲವತ್ತಾದ ನೀರಿನ ಸೌಲಭ್ಯ ಸಿಗಲಿದೆ ಇನ್ನು ವಿದ್ಯುತ್ ಸಮಸ್ಯೆ ಬಗೆಹರಿಸಲು 250 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಬದುಕನ್ನು ಅರ್ಥ ಮಾಡಿಕೊಂಡಿದ್ದೇನೆ ಚುನಾವಣೆ ಹತ್ತಿರ ಬಂದಾಗ ಭರವಸೆ ನೀಡಿ ಸುಳ್ಳು ಆಶ್ವಾಸನೆ ಕೊಟ್ಟು ಗೆದ್ದ ನಂತರ ಪಲಾಯನ ಮಾಡುವ ಶಾಸಕನಲ್ಲ ನಾನು ಎಂದು ಗುಡುಗಿದರು.

ಇದನ್ನೂ ಓದಿ :ಇಂಡೋನೇಷ್ಯಾ ಕಡಲತೀರಕ್ಕೆ ಬಂದಿಳಿದ 100 ಕ್ಕೂ ಹೆಚ್ಚು ರೋಹಿಂಗ್ಯಾಗಳು

ಚಿಕ್ಕಜಾಜೂರು ಗ್ರಾಮಕ್ಕೆ 1 ಕೋಟಿ 10 ಲಕ್ಷ ರೂ ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣಕ್ಕಾಗಿ ಅನುದಾನವನ್ನು ನೀಡಿದ್ದೇನೆ ,ಇನ್ನೂ ಹೆಚ್ಚುವರಿಯಾಗಿ ಅನುದಾನ ನೀಡಲು ಬಯಸುತ್ತೇನೆ ಇದೇ ಗ್ರಾಮದ ಲಕ್ಷ್ಮಿ ದೇವಸ್ಥಾನ ರಾಮಕೃಷ್ಣ ದೇವಸ್ಥಾನ ಈಡಿಗರ ಸಮುದಾಯಗಳಿಗೆ ಅನುದಾನ ನೀಡಿದ್ದೇನೆ ಕೆರೆಯಲ್ಲಿ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಹೆಚ್ಚಿನ ಅನುದಾನವನ್ನು ಸಹ ನೀಡಿದ್ದೇನೆ ಇನ್ನು ಹಲವಾರು ಅಭಿವೃದ್ಧಿಯ ಕೆಲಸಗಳನ್ನು ಈ ಗ್ರಾಮಕ್ಕೆ ನೀಡುತ್ತೇನೆಂದು ಹೇಳಲು ಇಚ್ಚಿಸುತ್ತೇನೆ ನಾನು ಇರುವುದ ರೊಳಗೆ ಮುಂದಿನ ದಿನಗಳಲ್ಲಿ ಈ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು.

ಭಾನುವಾರ ಚಿಕ್ಕಜಾಜೂರು ಗ್ರಾಮಪಂಚಾಯಿತಿ. ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದಲ್ಲಿ ನೂತನ ಶಾಪಿಂಗ್ ಕಾಂಪ್ಲೆಕ್ಸ್ ಗಳ ಶಂಕುಸ್ಥಾಪನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಿ ಎಸ್ ಮೂರ್ತಿ ನಾನು ಕಂಡ ಪ್ರಾಮಾಣಿಕ ಶಾಸಕರ ಎಂದರೆ ಅದು ಎಂ ಚಂದ್ರಪ್ಪ ಮಾತ್ರ ಅವರು ಈ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಫೋನ್ ಮುಖಾಂತರ ತಿಳಿಸಿದರೂ ಸಹ ತಕ್ಷಣವೇ ಸಮಸ್ಯೆ ಜಾಗಕ್ಕೆ ಭೇಟಿ ನೀಡಿ ಆ ಗ್ರಾಮದ ಸಮಸ್ಯೆಗಳನ್ನು ಕೆಲವೇ ದಿನಗಳಲ್ಲಿ ಬಗೆಹರಿಸುವ ಗುಣ ಹೊಂದಿರುವ ವ್ಯಕ್ತಿ ಇಂತಹ ಶಾಸಕರು ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಮುಂದಿನ ಚುನಾವಣೆಯಲ್ಲೂ ಸಹ ಇವರು ಗೆದ್ದು ಈ ಕ್ಷೇತ್ರದ ಇನ್ನು ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಇದನ್ನೂ ಓದಿ : ಹೋಟೆಲ್‌ನಲ್ಲಿ ಗ್ಯಾಸ್‌ ಸೋರಿಕೆಯಾಗಿ ಸ್ಫೋಟ: 10 ಮಂದಿಗೆ ಗಾಯ

ಚಿಕ್ಕಜಾಜೂರು ಗ್ರಾಮದ ಸಮಸ್ಯೆಗಳ ಪಟ್ಟಿ ಕೇಳಿದರೆ ಈ ಗ್ರಾಮದ ಸಾರ್ವಜನಿಕ ಸಮಸ್ಯೆಗಳನ್ನು ಅಭಿವೃದ್ಧಿ ಕೆಲಸಗಳನ್ನು ಹಿಂದಿನ ಯಾವ ಶಾಸಕರು ಸಚಿವರು ಮಾಡಿಲ್ಲದಿರುವುದು ಕಂಡುಬರುತ್ತಿದೆ . ಆದರೆ ಎಂ ಚಂದ್ರಪ್ಪನವರು ಈ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು ಬಹಳ ಬೇಗನೆ ಮುಗಿಸುವ ವ್ಯಕ್ತಿತ್ವ ಹೊಂದಿರುವವರು ಎಂದು ಮಂಡಲ ಬಿಜೆಪಿ ಅಧ್ಯಕ್ಷ ಸಿದ್ದೇಶ್ ಮಾತನಾಡಿದರು.

ಗ್ರಾಮದ ಕುಮಾರ್ ಆರಾಧ್ಯ ಮಾತನಾಡಿ ಚಿಕ್ಕಜಾಜೂರು ಗ್ರಾಮದ ಜನತಾ ಕಾಲೋನಿ ಶಾಲೆಗೆ ಹೆಚ್ಚುವರಿ ಕಟ್ಟಡ, ಡಿಗ್ರಿ ಕಾಲೇಜಿನ ವ್ಯವಸ್ಥೆ ಪುಟ್ಬಾತ್ ಅಲ್ಲಿ ವ್ಯಾಪಾರ ಮಾಡುವ ಅಂಗಡಿಗಳಿಗೆ ಮಳಿಗೆಯ ವ್ಯವಸ್ಥೆ ಮಾಡಲು ಸ್ಮಶಾನ ಅಭಿವೃದ್ಧಿಪಡಿಸಲು ದೇವಸ್ಥಾನಗಳ ಏಳಿಗೆಗಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು , ಹೈಟೆಕ್ ಗ್ರಂಥಾಲಯದ ವ್ಯವಸ್ಥೆ ಮಾಡಲು ಶಾಸಕರು ಅನುದಾನ ನೀಡಬೇಕೆಂದು ಪ್ರಾಸ್ತಾವಿಕವಾಗಿ ಮನವಿ ಮಾಡಿದರು.

ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿಸಿ ಮೋಹನ್ ಸ್ವಾಗತಿಸಿದರು, ಶ್ರೀಮತಿ ಭವಾನಿ ಸುರೇಶ್ ಪ್ರಾರ್ಥಿಸಿದರೆ ಶಿಕ್ಷಕ ಎನ್ ಗುರುಸ್ವಾಮಿ ಮತ್ತು ಸಂಗಡಿಗರು ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು, ಶಿಕ್ಷಕ ಡಿಕ್ಕಿ ಮಾಧವರಾವ್ ವಂದಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಎನ್ ಗುರುಸ್ವಾಮಿ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶ್ಮಿ ಪ್ರದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗುಂಜಿಗನೂರು ಇಂದ್ರಣ್ಣ ಎಲ್ಬಿ ರಾಜಶೇಖರ್ ಬಸವರಾಜ್ ಗುಂಜಿಗನೂರು ಹರ್ಷ ಆಡನೂರು ನೌಕರರ ಸಂಘದ ದೇವರಾಜಯ್ಯ ಪಿಡಿಓ ಪುನೀತ್ ಕಾರ್ಯದರ್ಶಿ ಗಾಯತ್ರಿ ಬಿಲ್ ಕಲೆಕ್ಟರ್ ಹಾಲೇಶ್ ಪವನ್, ಮಲ್ಲೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನ ಜೆ ಪುಷ್ಪರಘು ಕೆಎಸ್ ಸಿದ್ದೇಶ್ ಬಿವಿ ರಾಜು ಜಯಶೀಲ ಎ, ಬಾಬು ವನಜಾಕ್ಷಿ ಮಲ್ಲೇಶ್ ಫರ್ಜನ ಬಾನು ಗಂಗಾಧರ ಜಿಎಸ್ ಶ್ರೀಕಾಂತ್ ಮಠದ್ ಜಮೀರ್ ಪಾಷಾ ಅಂಜಲಿ ಮೋಹನ್ ಚಂದ್ರಶೇಖರ ಲಕ್ಷ್ಮೀದೇವಿರುದ್ರೇಶ್ ಗೋವಿಂದಪ್ಪ ಶಶಿಕಲಾ ಇನ್ನಿತರರು ಭಾಗವಹಿಸಿದ್ದರು.

ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.