Hosangadi: ಪರಿಚಯಸ್ಥರಿಂದ ಮನೆ ಕಳವು
Team Udayavani, Oct 27, 2023, 12:29 AM IST
ಸಿದ್ದಾಪುರ: ಪರಿಚಯಸ್ಥರಾದ ಉಮೇಶ್ ಅವರ ಮೇಲೆ ನಂಬಿಕೆಯಿಟ್ಟು ಖಾಲಿ ಇರುವ ಮನೆಯ ಬೀಗವನ್ನು ಕೊಟ್ಟಿದ್ದು, ಆರೋಪಿಯು ಬೀಗ ಕಳವಾಗಿದೆ ಎಂದು ಹೇಳಿದ್ದ.
ಅ. 24ರಂದು ಬಂದು ಮನೆಯ ಜಗಲಿಯಲ್ಲಿ ಮಲಗಿದ್ದು, ಮರುದಿನ ಬಂದು ನೋಡುವಾಗ ಮನೆಯಲ್ಲಿದ್ದ 7,500 ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ಹೊಸಂಗಡಿ ಗ್ರಾಮದ ಮಂಜುನಾಥ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.