ಸ್ಮತಿ ಮಂಧನಾ ವನಿತಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಪ್ರಗತಿ
Team Udayavani, Feb 8, 2022, 11:30 PM IST
ದುಬಾೖ: ವನಿತಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಸ್ಮತಿ ಮಂಧನಾ ಒಂದಿಷ್ಟು ಪ್ರಗತಿ ಸಾಧಿಸಿದ್ದಾರೆ.
ಎರಡು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಂದಿದ್ದಾರೆ. ನಾಯಕಿ ಮಿಥಾಲಿ ರಾಜ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ. ಇಬ್ಬರೂ ಕ್ರಮವಾಗಿ 710 ಹಾಗೂ 738 ರ್ಯಾಂಕಿಂಗ್ ಅಂಕ ಹೊಂದಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ನ ಅಗ್ರಸ್ಥಾನದಲ್ಲಿರುವವರು ಆಸ್ಟ್ರೇಲಿಯದ ಅಲಿಸ್ಸಾ ಹೀಲಿ (742). ಬೆತ್ ಮೂನಿ (719) ಮತ್ತು ಆ್ಯಮಿ ಸ್ಯಾಟರ್ವೇಟ್ (717) 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.