Pro Kabaddi: ಮುಂಬಾ ವಿರುದ್ಧ ಜೈಪುರ್ ಜಯ
Team Udayavani, Jan 6, 2024, 11:17 PM IST
ಮುಂಬಯಿ: ಯು ಮುಂಬಾ ತವರಿನ ಆವೃತ್ತಿಯಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ. ಶನಿವಾರದ ಮೊದಲ ಪ್ರೊ ಕಬಡ್ಡಿ ಕದನದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ 41-31 ಅಂತರದ ಗೆಲುವು ಸಾಧಿಸಿತು.
ರೈಡರ್ ಅರ್ಜುನ್ ದೇಶ್ವಾಲ್ ಜೈಪುರ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರದು ಸರ್ವಾಧಿಕ 17 ಅಂಕಗಳ ಸಾಧನೆ. ಮತ್ತೋರ್ವ ರೈಡರ್ ವಿ. ಅಜಿತ್ 6 ಅಂಕ ಗಳಿಸಿದರು. ಇದು 10 ಪಂದ್ಯಗಳಲ್ಲಿ ಜೈಪುರಕ್ಕೆ ಒಲಿದ 6ನೇ ಜಯ.
ಯು ಮುಂಬಾ 9 ಪಂದ್ಯಗಳಲ್ಲಿ 3ನೇ ಸೋಲು ಕಂಡಿತು. ರೈಡರ್ ಗುಮಾನ್ ಸಿಂಗ್ (13 ಅಂಕ) ಉತ್ತಮ ಹೋರಾಟ ನಡೆಸಿದರು. ರೈಡರ್ ಅಲಿರೇಝ 6 ಅಂಕ, ಜೈ ಭಗವಾನ್ 5 ಅಂಕ ತಂದಿತ್ತರು.
ಟೈಟಾನ್ಸ್ಗೆ 9ನೇ ಸೋಲು
ತೆಲುಗು ಟೈಟಾನ್ಸ್ನ ಸೋಲಿನ ಸಂಖ್ಯೆ 9ಕ್ಕೆ ಏರಿದೆ. ದಿನದ 2ನೇ ಪಂದ್ಯ ದಲ್ಲಿ ಗುಜರಾತ್ ಜೈಂಟ್ಸ್ 37- 30 ಅಂತರದಿಂದ ಟೈಟಾನ್ಸ್ಗೆ ಹೊಡೆತ ವಿಕ್ಕಿತು. ಇದು 11 ಪಂದ್ಯಗಳಲ್ಲಿ ಗುಜ ರಾತ್ ಸಾಧಿಸಿದ 7ನೇ ಜಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?