ಕಾಸರಗೋಡು ಜಿಲ್ಲೆ ; 6 ಮಂದಿಗೆ ಸೋಂಕು
Team Udayavani, Jun 15, 2020, 8:01 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 6 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದ್ದು ಒಬ್ಬರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ 58 ವರ್ಷದ ವ್ಯಕ್ತಿ, ಅವರ 19 ವರ್ಷದ ಪುತ್ರ, 37 ವರ್ಷದ ವ್ಯಕ್ತಿ, ಹರಿಯಾಣದಿಂದ ಬಂದ 36 ವರ್ಷದ ವ್ಯಕ್ತಿ, ಯುಎಇಯಿಂದ ಬಂದ 27 ವರ್ಷದ ಮತ್ತು 56 ವರ್ಷದ ವ್ಯಕ್ತಿಗೆ ರೋಗ ಬಾಧಿಸಿದೆ. 30 ವರ್ಷದ ಕುಂಬಳೆ ಪಂಚಾಯತ್ ನಿವಾಸಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3,651 ಮಂದಿ ನಿಗಾವಣೆಯಲ್ಲಿದ್ದಾರೆ.
54 ಮಂದಿಗೆ ಸೋಂಕು
ರಾಜ್ಯದಲ್ಲಿ ರವಿವಾರ 54 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢಗೊಂಡಿದೆ. ಇವರಲ್ಲಿ 23 ಮಂದಿ ವಿದೇಶದಿಂದ ಬಂದವರು. 25 ಮಂದಿ ಇತರ ರಾಜ್ಯಗಳಿಂದ ಬಂದವರು. ಮೂವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ಇದೇ ವೇಳೆ 56 ಮಂದಿ ಗುಣಮುಖರಾಗಿದ್ದಾರೆ.
215 ಮಂದಿ ವಿರುದ್ಧ ಕೇಸು
ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 215 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ ಏಳು ಕೇಸುಗಳನ್ನು ದಾಖಲಿಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ