ಎ. 30ರ ವರೆಗೆ ಕೋರ್ಟ್‌ಗಳಿಗೆ ರಜೆ
Team Udayavani, Apr 14, 2020, 6:12 AM IST
ಬೆಂಗಳೂರು: ಲಾಕ್‌ಡೌನ್ ಅವಧಿ ಮುಂದುವರಿಸಿರುವ ಹಿನ್ನೆಲೆ ಯಲ್ಲಿ ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ವಿಚಾರಣಾ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ರಜೆಯನ್ನು ಎ. 30ರ ವರೆಗೆ ವಿಸ್ತರಿಸಲಾಗಿದೆ.
ಓಕ್ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿ ಫಿಕೇಶನ್ ಹೊರಡಿಸಿದ್ದಾರೆ.
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ, ಧಾರವಾಡ ನ್ಯಾಯಪೀಠಗಳು ಸಹಿತ ಎಲ್ಲ ವಿಚಾರಣಾ, ಜಿಲ್ಲಾ, ಕೌಟುಂ
ಬಿಕ, ಕಾರ್ಮಿಕ ನ್ಯಾಯಾಲಯ ಗಳು ಮತ್ತು ಕೈಗಾರಿಕಾ ನ್ಯಾಯಾಧೀಕರಣಗಳಿಗೆ ರಜೆ ಇರಲಿದೆ. ಆದರೆ, ತುರ್ತು ಪ್ರಕರಣಗಳ ವಿಚಾರಣೆ ಗಾಗಿ ಎ. 16, 21, 24, 28ಕ್ಕೆ ಹೈಕೋರ್ಟ್ ನ್ಯಾಯಪೀಠಗಳು ಕಲಾಪ ನಡೆಸಲಿವೆ. ಜಿಲ್ಲಾ ನ್ಯಾಯಾಲಯಗಳಿಗೂ ತುರ್ತು ಪ್ರಕರಣ
ಗಳಿದ್ದರೆ ವಕೀಲರು, ಪಾರ್ಟಿ ಇನ್ ಪರ್ಸನ್ಸ್ ಇ-ಮೇಲ್‌ಮೂಲಕ ವಿಚಾರಣೆಗೆ ಮನವಿ ಮಾಡಬಹುದು ಎಂದು ತಿಳಿಸಲಾಗಿದೆ.