Lok Sabha Elections; ರಾಜ್ಯದಲ್ಲಿ ಮೋದಿಯವರ 10 ಕಾರ್ಯಕ್ರಮ
41 ವಿಭಾಗಗಳಿಂದ ಕೂಡಿದ ಪ್ರತ್ಯೇಕ " ವಾರ್ ರೂಂ' ಆರಂಭ
Team Udayavani, Mar 16, 2024, 7:15 AM IST
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಸಭೆ-ಸಮಾವೇಶ ನಡೆಸುವ ಸಾಧ್ಯತೆ ಇದೆ.
ಚುನಾವಣೆ ನಿರ್ವಹಣೆ ಸಮಿತಿ ಸಂಚಾಲಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಈ ವಿಷಯ ಪ್ರಸ್ತಾವವಾಗಿದ್ದು, ಲೋಕಸಭೆ ಚುನಾವಣೆ ನಿರ್ವಹಣೆಗಾಗಿ 41 ವಿಭಾಗಗಳಿಂದ ಕೂಡಿದ ಪ್ರತ್ಯೇಕ “ವಾರ್ ರೂಂ’ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಶುಕ್ರವಾರ ದಿನವಿಡೀ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಕೂಡ ಆಗಮಿಸಿ ಬಂಡಾಯ ಶಮನಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
10 ಸಭೆ-ಸಮಾವೇಶ
ಚುನಾವಣೆ ನಿರ್ವಹಣೆ ಉದ್ದೇಶದಿಂದ ವಾರ್ ರೂಂನಲ್ಲಿ ಒಟ್ಟು 151 ಪ್ರಮುಖರನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಫಲಾನುಭವಿಗಳ ಸಭೆ, ಜಾತಿ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸಹಿತ ಎಲ್ಲ ಸಮುದಾಯಗಳನ್ನು ತಲುಪಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.
ಪ್ರಧಾನಿ 10 ಸಭೆ-ಸಮಾವೇಶದಲ್ಲಿ ಭಾಗಿಯಾಗಬಹುದೆಂದು ನಿರೀಕ್ಷಿಸಲಾಗಿದೆ. ಜತೆಗೆ ಅಮಿತ್ ಶಾ, ನಡ್ಡಾ, ರಾಜನಾಥ್ ಸಿಂಗ್ ಮುಂತಾದ ಪ್ರಮುಖರು ರಾಜ್ಯ ಪ್ರವಾಸ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ