Election: ಸ್ಪರ್ಧೆ ವಯೋಮಿತಿ 18ಕ್ಕೆ ಇಳಿಕೆ- ಹದಿಹರೆಯಕ್ಕೆ ಬೇಡ ಅಧಿಕಾರ

Team Udayavani, Aug 11, 2023, 11:37 PM IST

politi

ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಬೇಕೆಂದು ಈಚೆಗೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.  ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಚಾವಡಿಯಲ್ಲೊಂದು ಚರ್ಚೆ.

ಸಂಸದೀಯ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿಯನ್ನು 25 ರಿಂದ 18ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಿರು ವುದು ಅಷ್ಟೊಂದು ಸೂಕ್ತವಾದ ನಿರ್ಧಾರವಲ್ಲ. ಕೆನಡಾ, ಯುಕೆ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿನ ವಯೋಮಿತಿಯನ್ನು ಗಮನಿಸಿ ಈ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಆದರೆ ಆ ದೇಶಗಳ ಯುವಜನತೆಗೂ ನಮ್ಮ ದೇಶದ ಯುವಜನತೆಗೂ ಅಜಗಜಾಂತರವಿದೆ.

ಅಲ್ಲಿ ಹದಿಹರೆ ಯದಲ್ಲೇ ಮಕ್ಕಳು ಕಲಿಕೆಯ ಜತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಂಪಾದನೆ ಮಾಡುತ್ತಾರೆ. ಅಲ್ಲಿನ ಯುವ ಜನರಲ್ಲಿ ಸ್ವಾವಲಂಬನೆ ಇದೆ. ಶ್ರಮ ಗೌರವವಿದೆ. ತಮ್ಮ ಹೆತ್ತವರ ಪ್ರತಿಷ್ಠೆ, ಸ್ಥಾನಮಾನಗಳ ಗತ್ತಿನಲ್ಲಿ ತಾವು ತಿರುಗಾಡದೇ, ತಮ್ಮದೇ ಅಸ್ತಿತ್ವ ಕಂಡು ಕೊಳ್ಳಲು, ತಮ್ಮ ಕಾಲ ಮೇಲೆ ನಿಲ್ಲಲು ಅವರು ಕಲಿತಿರುತ್ತಾರೆ. ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಸ್ವಂತ ಕಾಲ ಮೇಲೆ ನಿಲ್ಲುವುದು ಹೆಚ್ಚು ಕಮ್ಮಿ 25 ವರ್ಷದ ಬಳಿಕವೇ. 18 ವರ್ಷ ಪ್ರಾಯ ದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಯ ಪರಿಚಯವೇ ಬಹಳ ಜನರಿಗೆ ಇರುವುದಿಲ್ಲ. ಆತ ಗೆಲ್ಲುವ ಸಾಧ್ಯತೆಯೂ ಬಹಳ ಕಡಿಮೆ.

ಒಬ್ಬ ವ್ಯಕ್ತಿಯನ್ನು ಜನ ಗುರುತಿಸಿ ಮತ ಹಾಕಬೇಕಾದರೆ ಯಾವುದಾದರೂ ರೀತಿಯ ಸಮಾಜ ಸೇವೆ ಅಥವಾ ಇತರ ಕ್ಷೇತ್ರಗಳಲ್ಲಿ ಅವನು ಗುರುತಿಸಲ್ಪಟ್ಟಿರಬೇಕು.  18 ವರ್ಷ ಪ್ರಾಯದಲ್ಲಿ  ವ್ಯಕ್ತಿಗೆ ಸ್ವಂತವಾದುದೊಂದು ಐಡೆಂಟಿಟಿ ಇರುವ ಸಾಧ್ಯತೆ ಬಹಳ ಕಡಿಮೆ. 18 ವರ್ಷದಿಂದಲೇ ಅಥವಾ ಅದಕ್ಕೂ ಮೊದಲು ಬಿಡುವಿನ ವೇಳೆಯಲ್ಲಿ ರಾಜಕೀಯವನ್ನು ಕಂಡು ಕೇಳಿ ಅವರು ಬೆಳೆಯಲಿ ಆದರೆ ಸ್ವಾವಲಂಬನೆ ಪಡೆದು ನಾಲ್ಕು ಜನರಿಂದ ಗುರುತಿಸಲ್ಪಡಲು ಸಾಧ್ಯವಾದಾಗ ಅಂದರೆ 25 ವರ್ಷ ತುಂಬಿದ ಅನಂತರವಷ್ಟೇ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಅವರಿಗೆ ನೀಡುವುದು ಒಳಿತು. ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗಳು ಇನ್ನೂ ಪೂರ್ಣ ವಾಗಿಲ್ಲದ ಚಂಚಲ ಪ್ರಕೃ ತಿಯ, ಪ್ರೀತಿ ಪ್ರೇಮಗಳ ಹಿಂದೆ ಬೀಳುವ, ದುಡುಕುತನ ತುಂಬಿದ 18 ವರ್ಷ ಪ್ರಾಯ ಚುನಾವಣೆಗೆ ಸ್ಪರ್ಧಿಸಲು ಖಂಡಿತಾ ಸೂಕ್ತವಲ್ಲ.

ನಮ್ಮ ದೇಶದ ರಾಜಕೀಯಕ್ಕೆ ಖಂಡಿತವಾಗಿಯೂ ಯುವಕರು ಬೇಕು. ಆದರೆ ಅವರು ಪ್ರಬುದ್ಧರಾದ ಉನ್ನತ ಶಿಕ್ಷಣ ಪಡೆದ ಯುವಕರಾಗಿದ್ದಾಗ ಮಾತ್ರ ಉತ್ತಮ ಆಡಳಿ ತವನ್ನು ನಿರೀಕ್ಷಿಸಲು ಸಾಧ್ಯ. ಹಿರಿಯರ ಅನುಭವ ಸಂಪತ್ತನ್ನಂತೂ ನಾವು ಅಲ್ಲಗಳೆಯುವಂತೆಯೇ ಇಲ್ಲ. ಹಾಗೆಯೇ ಚುನಾವಣೆಗೆ ಸ್ಪರ್ಧಿಸಲು ಒಂದು ಗರಿಷ್ಠ ಪ್ರಾಯಮಿತಿಯನ್ನು ನಿಗದಿಪಡಿಸುವುದೂ ಉಳಿತು. ಗರಿಷ್ಠ ಎಂದರೆ 65 ರಿಂದ 70ರ ಒಳಗೆ ರಾಜಕೀಯಕ್ಕೂ ಒಂದು ನಿವೃತ್ತಿ ವಯಸ್ಸನ್ನು ನಿಗದಿ ಪಡಿಸುವುದು ಒಳಿತು. ಆಗ ಯುವಕರ ಪ್ರಾತಿನಿಧ್ಯ ಹೆಚ್ಚಿಸಬಹುದು. ಹಾಗೆಯೇ ಗರಿಷ್ಠ ಐದು ಬಾರಿ ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ತರಬೇಕು.

ಜೆಸ್ಸಿ ಪಿ.ವಿ., ಪುತ್ತೂರು

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.