ಮಾರುತಿ ಸುಜುಕಿ ಇಂಡಿಯಾದ ಲಾಭದಲ್ಲಿ ಶೇ.48 ಕುಸಿತ
Team Udayavani, Jan 25, 2022, 10:00 PM IST
ಪ್ರಸಕ್ತ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದಲ್ಲಿ ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾದ ಲಾಭದಲ್ಲಿ ಶೇ.48ರಷ್ಟು ಕುಸಿತವಾಗಿದೆ.
2021 ಡಿ.31ಕ್ಕೆ ಕೊನೆಗೊಂಡ ಮೂರನೇ ತ್ತೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದ ನಷ್ಟ ಇದಾಗಿದೆ. ಕಾರು ತಯಾರಿಕೆಗೆ ಬೇಕಾಗಿರುವ ಚಿಪ್ ಗಳ ಕೊರತೆ ಮತ್ತು ಇತರ ಅಗತ್ಯ ವೆಚ್ಚಗಳಲ್ಲಿ ಏರಿಕೆಯಾಗಿರುವುದೂ ನಷ್ಟ ಹೆಚ್ಚಾಗಲು ಕಾರಣವಾಗಿದೆ.
ದೇಶಾದ್ಯಂತ ಇರುವ ಶೋರೂಮ್‌ಗಳಲ್ಲಿ 2,40,000ಕ್ಕೂ ಅಧಿಕ ಕಾರುಗಳಿಗೆ ಬುಕಿಂಗ್ ಮಾಡಲಾಗಿದ್ದು, ಗ್ರಾಹಕರು ಕಾಯುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು