ನಾರಾಯಣ ಗೌಡ ರಾಜೀನಾಮೆ: ಕೆ.ಆರ್‌.ಪೇಟೆಗೆ ನಿಖಿಲ್ ಅಭ್ಯರ್ಥಿ?

ಕಾರ್ಯಕರ್ತರಲ್ಲಿ ತೀವ್ರಗೊಂಡ ಚರ್ಚೆ, ಯುವ ನಾಯಕನೇ ಸಮರ್ಥ ಎನ್ನುವ ಅಭಿಪ್ರಾಯ ....

Team Udayavani, Jul 7, 2019, 12:31 PM IST

ಮಂಡ್ಯ:ಜೆಡಿಎಸ್‌ ಶಾಸಕ ನಾರಾಯಣ ಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ.ಆರ್‌. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ಕಾಯಕರ್ತರಲ್ಲಿ ಉಪಚುನಾವಣೆಯ ಕುರಿತಾಗಿ ಚರ್ಚೆ ತೀವ್ರಗೊಳ್ಳುತ್ತಿದ್ದು, ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗಬೇಕು ಎಂಬ ಚರ್ಚೆಗಳು ಆರಂಭವಾಗಿದೆ.

ಕೆ.ಆರ್‌.ಪೇಟೆ ಜೆಡಿಎಸ್‌ ಕಾರ್ಯಕರ್ತರು ಒಂದೆಡೆ ನಾರಾಯಣ ಗೌಡ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು ಇನ್ನೊಂದೆಡೆ ನಿಖಿಲ್ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪ್ರಚಾರದ ಹೊರ ತಾಗಿಯೂ ನಿಖಿಲ್ ಅವರು ಸುಮಲತಾ ಅಂಬರೀಶ್‌ ಅವರ ಎದುರು ಪರಭಾವ ಅನುಭವಿಸಿದ್ದರು. ಕ್ಷೇತ್ರದ ಜನರಿಗೆ ಪರಿಚಿತ ಮುಖ ಆಗಿರುವ ಕಾರಣ ಉಪಚುನಾವಣೆ ಎದುರಾದರೆ ಜೆಡಿಎಸ್‌ ಭದ್ರ ಕೋಟೆಯಲ್ಲಿ ಅನುಕಂಪದ ಆಧಾರದಲ್ಲಿ ಗೆಲುವು ಸಾಧಿಸಬಹುದು ಎಂದು ಜೆಡಿಎಸ್‌ ಕಾರ್ಯಕರ್ತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಮೆರಿಕದಿಂದ ವಾಪಾಸಾಗುತ್ತಿದ್ದು ಇಂದು ರಾತ್ರಿ 8 ಗಂಟೆಯ ವೇಳೆಗೆ ಕೆಐಎಲ್‌ಗೆ ಆಗಮಿಸಲಿದ್ದಾರೆ. ರಾಜೀನಾಮೆ ನೀಡಿರುವ ನಾರಾಯಣ ಗೌಡ ಅವರ ಮನವೊಲಿಸುತ್ತಾರೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

ನಾರಾಯಣ ಗೌಡ ಅವರೊಂದಿಗೆ ಮಹಾಲಕ್ಷ್ಮೀ ಲೇಔಟ್‌ ಶಾಸಕ ಗೋಪಾಲಯ್ಯ ಮತ್ತು ಹುಣಸೂರಿನ ಶಾಸಕ ಎಚ್‌.ವಿಶ್ವನಾಥ್‌ ಷವರು ರಾಜೀನಾಮೆ ಸಲ್ಲಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ