ನನ್ನನ್ನು ಯಾರೂ ತಡೆದಿಲ್ಲ: ಸೋನು ಸೂದ್
Team Udayavani, Jun 10, 2020, 4:16 AM IST
ಬಾಂದ್ರಾ ರೈಲು ನಿಲ್ದಾಣ ಪ್ರವೇಶಿಸದಂತೆ ತಮ್ಮನ್ನು ಯಾರೂ ತಡೆದಿಲ್ಲ ಎಂದು ನಟ ಸೋನು ಸೂದ್ ಸ್ಪಷ್ಟಪಡಿಸಿದ್ದಾರೆ. ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ನಟ ಸೋನು ಸೂದ್ ಕಾರ್ಯಕ್ಕೆ ಶಿವಸೇನೆ ರಾಜಕೀಯ ಬಣ್ಣ ಬಳಿದ ಬೆನ್ನಲ್ಲೇ, ಸೂದ್ ಬಾಂದ್ರಾ ನಿಲ್ದಾಣ ಪ್ರವೇಶಿಸದಂತೆ ತಡೆಯ ಲಾಗಿದೆ ಎಂಬ ವದಂತಿ ಹಬ್ಬಿತ್ತು.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಹುಭಾಷಾ ನಟ, “ಕಾರ್ಮಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಲ್ಲಿ ಮನವಿ ಮಾಡಿದ್ದೇನೆ. ಆ ರೈಲಿನ ಬರುವಿಕೆಗಾಗಿ ಕಾಯುತ್ತಿದ್ದು, ಬಂದ ಕೂಡಲೆ ನನ್ನ ಕೆಲಸ ಪುನಃ ಮುಂದು ವರಿಸಲಿದ್ದೇನೆ” ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.