ಅಣು ಬಾಂಬ್ ತಯಾರಿಕೆ: ಹುರುಳಿಲ್ಲದ ರಷ್ಯಾ ಆರೋಪ; ಉಕ್ರೇನ್ ಸರಕಾರದ ತಿರುಗೇಟು
Team Udayavani, Mar 7, 2022, 7:50 AM IST
ಮಾಸ್ಕೋ/ಲಿವ್ಯೂ: ಅಣು ಬಾಂಬ್ ತಯಾರಿಸಲು ಪ್ರಯತ್ನ ಮಾಡಲಾಗುತ್ತಿತ್ತು ಎಂಬ ರಷ್ಯಾದ ಆರೋಪಗಳನ್ನು ಉಕ್ರೇನ್ ತಳ್ಳಿ ಹಾಕಿದೆ. 1994ರಲ್ಲಿಯೇ ಅಣ್ವಸ್ತ್ರಗಳನ್ನು ಹಿಂದಿನ ಯುಎಸ್ಎಸ್ಆರ್ಗೆ ಬಿಟ್ಟು ಕೊಡಲಾಗಿತ್ತು. ಮತ್ತೂಮ್ಮೆ ಅಣ್ವಸ್ತ್ರಗಳನ್ನು ಹೊಂದಿದ ರಾಷ್ಟ್ರಗಳ ಕ್ಲಬ್ಗ ಸೇರುವ ಇರಾದೆ ಅಲ್ಲ. ಸದ್ಯ ರಷ್ಯಾ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಉಕ್ರೇನ್ ಸರಕಾರ ತಿಳಿಸಿದೆ
ರವಿವಾರ ನಡೆದಿದ್ದ ಬೆಳವಣಿಗೆಯಲ್ಲಿ ಉಕ್ರೇನ್ ಪ್ಲುಟೋನಿಯಂ ಆಧಾರಿತ ಪರಮಾಣು ಬಾಂಬ್ ತಯಾರಿಸುವ ಪ್ರಯತ್ನದಲ್ಲಿ ತೊಡಗಿತ್ತು ಎಂದು ರಷ್ಯಾ ಆರೋಪಿಸಿತ್ತು. ಈ ಬಗ್ಗೆ ಆರ್ಐಎ, ಟಿಎಎಸ್ಎಸ್ ಮತ್ತು ಇಂಟರ್ಫಾಕ್ಸ್ ಮಾಧ್ಯಮ ಸಂಸ್ಥೆಗಳು ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿ ದ್ದವು.ಚರ್ನೋಬಿಲ್ ಅಣು ಸ್ಥಾವರದಲ್ಲಿಯೇ ಪ್ಲುಟೋನಿಯಂ ಆಧಾರಿತ ಶಕ್ತಿ ಶಾಲಿ ಪರಮಾಣು ಬಾಂಬ್ ತಯಾರಿಸಲು ಪ್ರಯತ್ನ ನಡೆಸಿತ್ತು ಎಂದು ಆ ವರದಿಯಲ್ಲಿ ಹೇಳಿಕೊಳ್ಳಲಾಗಿತ್ತು.
ಇತ್ತೀಚೆಗಷ್ಟೇ ರಷ್ಯಾ ಸೇನೆ ಚರ್ನೋ ಬಿಲ್ ಅಣು ಸ್ಥಾವರವನ್ನು ವಶಪಡಿಸಿ ಕೊಂಡಿತ್ತು. 1986ರಲ್ಲಿ ನಡೆದಿದ್ದ ಚರ್ನೋಬಿಲ್ ದುರಂತದಲ್ಲಿ ಹಲವರು ಅಸುನೀಗಿದ್ದರು. 2 ಸಾವಿರನೇ ಇಸ್ವಿಯಲ್ಲಿ ಈ ಸ್ಥಾವರವನ್ನು ಮುಚ್ಚಲಾಗಿತ್ತು. ಇದೇ ವೇಳೆ, ಉಕ್ರೇನ್ ಹೊಂದಿರುವ ದೇಶದಮಾನ್ಯತೆ ಶೀಘ್ರವೇ ಕಳೆದುಕೊಳ್ಳಲಿದೆ ಎಂದು ಪುತಿನ್ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ