ಪ್ರಸ್ತುತ ರಾಜ್ಯ ರಾಜಕೀಯದ ಪರಿಸ್ಥಿತಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕರ ಅಗತ್ಯವಿದೆಯೇ?

Team Udayavani, Oct 9, 2019, 3:33 PM IST

ಮಣಿಪಾಲ: ಪ್ರಸ್ತುತ ರಾಜ್ಯ ರಾಜಕೀಯದ ಪರಿಸ್ಥಿತಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕರ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ‘ಉದಯವಾಣಿ’ ಓದುಗರಿಗೆ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಪ್ರಸನ್ನ ಪಂಡಿತ್ : ಬರೀ ರಾಜ್ಯಕ್ಕೆ ಮಾತ್ರ ಅಲ್ಲ ಕೇಂದ್ರಕ್ಕೂ ಬಲಿಷ್ಠವಾದ ವಿರೋಧ ಪಕ್ಷದ ನಾಯಕ ಅಲ್ಲ, ಪ್ರತಿ ಪಕ್ಷದ ನಾಯಕರ ಅಗತ್ಯ ಇದೆ.

ರವೀಂದ್ರ ಭಟ್: ಅಗತ್ಯವಿಲ್ಲ. ಮುಖ್ಯವಾಗಿ ಮೂರು ಮುಖ್ಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಮತ್ತೆ ವಿರೋಧ ಮಾಡುವ ಅಗತ್ಯವಿಲ್ಲ.

ಪ್ರಭು.ಆರ್.ಯು. ಬಸವನಕೋಟೆ: ಸಮರ್ಥ ನಾಯಕನ ಅವಶ್ಯಕತೆ ಇದೆ. ಪ್ರಜಾಪ್ರಭುತ್ವವನ್ನು ಕಾಯುವ ಎದೆಗಾರಿಕೆ ಇರುವ ನಾಯಕನ ಅವಶ್ಯಕತೆ ಇದೆ.

ಕುಮಾರ್ ಮಾತಾಡ್ : ಸರ್ಕಾರ ಒಳ್ಳೆ ಹಾದಿಯಲ್ಲಿ ನಡೆಯಬೇಕಾದ್ರೆ, ಒಂದು ಘಟ್ಟಿಯಾದ್, ಸಮರ್ಥ ವಿರೋಧ ಪಕ್ಷದ ನಾಯಕರು ಬೇಕೇ ಬೇಕು.

ರಾಜೇಶ್ ಅಂಚನ್ : ಖಂಡಿತಾ ಹೌದು. ವಿರೋಧಪಕ್ಷ ಅಂದ ಕೂಡಲೇ ಎಲ್ಲಾದಕ್ಕೂ ವಿರೋಧ ಮಾಡಿ ಸಭಾತ್ಯಾಗ ಮಾಡೋವಂತಹ ವಿರೋಧ ಪಕ್ಷ ಆಗಬಾರದು. ವಸ್ತುನಿಷ್ಠವಾಗಿ ಸರಕಾರವನ್ನು ಪ್ರಶ್ನೆ ಮಾಡುವಂತಹ ದಿಟ್ಟ ನಾಯಕನ ಅಗತ್ಯವಿದೆ. ಈ ನಿಟ್ಟಿನಲ್ಲಿ ವ್ಯಕ್ತಿಗತ ಟೀಕೆಗೆ ಇಳಿಯುವ ಸಿದ್ದರಾಮಯ್ಯ, ಕುಮಾರಸ್ವಾಮಿ ಅಂತಹವರು ಅನಗತ್ಯ. ನೈಜ ದೃಷ್ಟಿಕೋನ ದಿಂದ ವರ್ತಿಸುವ ಒಬ್ಬ ದಿಟ್ಟ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಉಭಯ ಪಕ್ಷಗಳಲ್ಲೂ ಅಂತಹ ನಾಯಕರ ಕೊರತೆ ಎದ್ದು ಕಾಣುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ