ಬಿಹಾರದವರು ತಮಿಳುನಾಡಿಗೆ ಟಾಯ್ಲೆಟ್‌ ತೊಳೆಯಲು ಬರ್ತಾರೆ-ದಯಾನಿಧಿ ಮಾರನ್‌ ವಿವಾದಾತ್ಮಕ ಮಾತು

ತೇಜಸ್ವಿ ಯಾದವ್‌ ಕಟು ಟೀಕೆ - ಇಂಡಿಯಾ ಒಕ್ಕೂಟದಲ್ಲಿ ಮತ್ತೆ ಬಿರುಕು

Team Udayavani, Dec 24, 2023, 10:49 PM IST

DAYANIDHI MARAN

ಚೆನ್ನೈ/ಪಟ್ನಾ: ಸನಾತನ ಧರ್ಮವನ್ನು ನಾಶ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆ ನೀಡಿ ವಿವಾದ ಹಸಿರಾಗಿರುವಂತೆಯೇ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಬಿಹಾರ, ಉತ್ತರ ಪ್ರದೇಶದವರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯಲು ಬರುತ್ತಾರೆ ಎಂದು ಹೇಳಿದ್ದು ಐ.ಎನ್‌.ಡಿ.ಐ.ಎ.ಮೈತ್ರಿಕೂಟದಲ್ಲಿ ಬಿರುಕಿನ ರೇಖೆಗಳನ್ನು ಸೃಷ್ಟಿಸಿದೆ.

ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ಆರ್‌ಜೆಡಿ ನಾಯಕರಂತೂ ಸಂಸದ ದಯಾನಿಧಿ ಮಾರನ್‌ ಹೇಳಿಕೆಯಿಂದ ಕ್ರುದ್ಧಗೊಂಡಿದ್ದಾರೆ. ನಿಗದಿತ ಸಮುದಾಯದವರೇ ಇಂಥ ಕೆಲಸ ಮಾಡುತ್ತಿದ್ದಾರೆಯೇ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಚರ್ಚೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಹೊಸ ಹೇಳಿಕೆ ತಲ್ಲಣಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಸಚಿವ ದಯಾನಿಧಿ ಮಾರನ್‌ ಅವರು “ಇಲ್ಲಿನ ಜನರು ಇಂಗ್ಲಿಷ್‌ ಅಧ್ಯಯನ ಮಾಡಿರುವುದರಿಂದ ಐ.ಟಿ.ಕಂಪನಿಗಳಲ್ಲಿ ಉತ್ತಮ ವೇತನ ಇರುವ ಕೆಲಸ ಪಡೆಯುತ್ತಿದ್ದಾರೆ. ಆದರೆ, ಬಿಹಾರ, ಉತ್ತರ ಪ್ರದೇಶದವರು ಹಿಂದಿ ಹಿಂದಿ ಎನ್ನುತ್ತಿದ್ದಾರೆ. ಹೀಗಾಗಿ, ಆ ಭಾಷೆಯನ್ನು ಕಲಿತ ಬಿಹಾರದವರು ತಮಿಳುನಾಡಿನಲ್ಲಿ ರಸ್ತೆಯಲ್ಲಿ ಕಸ ಗುಡಿಸುತ್ತಾರೆ, ಶೌಚಾಲಯ ತೊಳೆಯುತ್ತಾರೆ. ಜತೆಗೆ ಅವರು ಮನೆ ಕಟ್ಟುವ ಕೆಲಸದಲ್ಲೂ ಕೌಶಲ್ಯ ಪಡೆದಿದ್ದಾರೆ’ ಎಂದು ಹೇಳಿದ್ದರು.

ಡಿಎಂಕೆ ನಾಯಕರು ಇದೊಂದು ಹಳೆಯ ವಿಡಿಯೋ ಎಂದು ಸಮಜಾಯಿಷಿ ನೀಡಿದ್ದರೂ, ಅದು ಪ್ರಯೋಜನವಾಗಿಲ್ಲ. ಬಿಹಾರದಲ್ಲಿ ಐ.ಎನ್‌.ಡಿ.ಐ.ಎ. ಮೈತ್ರಿಕೂಟದ ಅಂಗಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾರನ್‌ ಹೇಳಿಕೆಯಿಂದ ಕ್ರುದ್ಧರಾಗಿದ್ದಾರೆ. “ಅವರ ಹೇಳಿಕೆ ಖಂಡನೀಯ. ಇತರ ರಾಜ್ಯಗಳಲ್ಲಿನ ಪಕ್ಷದ ನಾಯಕರು, ಅವರು ಯಾವುದೇ ಪಕ್ಷಕ್ಕೆ ಸೇರಿದ್ದರೂ, ಈ ರೀತಿ ಮಾತನಾಡಿದ್ದು ಸರಿಯಲ್ಲ. ಇತರರನ್ನು ನಾವು ಗೌರವಿಸುತ್ತೇವೆ. ಅದೇ ಮಾನ್ಯತೆಯನ್ನೂ ನಾವೂ ಬಯಸುತ್ತೇವೆ. ಅವರು ನಿಗದಿತ ಸಮುದಾಯದವರೇ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ರುತ್ತಿದ್ದರೆ ಅದಕ್ಕೊಂದು ಅರ್ಥವಿತ್ತು” ಎಂದಿದ್ದಾರೆ.

ಸಾಮಾಜಿಕ ನ್ಯಾಯ: ಡಿಎಂಕೆ ನಾಯಕರು ಮಾತೆತ್ತಿದ್ದರೆ ಸಾಮಾಜಿಕ ನ್ಯಾಯದ ಮಾತಾಡು ತ್ತಿದ್ದಾರೆ. ಆರ್‌ಜೆಡಿ ಕೂಡ ಅದೇ ನಿಲುವನ್ನು ಹೊಂದಿ ದೆ. ಹೀಗಾಗಿ, ಆ ಪಕ್ಷದ ನಾಯಕರ ಹೇಳಿಕೆ ಸ್ವೀಕಾರಾ ರ್ಹವಲ್ಲ ಎಂದರು ಬಿಹಾರ ಡಿಸಿಎಂ ತೇಜಸ್ವಿ.

ಹೇಳಿಕೆಗೆ ಬಿಜೆಪಿಯೂ ಟೀಕೆ: ಡಿಎಂಕೆ ನಾಯಕನ ಹೇಳಿಕೆಗೆ ಬಿಹಾರದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  “ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಜೆಡಿಯು ಬಿಹಾರದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ, ರಾಜ್ಯದ ದುಃಸ್ಥಿತಿಯಲ್ಲಿ ಇರುವುದರಿಂದ ಬಿಹಾರ ದವರು ಇತರ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗುವ ಸ್ಥಿತಿ ಇದೆ. ಹಿಂದುಸ್ತಾನ ಒಂದೇ ಯಾರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಬಿಹಾರದ ವರನ್ನು ಅವಮಾನಿಸದಿರಿ’ ಎಂದು ಮಾಜಿ ಸಚಿವ ರವಿಶಂಕರ ಪ್ರಸಾದ್‌ ತಿರುಗೇಟು ನೀಡಿದ್ದಾರೆ.

ಬಿಜೆಪಿಯನಾಯಕ ಶೆಹಜಾದ್‌ ಪೂನಾವಾಲಾ ಟ್ವೀಟ್‌ ಮಾಡಿ ಡಿಎಂಕೆ ನಾಯಕರಿಗೆ ವಿವಾದ ಎಬ್ಬಿ ಸುವುದೇ ಹವ್ಯಾಸ. ಆರಂಭದಲ್ಲಿ ಸನಾತನ ಧರ್ಮ ಬಗ್ಗೆ ಮಾತನಾಡಿದರು. ಇದರ ಹೊರತಾಗಿ ಯೂ ಕೈ ನಾಯಕರು  ಏಕೆ ಮೌನವಾಗಿದ್ದಾರೆ ಎಂದಿದ್ದಾರೆ.

ಡಿಎಂಕೆ, ಆರ್‌ಜೆಡಿ ಸಾಮಾಜಿಕ ನ್ಯಾಯದ ಮಾತಾಡುತ್ತಿವೆ. ಅಂಥ ಪಕ್ಷದ ನಾಯಕರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅದನ್ನು ನಾವು ಖಂಡಿಸುತ್ತೇವೆ.

ತೇಜಸ್ವಿ ಯಾದವ್‌, ಬಿಹಾರ ಡಿಸಿಎಂ

ಬಿಹಾರದಲ್ಲಿನ ದುಃಸ್ಥಿತಿಯಿಂದಾಗಿ ನಮ್ಮ ರಾಜ್ಯದವರು ಬೇರೆ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹಾಗೆಂದು ನಮ್ಮವರನ್ನು ಅವಮಾನ ಮಾಡುವುದು ಬೇಡ.

ರವಿಶಂಕರ್‌ ಪ್ರಸಾದ, ಮಾಜಿ ಸಚಿವ

ನಮ್ಮ ಪಕ್ಷ ಸಮಾನ ಸಮಾಜ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ತಮಿಳುನಾಡು ಹೆಚ್ಚು, ಮತ್ತೂಂದು ರಾಜ್ಯ ಕನಿಷ್ಠ ಎಂಬ ಭಾವನೆ ನಮ್ಮದಲ್ಲ. ಮಾರನ್‌ ಆ ರೀತಿ ಮಾತಾಡುವವರೇ ಅಲ್ಲ. ಬಿಜೆಪಿಯವರು ಹಳೆಯ ಹೇಳಿಕೆಯನ್ನು ಜಾಲತಾಣಗಳಲ್ಲಿ ವೈರಲ್‌ ಮಾಡಿ ಅಪಪ್ರಚಾರ ಮಾಡಿದ್ದಾರೆ.

ಜೆ.ಸಿ.ರವೀಂದ್ರನ್‌, ಡಿಎಂಕೆ ವಕ್ತಾರ

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.