“ಕಂಟೆಂಟ್ ಇಷ್ಟವಾಗದಿದ್ದರೆ ಕೆಲಸ ಬಿಡಿ’
ನೆಟ್‌ಫ್ಲಿಕ್ಸ್‌ನಲ್ಲಿ ಸಂಸ್ಕೃತಿ ವಿಚಾರದಲ್ಲಿ ಮಾರ್ಗಸೂಚಿ
Team Udayavani, May 17, 2022, 5:50 AM IST
ವಾಷಿಂಗ್ಟನ್: ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್ ಗಾಗಿ ಸಂಸ್ಕೃತಿಯ ವಿಚಾರದಲ್ಲಿ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ಸಂಸ್ಥೆಯ ಸಿಬಂದಿಗೆ ನೆಟ್‌ಫ್ಲಿಕ್ಸ್ ರಚಿಸುವ ಕಂಟೆಂಟ್ ಇಷ್ಟವಾ ಗುವುದಿಲ್ಲ ಎಂದಾ ದರೆ ಅವರು ಧಾರಾ ಳವಾಗಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸ ಬಹುದು ಎಂದು ಸೂಚಿಸಲಾಗಿದೆ.
“ಆರ್ಟಿಸ್ಟಿಕ್ ಎಕ್ಸ್‌ಪ್ರೆಷನ್’ ಹೆಸರಿನ ಹೊಸ ವಿಭಾಗವನ್ನು ನೆಟ್‌ಫ್ಲಿಕ್ಸ್ ಆರಂಭಿಸಿದ್ದು, ಅದರ ಮೂಲಕ ವೈವಿಧ್ಯಮಯ ಕಥೆಗಳನ್ನು ಜನರಿಗೆ ನೀಡುವುದಾಗಿ ಹೇಳಿದೆ.
“ನಮ್ಮ ವೈಯಕ್ತಿಕ ಮೂಲಗಳಿಗೇ ವಿರುದ್ಧವಾಗಿರುವ ಕಥೆಯೇ ಆಗಿದ್ದರೂ, ಅದರ ಬಗ್ಗೆ ಬೇರೆ ಯೋಚಿಸದೆ ಜನರೆದುರು ತರಲು ಇಚ್ಛಿಸುತ್ತೇವೆ’ ಎಂದು ಹೇಳಿಕೊಂಡಿದೆ. ಇದರ ಬಗ್ಗೆ ಸಾಕಷ್ಟು ಸಿಬಂದಿಯ ವಿರೋಧ ವ್ಯಕ್ತವಾಗುವ ಹಿನ್ನೆಲೆ ಸಂಸ್ಥೆ ಅಂಥವರಿಗೆ “ಕಷ್ಟಪಟ್ಟು ಕೆಲಸ ಮಾಡಬೇಡಿ. ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಡಿ’ ಎಂದಿದೆ. ಸಂಸ್ಥೆಯ ಈ ನಿರ್ಧಾರವನ್ನು ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಬೆಂಬಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮೆರಿಕ ಸ್ವಾತಂತ್ರ್ಯೋತ್ಸವ ಪರೇಡ್ ಮೇಲೆ ಗುಂಡಿನ ದಾಳಿ: ಆರು ಮಂದಿ ಸಾವು
ಸೇನಾ ಹೆಲಿಕಾಪ್ಟರ್ನಲ್ಲಿ ತನ್ನ ಪತ್ನಿಯನ್ನು ಕರೆತಂದ ತಾಲಿಬಾನಿ ಸೈನಿಕ
ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಧುವನ್ನು ಕರೆತಂದ ತಾಲಿಬಾನ್ ಕಮಾಂಡರ್!
ಆರ್ಥಿಕ ಬಿಕ್ಕಟ್ಟು-ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ; ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ