US: ಅಮೆರಿಕ ಚುನಾವಣೆ ಪ್ರೈಮರಿಗೆ ಸ್ಪರ್ಧೆ- ಮಾಜಿ ಅಧ್ಯಕ್ಷ ಟ್ರಂಪ್ಗೆ ಮಿಶ್ರ ಫಲಿತಾಂಶ
ಮೈನ್ ಪ್ರಾಂತ್ಯ ಸರ್ಕಾರದ ನಿಷೇಧ; ಕ್ಯಾಲಿಫೋರ್ಮಿಯಾ ಬೆಂಬಲ
Team Udayavani, Dec 29, 2023, 8:14 PM IST
ವಾಷಿಂಗ್ಟನ್: ಮುಂದಿನ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸಿಹಿ ಮತ್ತು ಕಹಿ ಫಲಿತಾಂಶ ಲಭ್ಯವಾಗಿದೆ.
2021ರ ಕ್ಯಾಪಿಟೊಲ್ ಹಿಲ್ ದಂಗೆಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣೆ ಸ್ಪರ್ಧೆಯ ಮೊದಲ ಹಂತ ಪ್ರೈಮರಿಯಲ್ಲಿ ಭಾಗವಹಿಸದಂತೆ ಮೇನ್ ಪ್ರಾಂತ್ಯದ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮೂಲಕ ಟ್ರಂಪ್ ಸ್ಪರ್ಧೆ ಕುರಿತಂತೆ ಅಮೆರಿಕದ ಸುಪ್ರೀಂಕೋರ್ಟ್ ನಿರ್ಧಾರ ಪ್ರಕಟಿಸುವ ಮುನ್ನವೇ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕಾರ್ಯಾಲಯವು ಇದಾಗಿದೆ.
ರಾಜ್ಯ ಕಾರ್ಯದರ್ಶಿ ಶೆನ್ನಾ ಬೆಲ್ಲೋಸ್ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಟ್ರಂಪ್ ಅವರು ಸ್ಪರ್ಧಿಸಬೇಕೆ ? ಬೇಡವೇ ಎನ್ನುವ ಅಂತಿಮ ನಿರ್ಧಾರ ಸುಪ್ರೀಂಕೋರ್ಟ್ನದ್ದೇ ಆಗಿದೆ. ಆದಾಗ್ಯೂ, ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.
ಕೊಲರಾಡೋ ಸುಪ್ರೀಂಕೋರ್ಟ್ ಟ್ರಂಪ್ ಅವರನ್ನು ಅಧ್ಯಕ್ಷೀಯ ಚುನಾವಣೆಯಿಂದ ನಿರ್ಬಂಧಿಸಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಪ್ರಾಂತೀಯ ಸರ್ಕಾರದ ತೀರ್ಮಾನವನ್ನು ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಟ್ರಂಪ್ರ ಕಾನೂನು ತಂಡ ಹೇಳಿದೆ
ಕ್ಯಾಲಿಫೋರ್ನಿಯಾದಲ್ಲಿ ಜಯ:
ಮೇನ್ ಹಾಗೂ ಕೊಲರಾಡೋ ಪ್ರಾಂತ್ಯಗಳಲ್ಲಿ ನಿರ್ಬಂಧ ಬಿದ್ದಿರುವ ನಡುವೆಯೇ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಟ್ರಂಪ್ಗೆ ಸ್ಪರ್ಧಿಸಲು ಅನುವು ಮಾಡಿಕೊಡಲು ತೀರ್ಮಾನಿಸಿದೆ. ಈ ಕುರಿತಂತೆ ಪ್ರಾಂತ್ಯದ ಕಾರ್ಯದರ್ಶಿ ಡಾ. ಶೆರ್ಲಿ ವೆಬರ್ ಮಾತನಾಡಿ ಅಧ್ಯಕ್ಷೀಯ ಅಭ್ಯರ್ಥಿಗಳು ಸ್ಪರ್ಧಿಸಬೇಕೆ ? ಬೇಡವೇ ಎಂಬುದನ್ನು ನ್ಯಾಯಾಲಯಗಳು ಮಾತ್ರವೇ ತೀರ್ಮಾನಿಸಬಹುದು. ಎಂದಿದ್ದಾರೆ. 2 ದಿನಗಳ ಹಿಂದಷ್ಟೇ ಮಿಚಿಗನ್ ಸುಪ್ರೀಂಕೋರ್ಟ್ ಟ್ರಂಪ್ ಪರ ತೀರ್ಮಾನ ಕೈಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’