Ranking: 4ನೇ ಸ್ಥಾನಕ್ಕೆ ಏರಿದ ಸ್ಮತಿ ಮಂಧನಾ
Team Udayavani, Feb 13, 2024, 11:12 PM IST
ದುಬಾೖ: ವನಿತಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ 2 ಸ್ಥಾನಗಳ ಪ್ರಗತಿ ಸಾಧಿಸಿ 4ನೇ ಸ್ಥಾನಕ್ಕೆ ಏರಿದ್ದಾರೆ. ಅವರು 696 ಅಂಕ ಹೊಂದಿದ್ದಾರೆ.
ಇಂಗ್ಲೆಂಡ್ನ ನ್ಯಾಟ್ ಸ್ಕಿವರ್ ಬ್ರಂಟ್ (807), ಶ್ರೀಲಂಕಾದ ಚಾಮರಿ ಅತಪಟ್ಟು (736) ಮತ್ತು ಆಸ್ಟ್ರೇಲಿಯದ ಬೆತ್ ಮೂನಿ (717) ಕ್ರಮವಾಗಿ ಮೊದಲ 3 ಸ್ಥಾನದಲ್ಲಿದ್ದಾರೆ.
ಟಾಪ್-10 ಯಾದಿಯಲ್ಲಿರುವ ಭಾರತದ ಮತ್ತೋರ್ವ ಆಟಗಾರ್ತಿ ಹರ್ಮನ್ಪ್ರೀತ್ ಕೌರ್. ಅವರು 10ನೇ ಸ್ಥಾನಿಯಾಗಿದ್ದಾರೆ (639).
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಸೋಫಿ ಎಕ್ಲ್ಸ್ಟೋನ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ದೀಪ್ತಿ ಶರ್ಮ ಒಂದು ಸ್ಥಾನ ಕುಸಿದಿದ್ದು, 4ನೇ ಸ್ಥಾನಿಯಾಗಿದ್ದಾರೆ. ಆದರೆ ಏಕದಿನ ಆಲ್ರೌಂಡರ್ಗಳ ಯಾದಿಯಲ್ಲಿ ದೀಪ್ತಿ ಶರ್ಮ ಒಂದು ಸ್ಥಾನ ಮೇಲೇರುವಲ್ಲಿ ಯಶಸ್ವಿಯಾಗಿದ್ದಾರೆ (5).
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಮೋಘ ಪ್ರಗತಿ ಕಂಡವರು ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್. 7 ಸ್ಥಾನ ನೆಗೆದ ಕಾಪ್ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ.