SBI: ನಿವ್ವಳ ಲಾಭ 9.13% ಏರಿಕೆ
Team Udayavani, Nov 4, 2023, 9:02 PM IST
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ನಿವ್ವಳ ಲಾಭವು ಸೆಪ್ಟೆಂಬರ್ಗೆ ಕೊನೆಗೊಂಡ ತ್ತೈಮಾಸಿಕದಲ್ಲಿ ಶೇ.9.13ರಷ್ಟು ಏರಿಕೆಯಾಗಿದ್ದು, 16,099 ಕೋಟಿ ರೂ.ಗಳಿಗೆ ತಲುಪಿದೆ. ಹೀಗೆಂದು ಸಂಸ್ಥೆಯ 2023-24ನೇ ಆರ್ಥಿಕ ವರ್ಷದ ದ್ವಿತೀಯ ತ್ತೈಮಾಸಿಕದ ಆರ್ಥಿಕ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ 14,752 ಕೋಟಿ ರೂ.ಗಳಾಗಿತ್ತು ಎನ್ನಲಾಗಿದೆ. ಇನ್ನು ಸಂಸ್ಥೆಯ ಒಟ್ಟು ಆದಾಯ ಕೂಡ ಹೆಚ್ಚಳವಾಗಿದೆ. ಕಳೆದವರ್ಷ 88,733 ಕೋಟಿ ರೂ.ಗಳಿದ್ದ ಆದಾಯ ಪ್ರಸಕ್ತ 1.12 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.