SC: ದೇಶದಲ್ಲಿ ಮದುವೆ ಪದ್ಧತಿ ಉಳಿಯಲಿ: ಸುಪ್ರೀಂ ಆಶಯ
ವಿವಾಹೇತರ ಸಂಬಂಧದ ಮಕ್ಕಳ ಸಂಸ್ಕೃತಿ ಬೇಡ
Team Udayavani, Feb 7, 2024, 12:08 AM IST
ನವದೆಹಲಿ: ಭಾರತ ಪಾಶ್ಚಿಮಾತ್ಯ ದೇಶ ಗಳಂತೆ ಅಲ್ಲ. ಈ ದೇಶದಲ್ಲಿ ಮದುವೆ ಎಂಬ ಪವಿತ್ರ ಪದ್ಧತಿ ಉಳಿಸಿಕೊಳ್ಳಬೇ ಕಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಿವಾಹೇತರ ಸಂಬಂಧ ದಿಂದ ಮಕ್ಕಳು ಜನಿಸುವುದು ಸಾಮಾನ್ಯವೇ ಆದರೂ, ಅದು ನಮ್ಮ ದೇಶಕ್ಕೆ ಹೇಳಿದ್ದಲ್ಲವೆಂದು ನ್ಯಾ.ಬಿ. ವಿ.ನಾಗರತ್ನ ಮತ್ತು ನ್ಯಾ.ಅಗಸ್ಟಿನ್ ಜಾರ್ಜ್ ಮಸೀಹ್ ನೇತೃತ್ವದ ನ್ಯಾಯಪೀಠ ಪ್ರತಿಪಾದಿಸಿದೆ.
ಬಾಡಿಗೆ ತಾಯಿ ಮೂಲಕ ಮಗು ಹೊಂದಲು ಅವಕಾಶ ಕೊಡಬೇಕು ಎಂದು 44 ವರ್ಷದ ಅವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಮ್ಮನ್ನು ಸಂಪ್ರ ದಾಯವಾದಿಗಳೆಂದು ಕರೆದರೂ ಚಿಂತಿಲ್ಲ, ಮದುವೆ ವ್ಯವಸ್ಥೆ ಮುಂದುವರಿಯ ಬೇಕು ಎಂದು ನ್ಯಾ.ನಾಗರತ್ನ ಹೇಳಿ ದ್ದಾರೆ. ಅವಿವಾಹಿತ ಮಹಿಳೆ ಬಾಡಿಗೆ ತಾಯಿ ಮೂಲಕ ಮಗು ಹೊಂದುವ ಬಗ್ಗೆ ಸದ್ಯ ಅನು ಮತಿ ಅಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?