ನಿರ್ದಿಷ್ಟ ಕ್ಷೇತ್ರಗಳಿಗೆ ಪ್ರತ್ಯೇಕ ಮಾರ್ಗಸೂಚಿ


Team Udayavani, Jun 15, 2020, 6:37 AM IST

anil bbmp

ಲಾಕ್‌ಡೌನ್‌ ಸಂಪೂರ್ಣ ತೆರವಾದ ನಂತರದಿಂದ ನಗರದಲ್ಲಿ ಕೊರೊನಾ ಹಾವಳಿ ತೀವ್ರಗೊಂಡಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹೆಚ್ಚು ಜನಸಂದಣಿ ಹಾಗೂ ಸೋಂಕಿನ ಸಾಧ್ಯತೆಗಳಿರುವ ಕ್ಷೇತ್ರಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಂಟೈನ್ಮೆಂಟ್‌ ವಲಯದಲ್ಲಿರುವಂತಹ ಕಚೇರಿ, ಉದ್ಯಾನ, ದೇವಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ಸ್ಯಾನಿಟೈಸರ್‌ ಬಳಕೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಮಾಸ್ಕ್, ಕವರ್‌, ಕೈಗವಸುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳಿಗೆ ನಿರ್ಬಂಧ. ಥರ್ಮಲ್‌ ಸ್ಕ್ರೀನಿಂಗ್‌ ಸೇರಿದಂತೆ ಕೆಲವು ಸಾಮಾನ್ಯ ನಿರ್ದೇಶನಗಳನ್ನು ನೀಡಿದೆ. ಜತೆಗೆ ನಿರ್ದಿಷ್ಟ ಕ್ಷೇತ್ರಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಹೊರಡಿಸಿದ್ದಾರೆ. ಅವುಗಳ ವಿವರ ಹೀಗಿದೆ.

ಉದ್ಯಾನಗಳು
* ಕಂಟೈನ್ಮೆಂಟ್‌ ವಲಯ‌ಲ್ಲಿನ ಉದ್ಯಾನಗಳು ಬಂದ್‌.
* ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದು, ಸಭೆ ನಡೆಸುವಂತಿಲ್ಲ, ಉಗುಳುವಂತಿಲ್ಲ.
* 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, 10 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧ.
* ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮುಖಗವಸು ಕಡ್ಡಾಯ, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸತಕ್ಕದ್ದು.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ಸಂಬಂಧಪಟ್ಟ ಇಲಾಖೆ ನಿಯೋಜಿಸಬೇಕು.
* ಉದ್ಯಾನದಲ್ಲಿ ಗುರುತು ಮಾಡಿದ ಆಸನಗಳಲ್ಲಿಕುಳಿತುಕೊಳ್ಳಬೇಕು.
* ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಅಲ್ಲಲ್ಲಿ ಫ‌ಲಕಗಳನ್ನು ಹಾಕಿರಬೇಕು.

ಸಲೂನ್‌/ ಪಾರ್ಲರ್‌
* ಮುಂಚಿತವಾಗಿ ಅಪಾಯಿಂಟ್‌ಮೆಂಟ್‌ ಹೊಂದಿದವರಿಗೆ ಮಾತ್ರ ಹೇರ್‌ಕಟ್‌, ಪಾರ್ಲರ್‌ ಒಳಗೆ ಪ್ರವೇಶ ಭಾಗ್ಯ. ಅದೂ ಸೀಮಿತ! .
* ಗ್ರಾಹಕರಿಗೆ ಸೇವೆಗೆ ನಿರ್ದಿಷ್ಟ ಸಮಯವನ್ನು ನೀಡಬೇಕು. ಆ ಮೂಲಕ ಅಂಗಡಿಯಲ್ಲಿ ಕಾಯುವಿಕೆ ಯನ್ನು ಸಾಧ್ಯವಾದಷ್ಟು ಇಲ್ಲದಂತೆ ನೋಡಿಕೊಳ್ಳಬೇಕು .
* ಕಾರ್ಯನಿರ್ವಹಿಸುವವರಿಗೂ ಶುಚಿತ್ವಕ್ಕಾಗಿ ಹಾಗೂ ಬಳಕೆ ಮಾಡಿದ ಉಪಕರಣಗಳಉಪಯೋಗಿಸಲು ನಿರ್ದಿಷ್ಟ ಸಮಯ ಮೀಸಲಿಡತಕ್ಕದ್ದು.
* ಗ್ರಾಹಕರು ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕು.
* ಸಲೂನ್‌/ ಪಾರ್ಲರ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮುಖಗವಸು, ಕೈಗವಸು, ಶೀಲ್ಡ್‌ (ವೈಸರ್‌) ಧರಿಸಿರಬೇಕು.
* ಗ್ರಾಹಕರಿಗೆ ಉಪಯೋಗಿಸುವ ಗೌನ್‌, ಕೊರಳಿಗೆ ಹಾಕುವ ಪಟ್ಟಿ ಪ್ರತಿ ಬಾರಿ ಬದಲಾಯಿಸಬೇಕು.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ
* ಸಾಮೂಹಿಕ ಸಭೆಗಳನ್ನು ನಡೆಸಬಾರದು
* ಹೊರಭಾಗಗಳಿಂದ ಬರುವ ಚಾಲಕರು, ಸಹಾಯಕರು ಬರುವ ದ್ವಾರಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕು. ಜತೆಗೆ, ಸ್ಯಾನಿಟೈಜರ್‌ ಹಾಗೂ ಸೋಪ್‌ ನೀಡುವ ಮೂಲಕ ಕೈತೊಳೆದುಕೊಳ್ಳಲು ವ್ಯವಸ್ಥೆ ಮಾಡಬೇಕು.
* ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ನಿಗದಿತ ಸ್ಥಳ ಗುರುತಿಸಬೇಕು.
* ವ್ಯಾಯಾಮ ಶಾಲೆಗಳು, ಈಜು ಕೊಳಗಳು, ರಿಕ್ರಿಯೇಷನ್‌ ಕ್ಲಬ್‌ಗಳು ಮತ್ತು ಕ್ರೀಡಾ ಚಟುವಟಿಕೆಗಳಿಗಿಲ್ಲ ಅವಕಾಶ.
* ಹೋಂ ಕ್ವಾರಂಟೈನ್‌ಗೆ ಒಳಗಾಗಿರುವವರು ಮನೆಯಿಂದ ಹೊರಬರದಂತೆ ಸಂಘಗಳ ಸದಸ್ಯರು ಕ್ರಮ ವಹಿಸಬೇಕು.
* ತಾವು ನೆಲೆಸಿರುವ ಸ್ಥಳಗಳಲ್ಲಿ ಯಾರಿಗಾದರೂ ಕೊರೋನಾ ಸೋಂಕು ಹರಡಿರುವುದು ಪತ್ತೆಯಾದಲ್ಲಿ ಅಂತಹವರನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ವಹಿಸಬೇಕು.
* ಪರೀಕ್ಷೆಗೆ ಹೋಗಲು ಅಗತ್ಯ ವಾಹನ ಸೌಲಭ್ಯ ಕಲ್ಪಿಸಬೇಕು.

ಧಾರ್ಮಿಕ ಕೇಂದ್ರಗಳು
* ದೇವಾಲಯಗಳಲ್ಲಿ ದೇವರ ಮೂರ್ತಿಗಳು, ಕಂಬಗಳನ್ನು ಸ್ಪರ್ಶಿಸುವುದು ನಿಷಿದ್ಧ. ಭಜನೆಗಿಲ್ಲ ಅವಕಾಶ.
* ಒಬ್ಬರನ್ನೊಬ್ಬರು ಸ್ಪರ್ಶ ಮಾಡದೆ ದೂರದಿಂದಲೇ ಶುಭಾಶಯ ಕೋರಬೇಕು.
* ಸಾಮೂಹಿಕ ಪ್ರಾರ್ಥನೆಗೆ ಭಕ್ತರು ತಮ್ಮ ಮನೆಗಳಿಂದಲೇ ನೆಲಹಾಸು ತರಬೇಕು.
* ಪ್ರಸಾದ ಮತ್ತು ತೀರ್ಥ ಕೊಡುವಂತಿಲ್ಲ.
* ಒಬ್ಬರಿಗೊಬ್ಬರು ಆರು ಅಡಿ ದೂರಲ್ಲಿನಿಲ್ಲುವುದಕ್ಕೆ ವ್ಯವಸ್ಥೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಅಳವಡಿಸಿರಬೇಕು.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡುವುದಕ್ಕಾಗಿ ಹೆಚ್ಚು ಸಿಬ್ಬಂದಿ ನೇಮಕ ಮಾಡಬೇಕು.
* ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಮತ್ತು ದೇವಾಲಯಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಪ್ರತ್ಯೇಕ ದ್ವಾರಗಳನ್ನು ಬಳಸಬೇಕು.
* ಹೆಚ್ಚು ಜನ ಪ್ರವೇಶಕ್ಕೆ ಅವಕಾಶ ನೀಡದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು.
* ದ್ವಾರಗಳಲ್ಲಿ ಥರ್ಮಲ್‌ ಸ್ಕ್ರೀನಿನಂಗ್‌ ಮಾಡಿ ಒಳ ಪ್ರವೇಶಕ್ಕೆ ಅವಕಾಶ ನೀಡಬೇಕು. ಜತೆಗೆ, ಹೆಚ್ಚು ಜ್ವರ ಹಾಗೂ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಒಳ ಪ್ರವೇಶಕ್ಕೆ ಅವಕಾಶ ನೀಡಬಾರದು.
* ದೇವಾಲಯದ ಆವರಣವನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಬಾಗಿಲ ಹಿಡಿಕೆ, ಎಲಿವೇಟರ್‌ಗಳ ಬಟನ್‌ಗಳು, ಕೈ ಹಿಡಿಕೆಗಳು ಮತ್ತು ಮೇಜುಗಳನ್ನು ಸ್ವಚ್ಛಗೊಳಿಸುತ್ತಿರಬೇಕು.
* ದೇವಾಲಯಗಳಿಗೆ ಭಕ್ತರ ಕುಟುಂಬಗಳಿಗೆ ತಮ್ಮ ಪಾದರಕ್ಷೆಗಳನ್ನು ಬಿಡುವುದಕ್ಕಾಗಿ ಪ್ರತ್ಯೇಕವಾಗಿ ಸ್ಲಾಟ್‌ಗಳನ್ನು ಒದಗಿಸಬೇಕು.
* ಭಕ್ತರು ಉಸಿರಾಡುವಾಗ ಪಕ್ಕದವರಿಗೆ ತೊಂದರೆಯಾಗದ ರೀತಿಯಲ್ಲಿ ಮೂಗು ಮತ್ತು ಬಾಯಿ ಮುಚ್ಚುವಂತೆಹ ಮಾಸ್ಕ್ಗಳನ್ನು ಅಳವಡಿಸಬೇಕು.
* ಎಲ್ಲಿಯೂ ಉಗುಳುವಂತಿಲ್ಲ
* ವಾಹನ ನಿಲ್ದಾಣಗಳಲ್ಲಿ ಸಿಬ್ಬಂದಿ ಮಾಸ್ಕ್ ಹಾಕಿರಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೋಂಕು ಹರಡದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು.
* ಹವಾನಿಯಂತ್ರಣಾ ವ್ಯವಸ್ಥೆಯನ್ನು 24 ಡಿಗ್ರಿಯಿಂದ 30 ಡಿಗ್ರಿಯವರೆಗಿನ ಒಳಗಡೆ ಸೆಲ್ಸಿಯಸ್‌ನಷ್ಟು ಮಾತ್ರ ಇರಬೇಕು. ಶೇ. 70ರಷ್ಟು ಪ್ರಮಾಣದ ಶುದ್ದಗಾಳಿ ಉಸಿರಾಟಕ್ಕೆ ವ್ಯವಸ್ಥೆ ಮಾಡಬೇಕು.

ಕಚೇರಿಗಳ ನಿರ್ವಹಣೆ ಹೀಗಿರಲಿ
* ಕಂಟೈನ್ಮೆಂಟ್‌ ವಲಯದಲ್ಲಿದ್ದ ಕಚೇರಿಗಳನ್ನು ತೆರೆಯುವಂತಿಲ್ಲ.
* ಉಳಿದ ಕಡೆ 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಮಕ್ಕಳು ಕಚೇರಿಗೆ ಬರುವುದನ್ನು ನಿಯಂತ್ರಿಸಬೇಕು.
* ಸಾಧ್ಯವಾದಷ್ಟು ಮನೆಯಲ್ಲೇ ಕೆಲಸ ಮಾಡುವುದು ಆದ್ಯತೆಯಾಗಲಿ.
* ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಗಳನ್ನು ನಡೆಸಬೇಕು.
* ಕಚೇರಿ ಪ್ರವೇಶ ಮತ್ತು ಹೊರ ಹೋಗಲು ಪ್ರತ್ಯೇಕ ದ್ವಾರಗಳನ್ನು ತೆರೆಯಬೇಕು.
* ಲಿಫ್ಟ್, ಎಸ್ಕಲೇಟರ್‌, ಕೆಲಸ ಮಾಡುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು.
* ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು.

ಕ್ಲಿನಿಕ್‌ಗಳು
* ರೋಗಿಗಳಿಗೆ ಟೆಲಿಕನ್ಸಲ್ಟೆàಷನ್‌ ಸೂಕ್ತ, ಅಗತ್ಯ ಇದ್ದರೆ ಮಾತ್ರ ಕ್ಲಿನಿಕ್‌ಗೆ ಕರೆಸಿಕೊಳ್ಳಬೇಕು .
* ತಪಾಸಣೆ ವೇಳೆ ಒಬ್ಬರಿಗೆ ಪ್ರವೇಶಕ್ಕೆ ಅವಕಾಶ ನೀಡುವುದು.
*  ಇಎನ್‌ಟಿ ವೈದ್ಯರು ಕಿಟ್‌ ಧರಿಸಬೇಕು.
* ಊಟ ಮಾಡುವಾಗ, ನೀರು ಕುಡಿಯುವಾಗ ಹ್ಯಾಂಡ್‌ ಗ್ಲೌಸ್‌ ಬದಲಿಸಬೇಕು.
* ಎಂಡೋಸ್ಕೋಪಿ ಪರೀಕ್ಷೆಯನ್ನು ಆದಷ್ಟು ತಡೆಯಬೇಕು. ತುರ್ತು ಎನಿಸಿದರೆ ಮುನ್ನೆಚ್ಚರಿಕೆ ವಹಿಸಬೇಕು.
* 65 ವರ್ಷ ಮೇಲ್ಪಟ್ಟವರು, ಮಕ್ಕಳು ಮತ್ತು ಗರ್ಭಿಣಿಯರು ಕ್ಲಿನಿಕ್‌ಗಳಿಗೆ ಬರುವುದನ್ನು ಆದಷ್ಟು ತಡೆಯಬೇಕು.

ಹೋಟೆಲ್‌, ಮಾಲ್‌ಗ‌ಳು
* ಕುರ್ಚಿ, ಬೆಂಚ್‌, ಎಲಿವೇಟರ್‌, ಲಿಫ್ಟ್ಗಳ ಸ್ವಿಚ್‌ ಹ್ಯಾಂಡ್‌ ಡ್ರೆç ಕ್ಲೀನರ್‌ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು .
* ಹೆಚ್ಚು ಜನ ಬಳಸುವ ಪ್ರದೇಶ, ನೀರು ಕುಡಿಯುವ ಜಾಗ, ಶೌಚಾಲಯ ಹಾಗೂ ಕೌಂಟರ್‌ ಮುಂಭಾಗದಲ್ಲಿ ಸೋಂಕು ನಿರೋಧಕ ದ್ರಾವಣ ಬಳಸಿ ಸ್ವಚ್ಛ ಕಾಪಾಡಿಕೊಳ್ಳುವುದು.
* ಫ‌ುಡ್‌ಕೋರ್ಟ್‌ ಪ್ರದೇಶದಲ್ಲಿ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕೊಡಬೇಕು .
* ನಗದು ಪಾವತಿ ಹಾಗೂ ಊಟ, ತಿಂಡಿಗಳ ಆರ್ಡರ್‌ ಮಾಡಲು ಇ-ತಂತ್ರಾಂಶ ಬಳಸಿಕೆಗೆ ಉತ್ತೇಜನ ನೀಡಬೇಕು.
* ಗ್ರಾಹಕರು ಟೇಬಲ್‌ ಖಾಲಿ ಮಾಡಿದ ಮೇಲೆ ಪ್ರತಿ ಬಾರಿಯೂ ಟೇಬಲ್‌ ಹಾಗೂ ಕುರ್ಚಿಗಳನ್ನು ಸ್ಯಾನಿಟೈಸ್‌ ಮಾಡಬೇಕು.
* ಗ್ರಾಹಕರು ಊಟ, ತಿಂಡಿ ಸೇವನೆ, ನೀರು ಮತ್ತು ಪಾನೀಯ ಕುಡಿಯುವ ಸಂದರ್ಭಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.