ಟೋಕಿಯೊ ಒಲಿಂಪಿಕ್ ಟಿಕೆಟ್ ಪಡೆದ ಭಾರತೀಯರಿಂದ ಶೂಟಿಂಗ್ ಅಭ್ಯಾಸ
Team Udayavani, Jul 10, 2020, 5:45 AM IST
ಹೊಸದಿಲ್ಲಿ: ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಕೂಟದ ಅರ್ಹತೆ ಪಡೆದ ಭಾರತದ ರೈಫಲ್ ಶೂಟರ್ಗಳಾದ ದಿವ್ಯಾಂಶ್ ಪನ್ವಾರ್, ದೀಪಕ್ ಕುಮಾರ್ ಮತ್ತು ಸ್ಕೀಟ್ ಶೂಟರ್ ಮಿರಾಜ್ ಅಹ್ಮದ್ ಖಾನ್ ಇಲ್ಲಿನ “ಕರ್ಣಿ ಸಿಂಗ್ ರೇಂಜ್’ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕೋವಿಡ್-19 ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಶೂಟಿಂಗ್ ರೇಂಜ್ನ ಬಾಗಿಲು ತೆರೆದಿದೆ.
ಕೋವಿಡ್ ಮಾರ್ಗಸೂಚಿ
“ನಾವು ಕೋವಿಡ್ ಮಾರ್ಗಸೂಚಿಯಂತೆ, ಇಬ್ಬರ ನಡುವೆ 5 ಲೇನ್ಗಳ ಅಂತರ ಕಾಯ್ದುಕೊಂಡು ಅಭ್ಯಾಸ ನಡೆಸುತ್ತಿದ್ದೇವೆ. ಇಲ್ಲಿ 10 ಅಡಿಗಳಷ್ಟು ಅಂತರ ವಿದೆ. ಎಲ್ಲರೂ ತಮಗಾಗಿ ನಿರ್ಮಿಸಲಾದ ಬ್ಯಾರಿಕೇಡ್ಗಳಲ್ಲೇ ನಿಲ್ಲುತ್ತೇವೆ’ ಎಂದು ದೀಪಕ್ ಕುಮಾರ್ ಹೇಳಿದರು.
ವಿಶ್ವದ ನಂ.1 ಏರ್ ರೈಫಲ್ ಶೂಟರ್ ದಿವ್ಯಾಂಶ್ ಪನ್ವಾರ್ ಮತ್ತು ಅವರ ಕೋಚ್ ದೀಪಕ್ ದುಬೆ ಬೆಳಗ್ಗೆ ಆಗಮಿಸಿ ಸತತ 4 ಗಂಟೆಗಳ ಕಾಲ ಅಭ್ಯಾಸ ನಡೆಸಿದರು. ಇಲ್ಲಿಯ ತನಕ ಪನ್ವಾರ್ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದರು.
“ಶೂಟಿಂಗ್ ರೇಂಜ್ಗೆ ಮರಳಿದ್ದಕ್ಕಾಗಿ ಪನ್ವಾರ್ಗೆ ಬಹಳ ಖುಷಿಯಾಗಿದೆ. ಅವರು 90 ಸುತ್ತುಗಳ ಅಭ್ಯಾಸ ನಡೆಸಿದರು. ಇಲ್ಲಿ ಎಂದಿನ ಜನಸಂದಣಿ ಇರ ಲಿಲ್ಲ. ಇಡೀ ಹಾಲ್ನಲ್ಲಿ ಇಬ್ಬರೇ ಶೂಟರ್ಗಳಿದ್ದರು’ ಎಂದು ಕೋಚ್ ದೀಪಕ್ ದುಬೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ