ಸ್ಲೊವೇನಿಯ ಸೋಂಕು ಮುಕ್ತ ಘೋಷಣೆ
Team Udayavani, May 17, 2020, 12:58 PM IST
ಜುಬ್ಲುಜನ : ಯುರೋಪಿನ ಪುಟ್ಟ ರಾಷ್ಟ್ರ ಸ್ಲೋವೇನಿಯ ತಾನು ಕೋವಿಡ್ ಸೋಂಕು ಮುಕ್ತವಾಗಿದ್ದೇನೆ ಎಂದು ಘೋಷಿಸಿಕೊಂಡು ದೇಶದ ಗಡಿಗಳನ್ನು ತೆರೆಯು ನಿರ್ಧಾರ ಮಾಡಿದೆ.
ಯುರೋ ಪಿನಲ್ಲೇ ಸ್ಲೋವೇನಿಯದ ಸ್ಥಿತಿ ಈಗ ಅತ್ಯುತ್ತಮವಾಗಿದೆ. ಹೀಗಾಗಿ ನಾವು ಸಂಚಾರ ನಿರ್ಬಂಧಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಪ್ರಧಾನಿ ಜನೆಜ್ ಜನ್ಸ ಹೇಳಿದ್ದಾರೆ.
ಇಟಲಿ, ಆಸ್ಟ್ರಿಯ, ಕ್ರೊವೇಷ್ಯಾ ಮತ್ತು ಹಂಗೇರಿ ದೇಶಗಳ ಜತೆಗೆ ಭೂಗಡಿ ಹಂಚಿಕೊಂಡಿರುವ ಸ್ಲೋವೇನಿಯ 20 ಲಕ್ಷ ಜನಸಂಖ್ಯೆ ಹೊಂದಿದೆ.
1465 ಸೋಂಕಿನ ಪ್ರಕರಣಗಳು ದೃಢಪಟ್ಟು 103 ಮಂದಿ ಸಾವನ್ನಪ್ಪಿದ್ದಾರೆ.
ವೈರಸ್ ಹರಡುವುದು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಲೋವೇನಿಯ ಯುರೋಪಿನ ಜನರ ಪ್ರವೇಶಕ್ಕೆ ಅನುಮತಿ ನೀಡಿದೆ. ಆದರೆ ಐರೋಪೆತರ ದೇಶಗಳಿಂದ ಬಂದವರು ಕ್ವಾರಂಟೈನ್ ಆಗಬೇಕು. ಅದಾಗ್ಯೂ ಸಭೆ ಸಮಾರಂಭಗಳಿಗೆ ನಿರ್ಬಂಧದಂಥ ಕೆಲವು ನಿಯಮಗಳು ಇಲ್ಲಿ ಇನ್ನೂ ಕೆಲ ಸಮಯ ಜಾರಿಯಲ್ಲಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ